Asianet Suvarna News Asianet Suvarna News

valentine's Day ಹತ್ರ ಬಂತು, ಪ್ರಪೋಸ್ ಮಾಡೋದು ಹೇಗೆ ಅಂತ ರಶ್ಮಿಕಾ ಹೇಳ್ತಾರೆ ಕೇಳಿ!

ಫೆಬ್ರವರಿ 14 ಪ್ರೇಮಿಗಳ ದಿನ ಹತ್ತಿರ ಬರ್ತಾ ಇದೆ. ಇದೇ ಟೈಮಲ್ಲಿ ಹುಡುಗೀರಿಗೆ ಹೇಗೆ ಪ್ರೊಪೋಸ್ ಮಾಡ್ಬೇಕು ಅಂತ ರಶ್ಮಿಕಾ ಹೇಳೋ ಪ್ರೇಮ ಪಾಠವೂ ವೈರಲ್ ಆಗ್ತಿದೆ. ಅಷ್ಟಕ್ಕೂ ಈ ಕಿರಿಕ್ ಬ್ಯೂಟಿ ಹೇಳಿರೋ ಲವ್ ಟಿಪ್ಸ್ ಏನು?

Rashmika mandanna giving love tips
Author
First Published Feb 4, 2023, 2:19 PM IST

ರಶ್ಮಿಕಾ ಮಂದಣ್ಣ ಅಂದ್ರೆ ಸಾಕು ಪಡ್ಡೆ ಹುಡುಗರು, ಟ್ರೋಲ್ ಮಾಡುವವರಿಗೆ ಹಬ್ಬ, ಎಷ್ಟೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡರೂ ಈ ಕಿರಿಕ್ ಬ್ಯೂಟಿಯಲ್ಲಿ ಏನೋ ಒಂದು ಅಟ್ರಾಕ್ಷನ್ ಇದೆ ಅಂತ ಹಿಂದೆ ಬೀಳ್ತಲೇ ಇರ್ತಾರೆ. ಹಾಗೆ ನೋಡಿದರೆ ರಶ್ಮಿಕಾ ಪರ್ಸನಲ್ ಲೈಫು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಬಗೆಯಲ್ಲಿ ಕಥೆಗಳು ರೆಕ್ಕೆ ಪುಕ್ಕ ಮೂಡಿಸಿಕೊಂಡು ಹಾರಾಡುತ್ತಲೇ ಇರುತ್ತವೆ. ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿರುವಾಗಲೇ ಆಕೆಗೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸೋ ಅವಕಾಶ ಒದಗಿಬಂತು. ಅಲ್ಲಿ ಅವರು ಪ್ರೇಮ ಪಾಠ ಮಾಡಿದ್ದು ರಕ್ಷಿತ್ ಶೆಟ್ಟಿ ಅವರಿಗೆ. ಅಲ್ಲಿಂದ ಒಂದಿಷ್ಟು ಕಾಲದ ಹರಿದುಬಂದ ಅವರ ಪ್ರೇಮ ಎಂಗೇಜ್‌ಮೆಂಟ್ ವರೆಗೂ ಹೋಯ್ತು. ದುರಾದೃಷ್ಟವಶಾತ್ ಬ್ರೇಕ್ ಅಪ್ ಆಗೋ ಮೂಲಕ ಸುಂದರ ಪ್ರೇಮಕಥೆ ಕೊನೆಯಾಯ್ತು. ಅಷ್ಟಕ್ಕೇ ಮುಗಿಯಲಿಲ್ಲ. ತೆಲುಗು ನಟ ವಿಜಯ ದೇವರಕೊಂಡ ಜೊತೆ ರಶ್ಮಿಕಾ ಪ್ರೇಮಕಥೆ ಮೊದಲಾಯ್ತು. ಅದಿನ್ನೂ ಬೂದಿ ಮುಚ್ಚಿದ ಕೆಂಡದ ಹಾಗೆ ಅಲ್ಲಲ್ಲಿ ತೋರುತ್ತಲೇ ಇದೆ.

ಅಂದಹಾಗೆ ಇದೀಗ ಮತ್ತೆ ರಶ್ಮಿಕಾ ಪ್ರೇಮಕಥೆಯೊಂದಿಗೆ ಪ್ರತ್ಯಕ್ಷ ಆಗಿದ್ದಾರೆ. ತಮ್ಮ ಅಭಿಮಾನಿಯೊಬ್ಬನಿಗೆ ಪ್ರೇಮ ನಿವೇದನೆ ಹೇಗೆ ಮಾಡುವುದೆಂದು ಹೇಳಿ ಕೊಟ್ಟಿದ್ದಾರೆ. ಆದರೆ ಆ ಚಾಲಾಕಿ ಅಭಿಮಾನಿ ರಶ್ಮಿಕಾರನ್ನೇ ಇಕ್ಕಟ್ಟಿಗೆ ಸಿಲುಕಿಸಿಬಿಟ್ಟಿದ್ದಾನೆ. ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರನ್ನು ಅಭಿಮಾನಿಯೊಬ್ಬ, 'ಮೇಡಂ, ತೆಲುಗಿನಲ್ಲಿ ಪ್ರೇಮ ನಿವೇದನೆ ಮಾಡುವುದು ಅಥವಾ ಪ್ರೊಪೋಸ್ ಮಾಡುವುದು ಹೇಗೆ ಹೇಳಿಕೊಡಿ' ಎಂದು ಕೇಳಿದ್ದಾನೆ. ಪಾಪ ಅಭಿಮಾನಿ ಸಹಾಯ ಕೇಳುತ್ತಿದ್ದಾನೆಂದು ಕೊಂಡ ನಟಿ ರಶ್ಮಿಕಾ, ತೆಲುಗಿನಲ್ಲಿ 'ಮೀರು ಚಾಲಾ ಮಂಚಿಗಾ ಕನಿಪಿಸ್ತುನ್ನಾವು' (ನೀನು ತುಂಬಾ ಚೆನ್ನಾಗಿ ಕಾಣುತ್ತಿದ್ದೀಯ) ಎಂದು ಹೇಳುವಂತೆ ಹೇಳಿದ್ದಾರೆ.

