Asianet Suvarna News Asianet Suvarna News

ಯಶ್ ಫೋನ್ ಮಾಡಿ KGF-3ಗೆ ರೆಡಿಯಾಗಿ ಅಂದ್ರು; ಇಂಟ್ರಸ್ಟಿಂಗ್ ಮಾತುಕತೆ ರಿವೀಲ್ ಮಾಡಿದ ರವೀನಾ ಟಂಡನ್

ಯಶ್ ಫೋನ್ ಮಾಡಿ KGF-3ಗೆ ರೆಡಿಯಾಗಿ ಅಂದ್ರು ಎಂದು ನಟಿ ರವೀನಾ ಟಂಡನ್ ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ. 

raveena tandon reveals Rocking star yash calls her and said get ready for KGF 3 sgk
Author
First Published Apr 19, 2023, 5:19 PM IST

ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದ ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ ಒಂದು ವರ್ಷವಾಗಿದೆ. ಏಪ್ರಿಲ್ 14ರಂದು ಕೆಜಿಎಫ್ -2 ಚಿತ್ರಕ್ಕೆ ವರ್ಷದ ಸಂಭ್ರಮ. ಸಿನಿಮಾ ಬಿಡುಗಡೆಯಾಗಿ ವರ್ಷವಾದರೂ ಯಶ್ ಮುಂದಿನ ಸಿನಿಮಾ ಇನ್ನೂ ಅನೌನ್ಸ್ ಮಾಡಿಲ್ಲ. ರಾಕಿಂಗ್ ಸ್ಟಾರ್ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಯಾವಾಗ ಅನೌನ್ಸ್ ಮಾಡ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಕೆಜಿಎಫ್-3 ಸದ್ದು ಮಾಡುತ್ತಿದೆ. ಕೆಜಿಎಫ್ ಪ್ರಾಂಚೈಸಿ ಹಾಗೆ ಮುಂದುವರೆಯುತ್ತೆ ಎಂದು ನಿರ್ಮಾಪಕರು ಈಗಾಗಲೇ ಹೇಳಿದ್ದಾರೆ. ಅಲ್ಲದೇ ಪಾರ್ಟ್-2ಗೆ ಒಂದು ವರ್ಷ ತುಂಬಿದ ಸಮಯದಲ್ಲಿ ಹೊಂಬಾಳೆ ಫಿಲ್ಮ್ಸ್ ಪಾರ್ಟ್-3 ಬಗ್ಗೆ ಸುಳಿವು ನೀಡುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಆದರೆ ಯಾವಾಗ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಯಶ್ ಹೊಸ ಸಿನಿಮಾದ ತಯಾರಿಯಲ್ಲಿದೆ, ಪ್ರಶಾಂತ್ ನೀಲ್ ಸಲಾರ್ ಬಳಿಕ ಜೂ.ಎನ್ ಟಿ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವ ಕೆಜಿಎಫ್-3 ಯಾವಾಗಾ ಎನ್ನುವ ಪ್ರಶ್ನೆ ಎದುರಾಗಿದೆ. 

ಕೆಜಿಎಫ್-3 ಚರ್ಚೆಯ ನಡುವೆಯೇ ನಟಿ ರಮಿಕಾ ಸೇನ್ ಖ್ಯಾತಿಯ ರವೀನಾ ಟಂಡನ್ ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. ಕೆಜಿಎಫ್-2 ಒಂದು ವರ್ಷ ತುಂಬಿದ ದಿನ ಸಿನಿಮಾತಂಡದ ಜೊತೆ ನಡೆಸಿದ ಮಾತುಕತೆಯನ್ನು ರಿವೀಲ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಫೋನ್ ಮಾಡಿ ಏನ್ ಹೇಳಿದರು, ಪ್ರಶಾಂತ್ ನೀಲ್ ಹೇಳಿದ್ದೇನು ಎನ್ನುವುದನ್ನು ರವೀನಾ ಬಹಿರಂಗ ಪಡಿಸಿದ್ದಾರೆ.  

ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರವೀನಾ, ಕೆಜಿಎಫ್ 2 ಮೊದಲ ವಾರ್ಷಿಕೋತ್ಸವದ ದಿನ ಮೊದಲು ವಿಶ್ ಮಾಡಿದ್ದು ರಾಧಿಕಾ ಪಂಡಿತ್ ಎಂದು ಹೇಳಿದ್ದಾರೆ. ಏಪ್ರಿಲ್ 14 ಬೆಳಗ್ಗೆಯೇ ಯಶ್ ಪತ್ನಿ ರಾಧಿಕಾ ಪಂಡಿತ್ ವಿಶ್ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಅದೇ ದಿನ ಸಂಜೆ ಯಶ್ ಪೋನ್ ಮಾಡಿದ ವಿಚಾರವನ್ನು ಹಂಚಿಕೊಂಡಿದ್ದಾರೆ. 

