ಕಾಲು ಮುರಿದುಕೊಂಡ ರಶ್ಮಿಕಾ! ಕುಂಟುತ್ತಾ ನಡೆವ ನಟಿಗೆ ವಿಕ್ಕಿ ಕೌಶಲ್ ಆಸರೆ- ವಿಡಿಯೋ ವೈರಲ್
ನಟಿ ರಶ್ಮಿಕಾ ಮಂದಣ್ಣ ಕಾಲು ಮುರಿದುಕೊಂಡಿದ್ದು, ವ್ಹೀಲ್ಚೇರ್ ಸಹಾಯ ಪಡೆಯುತ್ತಿದ್ದಾರೆ. ನಡೆದಾಡಲು ವಿಜಯ್ ದೇವರಕೊಂಡ ಸಹಾಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಸದಾ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇರುವ ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕಾಲು ಮುರಿದುಕೊಂಡಿರುವ ನಟಿಗೆ ಈಗ ವ್ಹೀಲ್ಚೇರ್ ಗತಿಯಾಗಿದೆ. ಚಿಕ್ಕ ಗಾಯ ಎಂದು ಹೆಚ್ಚು ಗಮನ ಕೊಡದದ್ದೇ ಈ ಪರಿ ವಿಪರೀತಕ್ಕೆ ಹೋಗಿದೆ ಎನ್ನಲಾಗಿದೆ. ಸಿಖಂದರ್ ಚಿತ್ರದ ಚಿತ್ರೀಕರಣದಲ್ಲಿ ನಟಿ ಭಾಗಿಯಾಗಬೇಕಿತ್ತು. ಆದರೆ ಇದರ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಇಂದು ನಟಿ, ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಾಗ, ಆಗಿರುವ ಗಾಯ ಗೊತ್ತಾಗಿದೆ. ಕಾರಿನಿಂದ ಇಳಿಯಲು ಆಗದೇ ಕಷ್ಟಪಡುತ್ತಿದ್ದ ನಟಿ ಕೊನೆಗೆ ವ್ಹೀಲ್‌ಚೇರ್‌ನಲ್ಲಿ ಬಂದರು. ಇದನ್ನು ನೋಡಿದ ಫ್ಯಾನ್ಸ್ ಶಾಕ್ಗೆ ಒಳಗಾಗಿದ್ದು, ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ಕೊನೆಗೆ ವಿಷಯ ರಿವೀಲ್ ಆಗಿದೆ.
ಬಲಗಾಲಿಗೆ ತೀವ್ರ ಏಟಾಗಿದೆ ಎನ್ನುವುದು ತಿಳಿಯುತ್ತದೆ. ಆದರೆ ಇಷ್ಟೆಲ್ಲಾ ಸಮಸ್ಯೆ ಇದ್ದರೂ, ತಮ್ಮ ಛಾವಾ ಚಿತ್ರದ ಪ್ರೊಮೋಷನ್ಗಾಗಿ ನಟಿ ಹೈದರಾಬಾದ್‌ದಿಂದ ಮುಂಬೈಗೆ ತೆರಳುವ ಸಂದರ್ಭದಲ್ಲಿ, ವಿಷಯ ಬೆಳಕಿಗೆ ಬಂದಿದೆ. ಛಾವಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದಾಗಲೇ ಸಿಖಂದರ್ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಿರುವುದಕ್ಕೆ ನಟಿ ಕ್ಷಮೆ ಕೋರಿದ್ದಾರೆ. ಇವೆಲ್ಲವುಗಳ ಮಧ್ಯೆ ಹೈಲೈಟ್ ಆಗ್ತಿರೋದು ನಟ ವಿಜಯ ದೇವರಕೊಂಡ ಅವರು, ರಶ್ಮಿಕಾರ ಕಾಳಜಿ ಮಾಡುತ್ತಿರುವ ರೀತಿಯಿಂದ. ವೇದಿಕೆಯ ಮೇಲೆ ಹಾರುತ್ತಾ ಹಾರುತ್ತಾ ಹೋದ ರಶ್ಮಿಕಾರನ್ನು ವಿಕ್ಕಿ ಕೌಶಲ್ ಅವರು ಕೈ ಹಿಡಿದು ಕರೆತಂದು, ಆಕೆಯನ್ನು ಜೋಪಾನವಾಗಿ ಕರೆದುಕೊಂಡು ಹೋಗುವ ವಿಡಿಯೋ ವೈರಲ್ ಆಗುತ್ತಿವೆ.
