ಮ್ಯಾನೇಜರ್ನಿಂದಲೇ ಮೋಸ ಹೋದ ರಶ್ಮಿಕಾ ಮಂದಣ್ಣ? ಫ್ಯಾನ್ಸ್ ಶಾಕ್!
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರಿಗೆ ಮ್ಯಾನೇಜರ್ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಏನಿದು ವಿಷಯ?
ನ್ಯಾಷನಲ್ ಕ್ರಷ್ ಎಂದೇ ಬಿರುದು ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಕಳೆದೊಂದು ವರ್ಷದಿಂದ ಬಹಳ ಸುದ್ದಿಯಲ್ಲಿದ್ದಾರೆ. ವಿವಾದದಿಂದಲೂ ನಟಿ ಸುತ್ತುವರಿದಿದ್ದರೆ, ಇನ್ನೊಂದೆಡೆ ಬಾಲಿವುಡ್ ಮಾತ್ರವಲ್ಲದೇ ಟಾಲಿವುಡ್ನಲ್ಲಿಯೂ ಸಕತ್ ಬಿಜಿಯಾಗಿದ್ದಾರೆ. ನ್ಯಾಷನಲ್ ಕ್ರಷ್ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಉಡುಪು ತೊಟ್ಟು, ಒಳ ಉಡುಪು ಧರಿಸದೇ... ಹೀಗೆ ಹಲವು ವೇಷಗಳಲ್ಲಿ ದೊಡ್ಡ ದೊಡ್ಡ ವೇದಿಕೆಯ ಮೇಲೆ ಕಾಣಿಸಿಕೊಂಡು ಟ್ರೋಲ್ ಆಗುತ್ತಿದ್ದಾರೆ. ಬಾಲಿವುಡ್ (Bollywood) ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಎಂದೆಲ್ಲಾ ಕರೆಸಿಕೊಳ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ (Maitri Movie) ಮೇಕರ್ಸ್ ತಯಾರಿಸುತ್ತಿರುವ ಮತ್ತೊಂದು ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇಂತಿಪ್ಪ ರಶ್ಮಿಕಾರ ಸಂಭಾವನೆ ಕೂಡ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ 2 ಸಿನಿಮಾದಲ್ಲಿಯೂ ಈಕೆ ಬಿಜಿಯಾಗಿರುವ ನಡುವೆಯೇ ಇನ್ನೊಂದು ಸುದ್ದಿ ಬಂದಿದೆ. ಅದೇನೆಂದರೆ, ನಟಿಗೆ ಮ್ಯಾನೇಜರ್ ಮೋಸ ಮಾಡಿದ್ದಾರೆ ಎನ್ನುವ ಸುದ್ದಿ ಸಕತ್ ವೈರಲ್ ಆಗುತ್ತಿದೆ. ಈಕೆಯ ಮ್ಯಾನೇಜರ್ ನಟಿಗೆ 80 ಲಕ್ಷ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ ಎನ್ನುವ ಸುದ್ದಿ ಇದಾಗಿದ್ದು, ಅವರನ್ನು ರಶ್ಮಿಕಾ ಕೆಲಸದಿಂದ ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಹೊಸ ಮ್ಯಾನೇಜರ್ ನೇಮಕ ಮಾಡಿಕೊಳ್ಳಲಾಗಿದೆ ಎನ್ನುವ ಸುದ್ದಿ ಬಿ ಟೌನ್ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ರಶ್ಮಿಕಾ ಅವರ ಮ್ಯಾನೇಜರ್ ಜೊತೆ ರಶ್ಮಿಕಾ ಬಹಳ ದಿನಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ನಟಿಗೆ ತಿಳಿಯದಂತೆ ವಂಚನೆ ಮಾಡಿ ಹಣ ಗುಳುಂ ಮಾಡಿದ್ದರು ಎನ್ನಲಾಗಿದೆ.
