Asianet Suvarna News Asianet Suvarna News

ಅನಿಮಲ್​ ನಿರ್ದೇಶಕ ಹೊಟ್ಟೆಗೆ ಏನ್​ ತಿಂತಾರೋ ಗೊತ್ತಿಲ್ಲ: ಹಸಿಬಿಸಿ ದೃಶ್ಯದ ಬಳಿಕ ರಶ್ಮಿಕಾ ಹೇಳಿದ್ದೇನು?

ಅನಿಮಲ್​ ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರೋ ರಶ್ಮಿಕಾ ಮಂದಣ್ಣ, ಅನಿಮಲ್​ ಚಿತ್ರದ ನಿರ್ದೇಶಕನ ಬಗ್ಗೆ ಹೇಳಿದ್ದೇನು?
 

Rashmika Mandanna feels Sandeep Vanga functions differently He should be protected suc
Author
First Published Jan 19, 2024, 2:48 PM IST | Last Updated Jan 19, 2024, 2:48 PM IST

'ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಅನಿಮಲ್​ ಚಿತ್ರ ಭರ್ಜರಿ ಸದ್ದು ಮಾಡಿದ್ದೂ ಅಲ್ಲದೇ ನಾಗಾಲೋಟದಿಂದ ಓಡಿದೆ. ಈ ಚಿತ್ರದಲ್ಲಿ  ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ.  ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯ ಈ ಚಿತ್ರದಲ್ಲಿ ಮಿತಿ ಮೀರಿದೆ.  ಚಿತ್ರದಲ್ಲಿ ರಣಬೀರ್‌ ಕಪೂರ್‌   ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್‌ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ.  ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಕಳೆದ ಡಿಸೆಂಬರ್ ​1 ರಂದು ಬಿಡುಗಡೆಯಾಗಿರುವ ಚಿತ್ರದಲ್ಲಿ ಹಸಿಬಿಸಿ ದೃಶ್ಯಕ್ಕಂತೂ ಕೊರತೆಯೇ ಇಲ್ಲ.
 
ಚಿತ್ರದಲ್ಲಿ ನಟಿ ತೃಪ್ತಿ ಡಿಮ್ರಿ ಸಂಪೂರ್ಣವಾಗಿ ಬೆತ್ತಲಾಗಿ ಕಾಣಿಸಿಕೊಂಡು ರಾತ್ರೋರಾತ್ರಿ ನ್ಯಾಷನಲ್​  ಕ್ರಷ್​ ಎನಿಸಿಕೊಂಡರೆ, ನಟಿ ರಶ್ಮಿಕಾ ಮಂದಣ್ಣ ಹಸಿಬಿಸಿ ದೃಶ್ಯದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ, ಮೂರು ಪತ್ನಿಯರ ಮೇಲೆ ನಡೆಸುವ ಅತ್ಯಾಚಾರ, ಮಹಿಳೆಯನ್ನು ಕಾಮದ ವಸ್ತು ಎಂದು ಅಂದುಕೊಳ್ಳುವುದು, ಬೂಟನ್ನು ನೆಕ್ಕು ಎಂದು ಪತ್ನಿಗೆ ನಾಯಕ ಹೇಳುವುದು... ಇವೆಲ್ಲವನ್ನೂ ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವಾಗತಿಸಿ ಅನಿಮಲ್​ ಚಿತ್ರಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟಿದ್ದಾರೆ. ಒಂದು ಕಡೆ ಈ ಚಿತ್ರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದರೂ, ಚಿತ್ರ ಮಾತ್ರ ಸಕತ್​ ಯಶಸ್ಸು ಕಂಡಿದೆ. ಚಿತ್ರದ ಯಶಸ್ಸಿನ ಬಗ್ಗೆ ಖ್ಯಾತ ಗೀತ ರಚನೆಕಾರ ಜಾವೇದ್​ ಅಖ್ತರ್ ಸೇರಿದಂತೆ ಹಲವರು ಕಳವಳ ಕೂಡ ವ್ಯಕ್ತಪಡಿಸಿದ್ದಿದೆ.