ಜೈಸಲ್ಮೇರ್‌ನ ಸೂರ್ಯಘರ್ ಪ್ಯಾಲೇಸ್‌ನಲ್ಲಿ ಸಪ್ತಪದಿ ತುಳಿಯಲಿರುವ ಕಿಯಾರಾ ಮತ್ತು ಸಿದ್ಧಾರ್ಥ್!

ಆದರೆ ರಶ್ಮಿಕಾ ತೆಲುಗಿನಲ್ಲಿ ಈ ಸಾಲು ಹೇಳಿದ ಕೂಡಲೆ, ಆ ಚಾಲಾಕಿ ಅಭಿಮಾನಿ 'ಸೇಮ್ ಟು ಯು' ಎಂದು ಬಿಟ್ಟಿದ್ದಾನೆ, ಅಭಿಮಾನಿಯ ಚಾಲಾಕಿ ಉತ್ತರದಿಂದ ಗಾಬರಿಯಾದ ರಶ್ಮಿಕಾ, ಬಳಿಕ ನಾಚಿಕೊಂಡು, ಅಭಿಮಾನಿಯ ಬುದ್ಧಿವಂತಿಕೆಗೆ ಒಂದು ನಗೆ ನಕ್ಕು ಅಲ್ಲಿಂದ ತೆರಳಿದ್ದಾರೆ. ಚಾಲಾಕಿ ಅಭಿಮಾನಿ ತನ್ನ ನೆಚ್ಚಿನ ನಟಿಯನ್ನು ಟ್ರಿಕ್ ಮಾಡಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್(Viral) ಆಗಿದೆ. ಎಲ್ಲರೂ ರಶ್ಮಿಕಾ ಅವರನ್ನು ಮತ್ತೆ ಕಿಚಾಯಿಸಲು ಶುರು ಮಾಡಿದ್ದಾರೆ. ಅವರ ಬಗೆಗೆ ಮತ್ತೆ ಟ್ರೋಲ್ ಮೇಲೆ ಟ್ರೋಲ್ ಗಳು ಈ ವಿಚಾರ ಇಟ್ಟುಕೊಂಡೇ ಹಬ್ಬುತ್ತಿವೆ.

ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಪ್ರತೀ ಪ್ರೇಮಿಯೂ ಆ ದಿನ ಸ್ಪೆಷಲ್ ಆಗಿ ಪ್ರೇಮ ನಿವೇದನೆ ಮಾಡಲು ಹಪಹಪಿಸುತ್ತಿರುತ್ತಾರೆ. ಇಂಥಾ ಟೈಮಲ್ಲೇ(Time) ರಶ್ಮಿಕಾ ಅವರು ಪ್ರೇಮ ಪಾಠ ಮಾಡಿರೋದು ಸಖತ್ ಹೈಪ್(Hype) ಕ್ರಿಯೇಟ್ ಮಾಡುತ್ತಿದೆ. ಜೊತೆಗೆ ಸದ್ಯ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಕೆಲವು ವರ್ಷಗಳಿಂದಲೂ ಹರಿದಾಡುತ್ತಿದೆ. ಇಬ್ಬರೂ ಈ ಸುದ್ದಿಗಳನ್ನು ನಿರಾಕರಿಸಿದ್ದರೂ, ಇಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ, ಇತ್ತೀಚೆಗೆ ಒಟ್ಟಿಗೆ ವಿದೇಶಿ ಪ್ರವಾಸಕ್ಕೂ ಹೋಗಿದ್ದರು. ಪ್ರೇಮಿಗಳ ದಿನ ಇವರಿಬ್ಬರು ಹೇಗೆ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು ಅನ್ನೋ ಬಗ್ಗೆಯೂ ಗುಸು ಗುಸು ಹರಿದಾಡ್ತಿದೆ. ಸದ್ಯಕ್ಕೆ ಭಾರತೀಯ ಚಿತ್ರರಂಗದ ಬೇಡಿಕೆಯ ನಟಿಯಾಗಿ ರಶ್ಮಿಕಾ ಗುರುತಿಸಿಕೊಂಡಿದ್ದಾರೆ. 

Box Office Queen: 'ಬಾಕ್ಸ್​ ಆಫೀಸ್​ ಕ್ವೀನ್' ಪಟ್ಟ ಉಲ್ಟಾ ಪಲ್ಟಾ ಆಗೋಯ್ತಲ್ಲಾ!

 

Follow Us:
Download App:
  • android
  • ios