ತನ್ನ ಫೇವರೆಟ್ ಕ್ರಿಕೆಟರ್ ಹಾಗೂ IPL ತಂಡ ಯಾವುದೆಂದು  ನಟಿ ರಶ್ಮಿಕಾ ಮಂದಣ್ಣ ಬಹಿರಂಗ ಪಡಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಮತ್ತು ಟಾಲಿವುಡ್ ಅಂತ ಓಡಾಡುವ ರಶ್ಮಿಕಾ ಆಗಾಗ ಫೋಟೋಶೂಟ್ ಮೂಲಕವೂ ಸದ್ದು ಮಾಡುತ್ತಿರುತ್ತಾರೆ. ಸದಾ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಇದೀಗ ಕ್ರಿಕೆಟ್ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಸದ್ಯ ಐಪಿಎಲ್ ನಡೆಯುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಮಂದ್ಯ ವೀಕ್ಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲರಿಗೂ ಫೇವರೆಟ್ ತಂಡ, ಕ್ರಿಕೆಟರ್ ಅಂತ ಇರುತ್ತಾರೆ. ಹಾಗೆ ನಟಿ ರಶ್ಮಿಕಾ ಮಂದಣ್ಣ ಕೂಡ ತನ್ನ ಫೇವರಿಟ್ ಕ್ರಿಕೆಟರ್ ಹಾಗೂ ಐಪಿಎಲ್ ತಂಡ ಯಾವುದು ಎನ್ನುವುದನ್ನು ಈಗ ಬಹಿರಂಗ ಪಡಿಸಿದ್ದಾರೆ.

ಇತ್ತೀಚಿಗಷ್ಟೆ ಎಂಎಸ್ ಧೋನಿ ಜೊತೆ ಕ್ಯಾಮರಾಗೆ ಪೋಸ್ ನೀಡಿದ್ದ ರಶ್ಮಿಕಾ ಫೋಟೋ ವೈರಲ್ ಆಗಿತ್ತು. ಇದೀಗ ತನ್ನ ಫೇವರೆಟ್ ಕ್ರಿಕೆಟರ್ ಯಾರು ಎಂದು ಅವರೇ ಬಹಿರಂಗ ಪಡಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ತನ್ನ ನೆಚ್ಚಿನ ಕ್ರಿಕೆಟರ್ ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ. 'ವಿರಾಟ್ ಸರ್, ಅವರು ಅದ್ಭುತ' ಎಂದು ಹೇಳಿದ್ದಾರೆ. ಕ್ರಿಕೆಟರ್ ಜೊತೆಗೆ ನೆಚ್ಚಿನ ಐಪಿಎಲ್ ತಂಡ ಯಾವುದು ಎನ್ನುವುದನ್ನು ಹೇಳಿದ್ದಾರೆ. ರಶ್ಮಿಕಾ ಆರ್‌ಸಿಬಿ ಫ್ಯಾನ್ ಎಂದು ಹೇಳಿದ್ದಾರೆ. 'ನಾನು ಬೆಂಗಳೂರಿನವಳು, ನಾನು ಕರ್ನಾಟಕದವಳು ನಮ್ಮಲ್ಲಿ 'ಈ ಸಲ ಕಪ್ ನಮ್ದೆ' ಎಂದು ಯಾವಾಗಲೂ ಹೇಳುತ್ತೀವೆ. ಹಾಗೆ ಮುಂದುವರೆಯುತ್ತೆ ಎಂದು ನಾನು ಭಾವಿಸುತ್ತೇನೆ. ಈ ಬಾರಿಯ ಐಪಿಎಲ್‌ನಲ್ಲಿ ನಾನು ಆರ್‌ಸಿಬಿ ಆಟವನ್ನು ನೋಡುತ್ತೇನೆ' ಎಂದು ಹೇಳಿದ್ದಾರೆ. 

ಧೋನಿ ಜೊತೆ ಪೋಸ್ ನೀಡಿದ ರಶ್ಮಿಕಾ ಮಂದಣ್ಣ; RCB ವಿರೋಧಿ ಎಂದ ಫ್ಯಾನ್ಸ್

2023ನೇ ಸಾಲಿನ ಐಪಿಎಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿದ್ದರು. ತಮನ್ನಾ ಸೇರಿದಂತೆ ಅನೇಕ ಸಿನಿ ಸ್ಟಾರ್ಸ್ ಐಪಿಎಲ್ ಉದ್ಘಾಟನಾ ಕಾರ್ಯಕ್ರಮದ ರಂಗು ಹೆಚ್ಚಿಸಿದ್ದದರು. ಬಳಿಕ ಎಂಎಸ್ ಧೋನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆಗ ರಶ್ಮಿಕಾ ಸಿಎಸ್‌ಕೆ ಫ್ಯಾನ್ ಎನ್ನಲಾಗಿತ್ತು. ಇದೀಗ ಆರ್‌ಸಿಬಿ ಫ್ಯಾನ್ ಎಂದು ಬಹಿರಂಗ ಪಡಿಸಿದ್ದಾರೆ.

Scroll to load tweet…


ಗೋಲ್ಡನ್ ಗರ್ಲ್ ಆಗಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ; ಫ್ಯಾನ್ಸ್ ಹೇಳಿದ್ದೇನು?

ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಸದ್ಯ ತೆಲುಗಿನಲ್ಲಿ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಪುಪ್ಪ-2ನಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ-2 ಜೊತೆಗೆ ಇನ್ನೂ 2 ತೆಲುಗು ಸಿನಿಮಾಗಳು ರಶ್ಮಿಕಾ ಕೈಯಲ್ಲಿದೆ. ರೇನ್‍ಬೋ ಹಾಗೂ ಇನ್ನು ಹೆಸರಿಡದ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ಹಿಂದಿಯಲ್ಲಿ ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.