ಈ ರಾಣಿಜೇನು ಈಗ ಕಾಲು ಮುರಿದುಕೊಂಡು ಪರದಾಡ್ತಾ ಇದ್ದಾಳೆ. ಇತ್ತೀಚಿಗೆ ಜಿಮ್​ನಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ರಶ್ಮಿಕಾಗೆ ಬಲಗಾಲನ್ನ ನೆಲಕ್ಕೆ ಊರಲಿಕ್ಕೆ ಆಗ್ತಾ ಇಲ್ಲ. ವೀಲ್ ಚೇರ್ ಮೇಲೆ ಓಡಾಡುವ ಸ್ಥಿತಿ ಕಿರಿಕ್ ಬ್ಯೂಟಿಗೆ ಬಂದಿದೆ... 

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿಗೆ ಕಾಲಿಗೆ ಪೆಟ್ಟು ಮಾಡಿಕೊಂಡಿರೋದು ಗೊತ್ತೇ ಇದೆ. ಛಾವಾ ಸಿನಿಮಾದ ಟ್ರೈಲರ್ ಲಾಂಚ್​ಗೆ ಕುಂಟಿಕೊಂಡೇ ಬಂದಿರೋ ರಶ್ಮಿಕಾ ಕಮಿಟ್​ಮೆಂಟ್​​ನ ಎಲ್ಲರೂ ಕೊಂಡಾಡ್ತಾ ಇದ್ದಾರೆ. ಆದ್ರೆ ಛಾವಾ ಇವೆಂಟ್​ನಲ್ಲಿ ರಶ್ಮಿಕಾ ರಿಟೈರ್ ಆಗೋ ಮಾತನಾಡಿದ್ದಾರೆ. ಅರೇ ರಶ್ಮಿಕಾಗೆ ಏನಾಯ್ತು ಯಶಸ್ಸಿನ ಉತ್ತುಂಗದಲ್ಲಿರೋವಾಗಲೇ ಕಿರಿಕ್ ಬ್ಯೂಟಿ ಬಣ್ಣದ ದುನಿಯಾಗೆ ಗುಡ್ ಬೈ ಹೇಳ್ತಾರಾ..? ರಶ್​ಗೆ ಅಂಥದ್ದೇನಾಯ್ತು ಅಂತೀರಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ರಶ್ಮಿಕಾ ನಟಿಸಿರೋ ಛಾವಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಛಾವಾ ಮೂವಿ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಆಧಾರಿತ ಕಥೆ. ವಿಕ್ಕಿ ಕೌಶಾಲ್ ಇಲ್ಲಿ ಸಂಭಾಜಿ ಮಹರಾಜ್ ಆಗಿ ನಟಿಸಿದ್ರೆ ರಶ್ಮಿಕಾ ರಾಣಿ ಯೇಸುಬಾಯಿ ಪಾತ್ರವನ್ನ ಮಾಡಿದ್ದಾರೆ. ಮಹಾರಾಣಿ ಅವತಾರದಲ್ಲಿ ರಶ್ಮಿಕಾ ಲುಕ್ ಸಖತ್ ಗ್ರ್ಯಾಂಡ್ ಆಗಿದೆ. ಇದನ್ನ ನೋಡಿದವರು ನಮ್ಮ ರಶ್ಮಿಕಾ ಅಪ್ಪಟ ರಾಣಿಜೇನು ಕಣ್ರೀ ಅಂತಿದ್ದಾರೆ.

ಆದ್ರೆ ಈ ರಾಣಿಜೇನು ಈಗ ಕಾಲು ಮುರಿದುಕೊಂಡು ಪರದಾಡ್ತಾ ಇದ್ದಾಳೆ. ಇತ್ತೀಚಿಗೆ ಜಿಮ್​ನಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ರಶ್ಮಿಕಾಗೆ ಬಲಗಾಲನ್ನ ನೆಲಕ್ಕೆ ಊರಲಿಕ್ಕೆ ಆಗ್ತಾ ಇಲ್ಲ. ವೀಲ್ ಚೇರ್ ಮೇಲೆ ಓಡಾಡುವ ಸ್ಥಿತಿ ಕಿರಿಕ್ ಬ್ಯೂಟಿಗೆ ಬಂದಿದೆ.