ರಿಷಬ್ ಶೆಟ್ಟಿ ಟ್ವೀಟ್ಗೆ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕಿಡಿಕಿಡಿ: ಜಾಲತಾಣದಲ್ಲಿ ಪರ-ವಿರೋಧಗಳ ಬಿಸಿಬಿಸಿ ಚರ್ಚೆ!
ಇನ್ನು ಛಾವಾ ಚಿತ್ರದ ಕುರಿತು ಹೇಳುವುದಾದರೆ, ಇದರಲ್ಲಿ ರಶ್ಮಿಕಾ ಮಂದಣ್ಣ ಜೊತೆ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಇದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮರಾಠ ಮಹಾರಾಜನ ಮಹಾರಾಣಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇದು ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿಕಾರಿ ಛತ್ರಪತಿ ಸಾಂಭಾಜಿ ಮಹಾರಾಜ್ ಅವರ ಜೀವನದ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಇದಕ್ಕೆ ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿದ್ದಾರೆ. ದಿನೇಶ್ ವಿಜ್ಜನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರ ನಿರ್ಮಾಣದ ಮುಂದಿನ ಚಿತ್ರ ಥಾಮಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರೇ ನಾಯಕಿಯಾಗಿರುವುದು ವಿಶೇಷ.
ಇನ್ನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ವದಂತಿಯ ನಡುವೆಯೇ, ವಿಕ್ಕಿ ಕೌಶಲ್ ಅವರು ನಟಿಗೆ ನೀಡಿರುವ ಸಹಕಾರದ ಕುರಿತು ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಯ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಗಳು ಯಾವಾಗಲೂ ನಡೆಯುತ್ತಿವೆ. ಇಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇವರಿಬ್ಬರ ಮದುವೆ 6 ತಿಂಗಳಿನಲ್ಲಿ ನಡೆಯಲಿದೆ ಎಂದು ಗುಲ್ಲೆದ್ದಿದೆ. ಅದಕ್ಕಾಗಿ ತಯಾರಿ ನಡೆಯುತ್ತಿದ್ದು, ಸೀಕ್ರೆಟ್ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗಿದೆ. 2025ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಇಷ್ಟೆಲ್ಲ ರೂಮರ್ಸ್ ಇದ್ದರೂ ಎಲ್ಲಿ ಕೂಡ ಇಬ್ಬರು ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿಲ್ಲ. ಇತ್ತೀಚೆಗೆ ರೆಸ್ಟೋರೆಂಟ್ ನಲ್ಲಿ ಇಬ್ಬರೂ ಡಿನ್ನರ್ ಡೇಟ್ ನಲ್ಲಿರುವ ಫೋಟೋ ವೈರಲ್ ಆಗಿತ್ತು.ಪುಷ್ಪ 2 ಪ್ರಚಾರದ ವೇಳೆ, ನಿಮ್ಮ ಮದುವೆ ಆಗಲಿರುವವರು ನಟರೇ? ಎಂಬ ಪ್ರಶ್ನೆಗೆ, ರಶ್ಮಿಕಾ ಎಲ್ಲರಿಗೂ ಗೊತ್ತಲ್ಲವೇ ಎಂದಿದ್ದಾರೆ. ವಿಜಯ್ ದೇವರಕೊಂಡ ( vijay devarakonda) 37 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಶೀಘ್ರದಲ್ಲೇ ಮದುವೆಯಾಗಬಹುದು ಎಂಬ ಊಹಾಪೋಹಗಳಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ವರ್ಷದ ಆರಂಭದಲ್ಲಿ ವಿಜಯ್ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಎಂದು ಹೇಳಿದ್ದರು. ಈಗ ಈ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ರಶ್ಮಿಕಾ ಬಣ್ಣದ ಬದುಕಿಗೆ 8 ವರ್ಷ, ರಕ್ಷಿತ್ ಶೆಟ್ಟಿ ಕೊಟ್ಟ ಚಾನ್ಸ್, ಫ್ಯಾನ್ಸ್‌ಗೆ ಥ್ಯಾಂಕ್ಸ್!