ಇತಿಹಾಸ ಸೃಷ್ಟಿಸಿದ KGF-2ಗೆ 1 ವರ್ಷ; ವಿಶೇಷ ವಿಡಿಯೋ ಮೂಲಕ ಪಾರ್ಟ್-3 ಸುಳಿವು ನೀಡಿದ ಹೊಂಬಾಳೆ ಫಿಲ್ಮ್ಸ್

'ಆ ದಿನ ಸಂಜೆ (ಏಪ್ರಿಲ್ 14) ಯಶ್ ನನಗೆ ಫೋನ್ ಮಾಡಿದ್ದರು. ನಾವಿಬ್ಬರೂ ವಾರ್ಷಿಕೋತ್ಸವದ ವಿಶ್ ಮಾಡಿಕೊಂಡೆವು. ಆಗ ಯಶ್ ಕೆಜಿಎಫ್ 3ಗೆ ರೆಡಿಯಾಗಬೇಕು ಅಂತ ಹೇಳಿದರು. ಆಗ ಮೊದಲ ಸೀನ್‌ನಲ್ಲೇ ನನ್ನನ್ನು ಸಾಯಿಸಬೇಡಿ ಅಂತ ಹೇಳಿದೆ. ಹೀಗೆ ಜೋಕ್ ಮಾಡಿಕೊಂಡೆ ನಕ್ಕೆವು. ಹಾಗೇ ಪ್ರಶಾಂತ್ ಕೂಡ ಫೋನ್ ಮಾಡಿದ್ದರು. ಆದರೆ, ಕೆಜಿಎಫ್ 3 ಯಾವಾಗ ಬರುತ್ತೆ ಅನ್ನೋದು ನಮಗೆ ಗೊತ್ತಿಲ್ಲ. ನಾವೆಲ್ಲರೂ ಬೇಗ ಬರಲಿ ಅಂತ ಕಾಯುತ್ತಿದ್ದೇವೆ. ಪ್ರಶಾಂತ್ ನೀಲ್ ಫೋನ್ ಮಾಡಿ ಪ್ರತಿ ದೃಶ್ಯದಲ್ಲೂ ಅದ್ಭುತವಾಗಿ ಮಾಡಿದ್ದೀರಿ ಎಂದು ಹೇಳಿದ್ರು. ಪ್ರಶಾಂತ್ ನೀಲ್ ಕೂಡ ಆದಷ್ಟು ಬೇಗ ಮಾಡೋಣ ಅಂತ ಹೇಳಿದರು' ಎಂದು ರವೀನಾ ಟಂಡನ್ ಹೇಳಿದ್ದಾರೆ.

KGF 2‌ಗೆ ಒಂದು ವರ್ಷ: 'ಅಧೀರ' ಸಂಜಯ್ ದತ್ ಭಾವನಾತ್ಮಕ ಹೇಳಿಕೆ ವೈರಲ್

ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾತಂಡ ಕೂಡ ಪಾರ್ಟ್-3ಗಾಗಿ ಕಾಯುತ್ತಿದೆ. ಅಂದ್ಮೇಲೆ ಸದ್ಯದಲ್ಲೇ ಪಾರ್ಟ್-3 ಸೆಟ್ಟೇರಿದರೂ ಅಚ್ಚರಿ ಇಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಕೆಜಿಎಫ್-3 ಮಾಡ್ತಾರ ಅಥವಾ ಜೂ.ಎನ್ ಟಿ ಆರ್ ಜೊತೆ ಸಿನಿಮಾ ಮಾಡುತ್ತಾರಾ ಕಾದುನೋಡಬೇಕಿದೆ. ಇನ್ನೂ ಯಶ್ ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಸದ್ಯದಲ್ಲೇ ಹೊಸ ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಯಶ್ ಹೊಸ ಸಿನಿಮಾ ಯಾವಾಗ ಅನೌನ್ಸ್ ಮಾಡುತ್ತಾರೆ, ಕೆಜಿಎಫ್-3 ಯಾವಾಗ ಎಂದು ಅಭಿಮಾನಿಗಳು ಇನ್ನೂ ಕಾದು ನೋಡಬೇಕಿದೆ.  
 

Follow Us:
Download App:
  • android
  • ios