ರಶ್ಮಿಕಾ-ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರಾ? 'ಪುಷ್ಪ' ನಟಿಯ ರಿಯಾಕ್ಷನ್ ವೈರಲ್
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಿದ ಅಭಿಮಾನಿಗೆ 'ಪುಷ್ಪ' ನಟಿ ಪ್ರತಿಕ್ರಿಯೆ ನೀಡಿದ್ದಾರೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಪುಷ್ಪ ನಟಿಯ ಜನ್ಮದಿನಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಯ ವಿಶ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ರಶ್ಮಿಕಾ ಅವರಿಗೆ ಹುಟ್ಟುಹಬ್ಬದ ಸಂದೇಶ ಕಳುಹಿಸಿದ್ದಾರೆ. ರಶ್ಮಿಕಾ ಕೂಡ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಎಲ್ಲರಿಗೂ ಉತ್ತರಿಸಲು ಸಾಧ್ಯವಾಗದ ಕಾರಣ ಧನ್ಯವಾದ ತಿಳಿಸಿ ವಿಡಿಯೋ ಸಂದೇಶದ ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ವಿಡಿಯೋ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೆಯಲ್ಲ ರಶ್ಮಿಕಾ ಧರಿಸಿದ್ದ ಉಂಗುರ ಎಲ್ಲರ ಗಮನ ಸೆಳೆಯುತ್ತಿದೆ. ವಿಡಿಯೋ ಪ್ರಾರಂಭದಲ್ಲಿ ಉಂಗುರ ತೋರಿಸಿದ ರಶ್ಮಿಕಾ ಬಳಿಕ ಆ ಉಂಗುರವನ್ನು ತನ್ನ ಉದ್ದನೆಯ ತೋಳಿನ ಬಟ್ಟೆಯಿಂದ ಮುಚ್ಚಿಕೊಂಡರು. ಇದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದೆ.
ರಶ್ಮಿಕಾ ಧರಿಸಿದ್ದ ಉಂಗುರ ನೋಡಿದ ಅಭಿಮಾನಿಗಳು ಇದನ್ನು ವಿಜಯ್ ದೇವರಕೊಂಡ ಬಿಟ್ಟು ಬೇರೆ ಯಾರು ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ, ಮದುವೆ ಕೂಡ ಆಗುತ್ತಾರೆ ಎನ್ನುವ ಸುದ್ದಿ ಈಗಾಗಲೇ ಅನೇಕ ಬಾರಿ ವೈರಲ್ ಆಗಿದೆ. ಇದೀಗ ಹುಟ್ಟುಹಬ್ಬ ಆಚರಿಸಿಕೊಂಡ ರಶ್ಮಿಕಾಗೆ ವಿಜಯ್ ದೇವರಕೊಂಡ ಪ್ರೀತಿಯಿಂದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ನಾನು ಪೊಸೆಸಿವ್ ಅಮ್ಮ; ಸಮಂತಾಳ ಆರೋಗ್ಯದ ಬಗ್ಗೆ ರಶ್ಮಿಕಾ ಮಂದಣ್ಣ ಫಸ್ಟ್ ರಿಯಾಕ್ಷನ್ ವೈರಲ್
ಅಭಿಮಾನಿಯೊಬ್ಬರು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಪ್ರೀತಿ ಸಾಬೀತಾಗಿದೆ. ಇಬ್ಬರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ವಿಜಯ್ ದೇವರಕೊಂಡ, ರಶ್ಮಿಕಾಗೆ ಉಂಗುರ ಗಿಫ್ಟ್ ಮಾಡಿದ್ದಾರೆ. ಸದ್ಯದಲ್ಲಿ ಬಿಗ್ ಸುದ್ದಿ ನೀಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯ ಕಾಮೆಂಟ್‌ಗೆ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ. 'ಅಯ್ಯೋ...ಈ ಬಗ್ಗೆ ಅತಿಯಾಗಿ ಚಿಂತಸ ಬೇಡ ಬಾಬು' ಎಂದು ಹೇಳಿ ಹಾರ್ಟ್ ಇಮೋಜಿ ಹಾಕಿದ್ದಾರೆ. ರಶ್ಮಿಕಾ ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ರಶ್ಮಿಕಾ ವಿಜಯ್ ದೋವರಕೊಂಡ ಜೊತೆಗಿನ ಡೇಟಿಂಗ್ ವದಂತಿಯನ್ನು ತಳ್ಳಿಹಾಕಿದ್ದಂತೆ ಇದೆ.
ಸಮಂತಾ ನಟಿಸಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ; ಮಹಿಳಾ ಪ್ರಧಾನ ಚಿತ್ರದಲ್ಲಿ ಗ್ಲಾಮರ್ ನಟಿ<
ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ರಶ್ಮಿಕಾ ಸುತ್ತಾಟ
ಇತ್ತೀಚಿಗಷ್ಟೆ ವಿಜಯ್ ದೇವರಕೊಂಡ ಬಿಟ್ಟು ಮತ್ತೋರ್ವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಅನೇಕ ಬಾರಿ ಕ್ಯಾಮರಾ ಕಣ್ಣಿಗೆ ಸೆರಿಯಾಗಿದ್ದಾರೆ. ಇತ್ತೀಚೆಗೆ ರಶ್ಮಿಕಾ ಹಾಗೂ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಮುಂಬೈ ಏರ್ಪೋರ್ಟ್ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಅವಾರ್ಡ್ ಫಂಕ್ಷನ್ನಲ್ಲೂ ಈ ಜೋಡಿ ಜೊತೆಯಾಗಿ ಎಂಟ್ರಿ ಕೊಟ್ಟಿದ್ದರು. ಇಬ್ಬರೂ ಒಟ್ಟಿಗೆ ಯಾವುದೇ ಸಿನಿಮಾಗಳಲ್ಲೂ ನಟಿಸಿಲ್ಲ. ಹಾಗಿದ್ದರೂ ಒಟ್ಟಿಗೆ ಸುತ್ತಾಡುತ್ತಿರುವುದು ಅನುಮಾನಕ್ಕೆ ದಾರಿ ಮಾಡಿ ಕೊಟ್ಟಿದೆ. ಹೇಗೆ ಪರಿಚಿತರಾದರೂ, ಕ್ಲೋಸ್ ಆದರೂ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರೆ.