Asianet Suvarna News Asianet Suvarna News

ನ್ಯಾಷನಲ್​ ಕ್ರಷ್ ರಶ್ಮಿಕಾ​ಗೆ ಇದೇನಾಯ್ತು? ಇದು ವಿಚಿತ್ರ ಲವ್​ಸ್ಟೋರಿ ಅನ್ನುತ್ತಲೇ ನೀರಿಗೆ ಮುಳುಗಿಬಿಟ್ರಲ್ಲಾ!

ನ್ಯಾಷನಲ್​ ಕ್ರಷ್ ಎನಿಸಿಕೊಂಡಿರೋ ನಟಿ ರಶ್ಮಿಕಾ ಮಂದಣ್ಣನವರಿ​ಗೆ ಇದೇನಾಯ್ತು? ಇದು ವಿಚಿತ್ರ ಲವ್​ಸ್ಟೋರಿ ಅನ್ನುತ್ತಲೇ ನೀರಿಗೆ ಮುಳುಗಿಬಿಟ್ರಲ್ಲಾ! ಏನಿದು ವೈರಲ್​ ವಿಡಿಯೊ?
 

Rashmika Mandanna Goes Underwater In 1st Glimpse From The Girlfriend suc
Author
First Published Oct 22, 2023, 4:02 PM IST

ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಸಕತ್​ ಸುದ್ದಿಯಲ್ಲಿರೋ ನಟಿ. ಇದಕ್ಕೆ ಕಾರಣ ರಣಬೀರ್​ ಕಪೂರ್​ ಜೊತೆಗಿನ ಅನಿಮಲ್​ ಚಿತ್ರ. ಅತ್ತ ನಟ ವಿಜಯ್​ ದೇವರಕೊಂಡ ಅವರ ಜೊತೆಗೆ ಕುಚ್​ ಕುಚ್​ ನಡೆಯುತ್ತಿದೆ ಎನ್ನುವ ಹೊತ್ತಿನಲ್ಲಿಯೇ ಅನಿಮಲ್​ ಚಿತ್ರದ  ಮೊದಲ ಹಾಡು ಹುವಾ ಮೈನ...  ರಿಲೀಸ್​ ಆಗಿದ್ದು, ಇದು ಎಲ್ಲರ ನಿದ್ದೆಗೆಡಿಸಿದೆ. ವಿಮಾನದಲ್ಲಿ ಆಲಿಯಾ ಕಪೂರ್​ ಪತಿ ರಣಬೀರ್​ ಜೊತೆ ದೀರ್ಘ ಲಿಪ್​ಲಾಕ್​  ಮಾಡಿ ಸಕತ್​ ಸುದ್ದಿಯಲ್ಲಿದ್ದಾರೆ ರಶ್ಮಿಕಾ.  ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್​ ಉಫ್​ ಎನ್ನುತ್ತಿದ್ದಾರೆ. ಬಾಲಿವುಡ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿರುವ ನಟಿ ರಶ್ಮಿಕಾ, ಬೋಲ್ಡ್​ ಪಾತ್ರಗಳಲ್ಲಿಯೂ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯೇ ಈ ಪರಿಯ ರೊಮ್ಯಾನ್ಸ್​ ದೃಶ್ಯ.  ಪ್ರೈವೇಟ್ ಜೆಟ್​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ರೊಮ್ಯಾನ್ಸ್​ ಹೇರಳವಾಗಿ ನೋಡಬಹುದು. ಚಿತ್ರ ಡಿಸೆಂಬರ್​ 1ರಂದು ಬಿಡುಗಡೆಯಾಗಲಿದೆ. ಸದ್ಯ ಬಾಲಿವುಡ್​ನಲ್ಲಿ ಸಕತ್​ ಬಿಜಿಯಾಗಿರುವ ನ್ಯಾಷನಲ್​ ಕ್ರಷ್​ ತೆಲಗು ಚಿತ್ರ ಒಪ್ಪಿಕೊಳ್ಳಲ್ಲ ಎನ್ನುತ್ತಿರುವಾಗಲೇ ಪ್ರೇಮಕಥೆಯನ್ನು ಅವರು ಆಯ್ದುಕೊಂಡಿದ್ದಾರೆ.
 
