Asianet Suvarna News Asianet Suvarna News

ನಟಿಯ ರೀಲ್ಸ್​ ನೋಡ್ತಾ ನೋಡ್ತಾ ಲವ್​ಗೆ ಬಿದ್ದು ಕಿಡ್ನಿ ಕೊಡಲು ರೆಡಿಯಾದ ಟ್ರಕ್​ ಡ್ರೈವರ್​!

ನಟಿ ಸಂಚಿತಾ ಅವರನ್ನು ತುಂಬಾ ಪ್ರೀತಿಸುತ್ತಿರುವ ಟ್ರಕ್​ ಡ್ರೈವರ್​ ಒಬ್ಬರು, ಆಕೆಗಾಗಿ ಕಿಡ್ನಿ ಕೊಡಲೂ ರೆಡಿ ಇದ್ದಾರಂತೆ! 
 

A truck driver who loves actress Sanchita so much that he is ready to donate a kidney suc
Author
First Published Oct 22, 2023, 3:33 PM IST

ನಟ-ನಟಿಯರನ್ನು ಕಂಡ್ರೆ ಹಲವರಿಗೆ ಅಭಿಮಾನ. ಇನ್ನು ಕೆಲವರಿಗೆ ಅತಿರೇಕದ ಅಭಿಮಾನ, ಪ್ರೀತಿ. ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು, ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜೀವವನ್ನೂ ಪಣಕ್ಕಿಡುವ ಸುದ್ದಿಗಳನ್ನು ಕೇಳಿದ್ದೇವೆ. ರಕ್ತದಿಂದ ಪತ್ರ ಬರೆದು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಸಹ ಸುದ್ದಿಯಾಗುತ್ತಿರುತ್ತಾರೆ.  ಅತಿರೇಕದ ಅಭಿಮಾನದಿಂದ ಪ್ರಾಣ ಬಲಿಕೊಟ್ಟವರೂ ಇದ್ದಾರೆ. ನಟರನ್ನು ದೇವರೆಂದೇ ನಂಬಿ ಅವರನ್ನು ಅನುಸರಿಸುವವರಿಗೂ ಕಮ್ಮಿಯೇನಿಲ್ಲ. ಇದೀಗ ಅಂಥದ್ದೇ ಒಬ್ಬ ಅಭಿಮಾನಿ ಟ್ರಕ್​ ಡ್ರೈವರ್​ ನಟಿಯೊಬ್ಬರನ್ನು ಪ್ರೀತಿಸಿ ಕಿಡ್ನಿ ಕಳೆದುಕೊಳ್ಳಲು ರೆಡಿಯಾಗಿದ್ದಾರೆ!

ಅಷ್ಟಕ್ಕೂ ಈ ನಟಿ ಯಾರು ಎಂದರೆ, ಸಂಚಿತಾ ಬಸು. ಬಿಹಾರದ ಭಾಗಲ್ಪುರ ನಿವಾಸಿಯಾಗಿರುವ ನಟಿ ಸಂಚಿತಾ ಬಸು ಅವರು ತಮ್ಮ ರೀಲ್‌ಗಳಿಗಾಗಿ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದು, ಅವರನ್ನು ತುಂಬಾ ಇಷ್ಟಪಡುತ್ತಾರೆ.  ಸೌತ್ ಚಿತ್ರ ‘ಫಸ್ಟ್ ಡೇ ಫಸ್ಟ್ ಶೋ’ನಲ್ಲಿ ನಾಯಕಿಯಾಗಿ ನಟಿಸಿದ್ದರು. ಅವರ ರೀಲುಗಳು ಮತ್ತು ಚಲನಚಿತ್ರಗಳನ್ನು ಜನರು ತುಂಬಾ ಇಷ್ಟಪಡುತ್ತಾರೆ. 

ಕುಡಿದು ಚಾಲನೆ ಮಾಡಿದ್ದಕ್ಕೆ ಬಾಲಿವುಡ್​ ಹಿರಿಯ ನಟ ದಲೀಪ್​ಗೆ ಜೈಲು ಶಿಕ್ಷೆ! ಏನಿದು ಘಟನೆ?

ಇದೀಗ ನಟಿಯನ್ನು ಟ್ರಕ್ ಡ್ರೈವರ್ ಒಬ್ಬರು ಪ್ರೀತಿಸುತ್ತಿದ್ದಾರೆ.  ನಾನು ಸಂಚಿತಾಳನ್ನು ಪ್ರೀತಿಸುತ್ತೇನೆ ಮತ್ತು ಅವಳಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ. ಸಂಚಿತಾ ಅವರ ಸಲುವಾಗಿ ಅವರು ತಮ್ಮ ಎರಡೂ ಕಿಡ್ನಿಗಳನ್ನು ದಾನ ಮಾಡಲು ಸಿದ್ಧರಾಗಿದ್ದಾರೆ. ಕಿಡ್ನಿ ಮಾರಿ ಬರುವ ದುಡ್ಡಿನಲ್ಲಿ ನಟಿಯನ್ನು ಸಲಹುವ ಯೋಚನೆಯೋ ಏನೋ ತಿಳಿದಿಲ್ಲ. ಆದರೆ ತಮ್ಮ ಕಿಡ್ನಿ ಮಾರಲೂ ರೆಡಿಯಾಗಿರುವುದಾಗಿ ಅವರು ಬರೆದುಕೊಂಡಿದ್ದದಾರೆ. 
 

ಬಾಬಿ ಕುಮಾರ್ ಮಿಶ್ರಾ ಎಂಬ ಫೇಸ್‌ಬುಕ್ ಬಳಕೆದಾರರು ಯುವಕನ ವೀಡಿಯೊವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ನಟಿ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಟ್ರಕ್ ಡ್ರೈವರ್ ಹೇಳುತ್ತಿದ್ದಾರೆ. ನಾನು ಪ್ರತಿದಿನ ಕಾರು ಓಡಿಸುತ್ತಿದ್ದೆ. ಆಗ  ನಟಿಯ ರೀಲ್ ನೋಡುತ್ತಿದ್ದೆ. ದಿನೇ ದಿನೇ ಅವರ ಮೇಲೆ ಪ್ರೀತಿ ಹೆಚ್ಚಾಗಿದೆ. ನಾನು ರೀಲ್ಸ್​ ನೋಡುತ್ತಿದ್ದರಿಂದ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದಿರುವ ಟ್ರಕ್​ ಡ್ರೈವರ್​,  ಸಂಚಿತಾಗಾಗಿ ತಮ್ಮ ಎರಡೂ ಕಿಡ್ನಿಗಳನ್ನು ದಾನ ಮಾಡಲು ಸಿದ್ಧರಾಗಿದ್ದಾರಂತೆ!  

ಅಬ್ಬಾ! ನನ್ನ ಮಗು ಗಾಜಾದಲ್ಲಿ ಹುಟ್ಟಿದ್ರೆ ಏನಾಗ್ತಿತ್ತು? ಅಲ್ಲಿಯ ಮಕ್ಕಳಿಗಾಗಿ ಸ್ವರಾ ಭಾಸ್ಕರ್‌ ಕಣ್ಣೀರು- ಭಾವುಕ ಪೋಸ್ಟ್‌

Follow Us:
Download App:
  • android
  • ios