ಸ್ಯಾಂಡಲ್‌ವುಡ್ ಸುಂದರ ಚೆಲುವೆ ರಶ್ಮಿಕಾ ಮಂದಣ್ಣ ತಮಿಳು ಮತ್ತು ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಚಿತ್ರಗಳ ಮೂಲಕ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣುತ್ತಿದ್ದಾರೆ .

'ಭೀಷ್ಮ' ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಫೋಸ್ ನೀಡಿದ ರಶ್ಮಿಕಾ!

ಸ್ಯಾಂಡಲ್‌ವುಡ್‌ನಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ 'ಪೊಗರು' ಚಿತ್ರದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಇದೇ ಸಮಯಕ್ಕೆ ಟಾಲಿವುಡ್‌ನಲ್ಲಿ ನಿತಿನ್‌ಗೆ ಜೋಡಿಯಾಗಿ ರಶ್ಮಿಕಾ 'ಭೀಷ್ಮ' ಚಿತ್ರದಲ್ಲಿ ಮಿಂಚುತ್ತಿದ್ದಾರೆ. 'ಭೀಷ್ಮ' ಈಗಾಗಲೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದು ಚಿತ್ರದ 'Whattey Beauty' ಹಾಡು ರಿಲೀಸ್‌ ಮಾಡಿದ್ದಾರೆ. ಇದು ಕೇವಲ 50 ಸೆಕೆಂಡ್‌ ವಿಡಿಯೋ ಆದರೂ ರಶ್ಮಿಕಾ ಇದರಲ್ಲಿ ನಿತಿನ್‌ಗೆ ಕಿಸ್ ಮಾಡಿರುವ ದೃಶ್ಯ ವೈರಲ್ ಆಗಿದೆ.  ಧನಂಜಯ್ ಹಾಗೂ ಅಮಲ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡು ಈಗಾಗಲೇ ಸೂಪರ್‌ ಹಿಟ್ ಆಗಿದೆ ಹಾಗೂ 2 ಮಿಲಿಯನ್‌ ವೀಕ್ಷಣೆ ಪಡೆದಿದೆ. 

ರಶ್ಮಿಕಾ ಸಂಭಾವನೆ ದಿಢೀರ್ ಏರಿಕೆ; ಅಸಲಿ ಮ್ಯಾಟ್ರು ಇದು!

ಟಾಲಿವುಡ್‌ಗೆ ಕಾಲಿಟ್ಟಾಗಿನಿಂದಲೂ ರಶ್ಮಿಕಾ ಪ್ರತಿಯೊಂದು ಚಿತ್ರಕ್ಕೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. 'ಗೀತಾ ಗೋವಿಂದಂ','ಡಿಯರ್‌ ಕಾಮ್ರೇಡ್', 'ಜಲೋ', 'ಸರಿಲೇರು ನೀಕ್ವೆವರು' ಈಗ 'ಭೀಷ್ಮ' ಚಿತ್ರಕ್ಕೆ.