ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಪ್ರಕರಣ, ದೆಹಲಿಯಲ್ಲಿ ನಾಲ್ವರು ಪೊಲೀಸ್ ವಶಕ್ಕೆ!
ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು. ಕೇಂದ್ರ ಸರ್ಕಾರ ಕೂಡ ಡೀಪ್ ಫೇಕ್ ಮಟ್ಟ ಹಾಕಲು ಚರ್ಚೆ ನಡೆಸಿತ್ತು. ಇದೀಗ ರಶ್ಮಿಕಾ ಮಂದಣ್ಣ ವಿಡಿಯೋ ಅಪ್ಲೋಡ್ ಮಾಡಿದ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿ(ಡಿ.20) ಭಾರತದಲ್ಲಿ ಇತ್ತೀಚೆಗೆ ಡೀಫ್ ಫೇಕ್ ವಿಡಿಯೋ ಆತಂಕ ಹೆಚ್ಚಾಗಿದೆ. ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಹಲವು ನಟಿಯರ ವಿಡಿಯೋ ಇದೇ ರೀತಿ ವೈರಲ್ ಆಗಿತ್ತು. ಇದು ದೇಶದ ನಿದ್ದೆಗೆಡಿಸಿತ್ತು. ಕೇಂದ್ರ ಸರ್ಕಾರ ಕೂಡ ಡೀಪ್ ಫೇಕ್ ವಿಡಿಯೋ ಹಾಗೂ ಸವಾಲು ಕುರಿತು ಆತಂಕ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲ ಕಾನೂನು ಚೌಕಟ್ಟಿನಲ್ಲಿ ಡೀಪ್ ಫೇಕ್ ವಿಡಿಯೋ ಮಟ್ಟಹಾಕಲು ಚರ್ಚೆ ನಡೆಸಿತ್ತು. ಈ ಬೆಳವಣಿಗೆ ನಡುವೆ ಇದೀಗ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಅಪ್ಲೋಡ್ ಮಾಡಿದ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡಿದಿರುವ ನಾಲ್ವರ ಪೈಕಿ ಮೂವರ ಮಾಹಿತಿಯನ್ನು ಫೇಸ್‌ಬುಕ್ ಮೆಟಾ ನೀಡಿತ್ತು. ಈ ಮಾಹಿತಿ ಪಡೆದ ದೆಹಲಿ ಸೈಬರ್ ಪೊಲೀಸರು ಒಟ್ಟು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಡೀಪ್ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪ್ಲೋಡ್ ಮಾಡಿದ ವ್ಯಕ್ತಿಗಳು ವಿಡಿಯೋ ಡಿಲೀಟ್ ಮಾಡಿದ್ದರು. ಹೀಗಾಗಿ ಪೊಲೀಸರಿಗೆ ಆರೋಪಿಗಳನ್ನು ಟ್ರೇಸ್ ಮಾಡುವುದು ಕಷ್ಟವಾಗಿತ್ತು.
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ಪ್ರಕರಣ: 19 ವರ್ಷದ ಯುವಕ ಪೊಲೀಸರ ಬಲೆಗೆ- ಈತ ಹೇಳಿದ್ದೇನು?
ಸದ್ಯ ವಶದಲ್ಲಿರುವ ನಾಲ್ವರು ಡೀಪ್ ಫೇಕ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆದರೆ ಈ ವಿಡಿಯೋವನ್ನು ಅಭಿವೃದ್ಧಿಪಡಿಸಿದ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ. ಭಾರಿ ಚಾಕಚಕ್ಯತೆ ಬಳಿಸಿರುವ ಕಾರಣ ಈ ವಿಡಿಯೋ ಅಭಿವೃದ್ಧಿಪಡಿಸಿದ ಆರೋಪಿಗಳ ಪತ್ತೆ ಕಷ್ಟವಾಗುತ್ತಿದೆ. ಆದರೆ ಸೈಬರ್ ಪೊಲೀಸರು, ಮೆಟಾ ಸೇರಿದಂತೆ ಇತರ ಮಾಹಿತಿಗಳ ಆಧರಿಸಿ ಶೀಘ್ರದಲ್ಲೇ ಪ್ರಮುಖ ಆರೋಪಿ ಪತ್ತೆಹಚ್ಚುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.
ಡೀಪ್‌ಫೇಕ್ ತಂತ್ರಜ್ಞಾನದ ಅನಾಹುತಗಳನ್ನು ತಡೆಯುವ ಸಂಬಂಧ ಕೆಲ ದಿನಗಳ ಹಿಂದಷ್ಟೇ ಜಾಲತಾಣಗಳ ಜೊತೆ ಸಭೆ ನಡೆಸಿದ್ದ ಕೇಂದ್ರ ಸರ್ಕಾರ, ತನ್ನ ಸೂಚನೆಗಳ ಪಾಲನೆಯಾಗಿರುವ ವಿಷಯ ಪರಿಶೀಲಿಲು ಮತ್ತೆ ಸಭೆ ನಡೆಸಿತ್ತು. ಡೀಪ್‌ಫೇಕ್ ತಂತ್ರಜ್ಞಾನ ವಿಷಯದಲ್ಲಿ ತಾನು ಪ್ರಸ್ತಾಪಿಸಿರುವ ಬಳಕೆದಾರರಿಗೆ ಹಾನಿ ತರಬಹುದಾದ 11 ಅಂಶಗಳನ್ನು ನಿಯಂತ್ರಿಸಲು ಎಲ್ಲಾ ಜಾಲತಾಣಗಳು ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಪಾಲನೆ ಆಗದೇ ಇದ್ದಲ್ಲಿ ಅವು ಹಾಲಿ ಅಸ್ತಿತ್ವದಲ್ಲಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಿಮಿನಲ್ ಅಪರಾಧವಾಗಿ ಪರಿಗಣಿತವಾಗುತ್ತದೆ. ಜಾಲತಾಣಗಳು ಅವುಗಳ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರ ಸಭೆಯಲ್ಲಿ ನೀಡಿದೆ ಎನ್ನಲಾಗಿದೆ.
ರಶ್ಮಿಕಾ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್! ಕೇಂದ್ರ ಸರ್ಕಾರದ ಆದೇಶಕ್ಕೂ ಖದೀಮರು ಡೋಂಟ್ ಕೇರ್!