'ಅನಿಮಲ್'​ ಯಶಸ್ಸು ಡೇಂಜರಸ್​ ಎಂದ ಜಾವೇದ್​ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ

ಆದರೆ ಚಿತ್ರದ ಬಳಿಕ ಇನ್ನೂ ಹೆಚ್ಚಿನ ಬೇಡಿಕೆ ಕುದುರಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಅನಿಮಲ್​ ನಿರ್ದೇಶಕ ​   ಸಂದೀಪ್ ರೆಡ್ಡಿ ವಂಗ ಅವರ ಕುರಿತು ಮಾತನಾಡಿದ್ದಾರೆ. ಇವರನ್ನು ನಟಿ ಸಿಕ್ಕಾಪಟ್ಟೆ ಹೊಗಳಿದ್ದಾರೆ.  ಸಂದೀಪ್​ ರೆಡ್ಡಿ ವಂಗ ಅವರು  ವಿಭಿನ್ನವಾಗಿ ಕೆಲಸ ಮಾಡುತ್ತಾರೆ. ಅವರು ಹೇಗೆ ಯೋಚಿಸುತ್ತಾರೆ ಅಥವಾ ಏನು ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಅವರು ಹೊಟ್ಟೆಗೆ ಏನು ತಿನ್ನುತ್ತಾರೆ ಎನ್ನುವುದೂ ಗೊತ್ತಿಲ್ಲ. ಆದರೆ ಅವರು ಚಿತ್ರಗಳನ್ನು ಮಾತ್ರ ತುಂಬಾ ಒಳ್ಳೆಯ ರೀತಿಯಲ್ಲಿ ಮಾಡುತ್ತಾರೆ. ಅದಕ್ಕೆ  ‘ಅನಿಮಲ್’ ಚಿತ್ರವೇ ಸಾಕ್ಷಿ ಎಂದಿದ್ದಾರೆ ನಟಿ.

ಅನಿಮಲ್​ನಂಥ ಸಿನಿಮಾ ನೋಡಿದಾಗ ಇಂಥ ಸಿನಿಮಾ ಬೇಕು ಎಂದು ಯಾರಿಗಾದರೂ ಎನ್ನಿಸುತ್ತದೆ.  ಸಂದೀಪ್ ಒಂದು ಕಥೆ ಮಾಡಿಕೊಂಡರೆ ಅದಕ್ಕೆ ಬದ್ಧರಾಗುತ್ತಾರೆ. ಜನಕ್ಕೆ ಹೇಗೆ ಬೇಕು ಎಂದು ಕೇಳಿ ಕಥೆ ಬದಲಾಯಿಸುವುದಿಲ್ಲ. ಅದು ನನಗೆ ಇಷ್ಟ. ಅವರು ಯಾವಾಗಲೂ ಹೀಗೆಯೇ ಇರಬೇಕು ಎಂಬುದು ನನ್ನ ಆಸೆ ಎಂದು ಹಾಡಿ ಹೊಗಳಿದ್ದಾರೆ.  ಅನಿಮಲ್​ ಚಿತ್ರದ ಮುಂಭಾಗವಾಗಿ ‘ಅನಿಮಲ್ ಪಾರ್ಕ್‌’ ಚಿತ್ರ ಬರುತ್ತಿರುವ ಕುರಿತು ಮಾತನಾಡಿದ ನಟಿ, ಈ ಚಿತ್ರದ  ಕಥೆ ಹೇಗೆ ಬೇಕಾದರೂ ಇರಬಹುದು. ಆದರೆ ಇದು ರೋಮಾಂಚನಕಾರಿಯಾಗಿದೆ.  ಅನಿಮಲ್ ಪಾರ್ಕ್​ ಮೂಲಕ ದೊಡ್ಡ ಸಕ್ಸಸ್ ಕಾಣೋ ಭರವಸೆಯಲ್ಲಿ ಅವರಿದ್ದಾರೆ ಎಂದು ಹಾಡಿ ಹೊಗಳಿರುವ ರಶ್ಮಿಕಾ, ಈ ಚಿತ್ರದಲ್ಲಿ ಇನ್ನು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ನೋಡಬೇಕಿದೆಯಷ್ಟೇ.

ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್​ ಹಖ್ ರೊಮ್ಯಾಂಟಿಕ್​ ವ್ಯಕ್ತಿ ಎಂದ ಬಾಬಿ ಡಿಯೋಲ್​!
 

Latest Videos
Follow Us:
Download App:
  • android
  • ios