ರಶ್ಮಿಕಾ ಮಂದಣ್ಣ ಅವರ ಹೊಸ ತೆಲುಗುವಿನ ಚಿತ್ರ  ‘ದಿ ಗರ್ಲ್​ಫ್ರೆಂಡ್’ನ ಪ್ರೊಮೋ ರಿಲೀಸ್​ ಆಗಿದ್ದು, ಅದನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​  ಖಾತೆಯಲ್ಲಿ ಶೇರ್​ ಮಾಡಿಕೊಂಡಿಕೊಂಡಿದ್ದಾರೆ.  ಜಗತ್ತು ದೊಡ್ಡ ಪ್ರೇಮ ಕಥೆಗಳಿಂದ ತುಂಬಿದೆ. ಆದರೆ ಇದುವರೆಗೆ ಕೇಳಿರದ ಅಥವಾ ನೋಡದ ಕೆಲವು ಪ್ರೇಮಕಥೆಗಳಿವೆ. ಅಂಥವುಗಳಲ್ಲಿ ಒಂದು ಗರ್ಲ್​ಫ್ರೆಂಡ್​ ಎಂದು ಬರೆದುಕೊಂಡಿರುವ ರಶ್ಮಿಕಾ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನೆ ಕಾಡುವಂಥ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ನೀರಿನಲ್ಲಿ ಮುಳುಗಿರುವ ರಶ್ಮಿಕಾ ಮಂದಣ್ಣ ನಗುತ್ತಿರುತ್ತಾರೆ, ಆದರೆ ಹಠಾತ್ತನೆ ನೋವಿನಂತೆ ಮುಖ ಕಾಣಿಸುತ್ತದೆ. ಬಳಿಕ ನಿಧಾನಕ್ಕೆ ಕಣ್ಮುಚ್ಚುತ್ತಾರೆ. ಅದು ಆತ್ಮಹತ್ಯೆ ಎಂಬಂತೆ ಪ್ರೊಮೋದಲ್ಲಿ ತೋರಿಸಲಾಗಿದೆ. 

ನಟಿಯ ರೀಲ್ಸ್​ ನೋಡ್ತಾ ನೋಡ್ತಾ ಲವ್​ಗೆ ಬಿದ್ದು ಕಿಡ್ನಿ ಕೊಡಲು ರೆಡಿಯಾದ ಟ್ರಕ್​ ಡ್ರೈವರ್​!

ಅಂದಹಾಗೆ, ಗರ್ಲ್​ಫ್ರೆಂಡ್​ ಚಿತ್ರವು ಮಹಿಳಾ ಪ್ರಧಾನವಾದದ್ದು ಎಂದು ಹೇಳಲಾಗುತ್ತಿದೆ. ಈಗ ರಿಲೀಸ್​ ಆಗಿರೋ ಪ್ರೋಮೋ  ಕುತೂಹಲಭರಿತವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂತಿದೆ. ಏನಿದರ ಹಿನ್ನೆಲೆ? ಯಾರಾದರೂ ಈಕೆಯನ್ನು ಕಾಪಾಡುತ್ತಾರೆಯೋ ಅಥವಾ ಈ ಗರ್ಲ್​ಫ್ರೆಂಡ್​​ ಹಾಗೆಯೇ ಸಾಯುತ್ತಾಳೋ ಎಂದು ಚಿತ್ರ ನೋಡಿದ ಮೇಲಷ್ಟೇ ತಿಳಿಯಬೇಕಿದೆ.  

 ತಮ್ಮ ಬಾಯ್​ಫ್ರೆಂಡ್​ ಜೊತೆಗಿನ ಪ್ರೇಮಸಂಬಂಧದಿಂದ ನಾಯಕಿ  ಎದುರಿಸುವ ಭಾವನೆಗಳ ಏರಿಳಿತ, ಸಮಸ್ಯೆಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.  ಇದು ನಿಜವೇ ಆಗಿದ್ದರೆ, ರಶ್ಮಿಕಾ ಅವರು ನಟಿಸ್ತಿರೋ   ಮೊದಲ ಮಹಿಳಾ ಪ್ರಧಾನ ಸಿನಿಮಾ ಆಗಲಿದೆ. ಅಂದಹಾಗೆ ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್  ನಿರ್ದೇಶಿಸುತ್ತಿದ್ದಾರೆ.  ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿದ್ದು, ವಿದ್ಯಾ ಕೊಪ್ಪಿನೇಡಿ ಹಾಗೂ ಧೀರಜ್ ಮೊಗಿಲಿನೇನಿ  ನಿರ್ಮಿಸುತ್ತಿದ್ದಾರೆ.  ‘ಹೃದಯಂ’ ಸೇರಿದಂತೆ ಹಲವು ಸಿನಿಮಾಗಳಿಗೆ ಮಧುರವಾದ ಸಂಗೀತ ನೀಡಿರುವ ಮಲಯಾಳಂ ಸಂಗೀತ ನಿರ್ದೇಶನ ಹೆಷಾಮ್ ಅಬ್ದುಲ್ ವಹಾಬ್ ಅವರು ಸಂಗೀತ ನೀಡುತ್ತಿದ್ದಾರೆ.

16ಕ್ಕೆ ಮದ್ವೆ, 17ಕ್ಕೆ ಇಬ್ಬರು ಮಕ್ಕಳು, 18ಕ್ಕೆ ಡಿವೋರ್ಸ್‌: ಕಿರುತೆರೆಗೆ ಮರಳಿದ ಈ ಬಿಗ್‌ಬಾಸ್‌ ವಿಜೇತೆ!
 

Follow Us:
Download App:
  • android
  • ios