ಸಮಂತಾ ನಟಿಸಬೇಕಿದ್ದ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ; ಮಹಿಳಾ ಪ್ರಧಾನ ಚಿತ್ರದಲ್ಲಿ ಗ್ಲಾಮರ್ ನಟಿ
ನಟಿ ಸಮಂತಾ ನಟಿಸಬೇಕಿದ್ದ ಸಿನಿಮಾಗೆ ಈಗ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ರಶ್ಮಿಕಾ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇದೀಗ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ರಶ್ಮಿಕಾ ಸದ್ಯ ಪುಷ್ಪ -2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಪ-2 ಜೊತೆಗೆ ರಶ್ಮಿಕಾ ಇತ್ತೀಚೆಗಷ್ಟೆ ನಟ ನಿತಿನ್ ಜೊತೆ ಹೊಸ ಸಿನಿಮಾಗೆ ಸಹಿ ಮಾಡಿದ್ದರು. ಅದರ ಬೆನ್ನಲ್ಲೇ ರಶ್ಮಿಕಾ ಇದೀಗ ಮತ್ತೊಂದು ತೆಲುಗು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ಅಂದಹಾಗೆ ರಶ್ಮಿಕಾ ಹೊಸ ಸಿನಿಮಾಗೆ ರೈಂಬೋ ಎಂದು ಟೈಟಲ್ ಇಡಲಾಗಿದೆ. ಚಿತ್ರಕ್ಕೆ ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಶಾಂತರೂಬನ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಶಾಂತರೂಬನ್ ಅವರ ಚೊಚ್ಚಲ ಸಿನಿಮಾವಾಗಿದೆ.
ರೈಂಬೋ ಸಿನಿಮಾಗೆ ರಶ್ಮಿಕಾಗೂ ಮೊದಲು ಸಮಂತಾ ಆಯ್ಕೆಯಾಗಿದ್ದರು. ಡ್ರೀಮ್ ವಾರಿಯರ್ ಪಿಕ್ಚರ್ಸ್2021ರಲ್ಲೇ ಈ ಸಿನಿಮಾ ಅನೌನ್ಸ್ ಮಾಡಿ ಸಮಂತಾ ನಾಯಕಿ ಎಂದು ಬಹಿರಂಗ ಪಡಿಸಿದ್ದರು. ಆದರೀಗ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸಮಂತಾ ಅನಾರೋಗ್ಯದ ಕಾರಣ ಬ್ರೇಕ್ ಪಡೆದಿದ್ದರು. ತನ್ನ ಸಿನಿಮಾ ಕಮಿಟ್‌ಮೆಂಟ್‌ಗಳಿಗಾಗಿ ಸಮಂತಾ ಈರೈಂಬೋ ಸಿನಿಮಾದಿಂದ ಹೊರಬಂದರೂ ಎನ್ನಲಾಗಿದೆ. ಹಾಗಾಗಿ ಸಮಂತಾ ನಟಿಸಬೇಕಿದ್ದ ಸಿನಿಮಾದಲ್ಲಿ ಇದೀಗ ನಟಿ ರಶ್ಮಿಕಾ ನಟಿಸುತ್ತಿದ್ದಾರೆ.
ರೈಂಬೋ ಸಿನಿಮಾ ರಶ್ಮಿಕಾ ನಟಿಸುತ್ತಿರುವ ಮೊದಲ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಈ ಬಗ್ಗೆ ರಶ್ಮಿಕಾ ಕೂಡ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಇದನ್ನು ಹುಡುಗಿಯ ದೃಷ್ಟಿಕೋನದಿಂದ ಚಿತ್ರೀಕರಿಸಲಾಗಿದೆ. ಈ ಪಾತ್ರವನ್ನು ಜೀವಂತಗೊಳಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಹುಡುಗಿಯೊಂದಿಗಿನ ಪ್ರೇಕ್ಷಕರ ಪ್ರಯಾಣವು ಕ್ರೇಜಿ ರೈಡ್ ಆಗಿರುತ್ತದೆ' ಎಂದು ಹೇಳಿದ್ದಾರೆ.
ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಶಾಂತರೂಬನ್, ರೈಂಬೋ ಇದೊಂದು ರೊಮ್ಯಾಂಟಿಕ್ ಫ್ಯಾಂಟಸಿ ಕಥೆಯಾಗಿದೆ. ಈ ಸಿನಿಮಾದಲ್ಲಿ ರಶ್ಮಿಕಾರನ್ನು ಅತ್ಯಂತ ಪ್ರಬುದ್ಧ ಅಭಿನಯವನ್ನು ನೋಡುತ್ತೀರಿ' ಎಂದು ಹೇಳಿದ್ದಾರೆ.