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ದಾಖಲೆಯ ಗರಿ
ಆದರೆ ಈ ಬಗ್ಗೆ ರಶ್ಮಿಕಾ ಮಂದಣ್ಣ ಇದುವರೆಗೆ ಯಾವುದೇ ಮಾಹಿತಿಯನ್ನೂ ನೀಡಲಿಲ್ಲ, ಈ ಸುದ್ದಿ ಹೌದೋ ಅಲ್ಲವೋ ಎಂಬ ಬಗ್ಗೆ ಸ್ಪಷ್ಟನೆಯನ್ನೂ ನೀಡಲಿಲ್ಲ. ಅದೇನೆ ಇದ್ದರೂ ನಟಿ ಮಾತ್ರ ವಿವಿಧ ಭಾಷೆಗಳ ಚಿತ್ರದಲ್ಲಿ ಬಿಜಿ ಇದ್ದಾರೆ. ಇತ್ತೀಚೆಗೆ, ರಶ್ಮಿಕಾ ಮಂದಣ್ಣ ತಮ್ಮ Instagram ಖಾತೆಯಲ್ಲಿ ಒಟ್ಟು 38 ಮಿಲಿಯನ್ ಫಾಲೋವರ್ಸ್ಗಳನ್ನು ಪಡೆಯುವ ಮೂಲಕ ದೊಡ್ಡ ದಾಖಲೆಯನ್ನು ಮಾಡಿದ್ದಾರೆ. ಇದೇ ಕಾರಣಕ್ಕೆ ಅವರ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಇತ್ತೀಚೆಗೆ ವಾರಿಸು ಚಿತ್ರದ ಮೂಲಕ ಮತ್ತೊಂದು ಬಂಪರ್ ಹಿಟ್ ಪಡೆದುಕೊಂಡಿರುವ ಈ ನಟಿ ಈಗ ಸೆನ್ಸೇಷನಲ್ ದಾಖಲೆ ಸೃಷ್ಟಿಸಿದ್ದಾರೆ. ರಶ್ಮಿಕಾ ಆಗಾಗ ತಮ್ಮ ಸಿನಿಮಾ ಮತ್ತು ವೈಯಕ್ತಿಕ ಅನುಭವಗಳನ್ನು ತಮ್ಮ ಅಭಿಮಾನಿಗಳು ಮತ್ತು ಪ್ರೇಕ್ಷಕರೊಂದಿಗೆ Instagram ನಲ್ಲಿ ಹಂಚಿಕೊಳ್ಳುತ್ತಾರೆ.
ಇನ್ನು ಈಕೆಯ ಸಿನಿ ಜರ್ನಿ ಬಗ್ಗೆ ಹೇಳುವುದಾದರೆ, ಗುಡ್‌ಬೈ ಸಿನಿಮಾ ಮೂಲಕ ಮೊದಲ ಬಾರಿಗೆ ರಶ್ಮಿಕಾ ಬಾಲಿವುಡ್‌ನಲ್ಲಿ ಮಿಂಚಿದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ನಂತರ ಬಂದ ಮಿಷನ್ ಮಜ್ನು ಸಿನಿಮಾ ಕೂಡ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಯಿತು. ಸದ್ಯ ರಣಬೀರ್ ಕಪೂರ್ ಜೊತೆ ಅನಿಮಲ್ (Animal) ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸತತ ಸೋಲಿನ ಬಳಿಕವೂ ರಶ್ಮಿಕಾ ಮತ್ತೊಂದು ಹಿಂದಿ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಮಿತಾಭ್ ಬಚ್ಚನ್, ಸಿದ್ಧಾರ್ಥ್ ಮಲ್ಹೋತ್ರ ಮತ್ತು ರಣಬೀರ್ ಕಪೂರ್ ಬಳಿಕ ಇದೀಗ ರಶ್ಮಿಕಾ ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ದಿನೇಶ್ ವಿಜನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹಿಸ್ಟೋರಿಕಲ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರಂತೆ. ಈಗಾಗಲೇ ಟೈಟಲ್ ಕೂಡ ಬಾಲಿವುಡ್ ವೈರಲ್ ಆಗಿದೆ. 'ಛಾವಾ' ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ. ಇದು ಮರಾಠ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಮಹಾನ್ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜ್, ಹಿರಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಕುರಿತು ಇರುವ ಸಿನಿಮಾ ಇದಾಗಿದೆ ಎನ್ನಲಾಗಿದೆ.
Cannes 2023: ಬಾಲಿವುಡ್ನ ಈ ಸುಂದರಿ ಈಗ NATIONAL CRUSH! ರಶ್ಮಿಕಾ ಫ್ಯಾನ್ಸ್ ಶಾಕ್