ಇನ್ನೂ ಛಾವಾ ಸಿನಿಮಾದ ಟ್ರೈಲರ್​ ಲಾಂಚ್​ಗೂ ವೀಲ್ ಚೇರ್ ಮೇಲೆ ಬಂದಿರೋ ರಶ್ಮಿಕಾ, ಒಂದೇ ಕಾಲಲ್ಲಿ ಕುಂಟಿಕೊಂಡೇ ವೇದಿಕೆ ಏರಿದ್ದಾರೆ. ಕುಂಟುತ್ತಾ ಕುಂಟುತ್ತಾ ವೇದಿಕೆ ಹತ್ತಿರೋ ರಶ್ಮಿಕಾಳ ವಿಡಿಯೋ ಕಂಡು ಎಲ್ಲರೂ ಅಯ್ಯೋ ಪಾಪ ಅಂತಿದ್ದಾರೆ. ಅದೆಷ್ಟು ಕಷ್ಟ ಪಡ್ತಿದಾರೆ ಕನ್ನಡತಿ, ಕೊಡಗಿನ ಕುವರಿ ಅಂತ ಎಲ್ರೂ ಮಾತಾಡ್ಕೊಂಡಿದ್ದಂತೂ ಸುಳ್ಳಲ್ಲ!

ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿ ನಿರಾಕರಣೆ ಹಿಂದಿದೆ ಹಳೆಯ ಷಡ್ಯಂತ್ರ, ಅವಮಾನದ ನೋವು!

ಇತ್ತೀಚಿಗೆ ಹಲವು ನಟಿಮಣಿಯರು ಸಿನಿಮಾ ಪ್ರಚಾರದಿಂದ ತಪ್ಪಿಸಿಕೊಳ್ಳೋದಕ್ಕೆ ನೋಡ್ತಾರೆ. ಏನಾದರೊಂದು ಕುಂಟು ನೆಪ ಹೇಳಿ ಪ್ರಮೋಷನ್ಸ್​ನಿಂದ ತಪ್ಪಿಸಿಕೊಳ್ತಾರೆ. ಆದ್ರೆ ಕಾಲಿಗೆ ಇಷ್ಟೆಲ್ಲಾ ಗಂಭೀರ ಗಾಯ ಆದ್ರೂ ನೆಪ ಹೇಳದೇ ಕುಂಟುತ್ತಲೇ ಪ್ರಚಾರ ಮಾಡಿರೋ ರಶ್ಮಿಕಾ ಕಮಿಟ್​ಮೆಂಟ್ ಕಂಡು ಎಲ್ಲರೂ ಮೆಚ್ಚುಗೆಯ ಮಾತನಾಡ್ತಾ ಇದ್ದಾರೆ.ಮುರಿದ ಕಾಲಲ್ಲೇ ಕುಂಟುತ್ತಲೇ ಬಂದಿರೋ ನಟಿ ರಶ್ಮಿಕಾ ಮಂದಣ್ಣ ಹಿಂದಿದೆ ದೊಡ್ಡ ನಿರ್ಧಾರ, ಅದು ಸಿನಿಮಾದ ಮೇಲಿನಪ್ರೀತಿ ಹಾಗೂ ಕಮಿಟ್‌ಮೆಂಟ್!

ಹೌದು, ಛಾವಾ ಟ್ರೈಲರ್ ಲಾಂಚ್ ಇವೆಂಟ್​​ನಲ್ಲಿ ರಶ್ಮಿಕಾ ರಿಟೈರ್​ಮೆಂಟ್ ಬಗ್ಗೆ ಮಾತನಾಡಿದ್ದಾರೆ. ಅರೇ ರಶ್ಮಿಕಾ ಇದೀಗ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಪುಷ್ಪ-2 ಅಮೋಘ ಸಕ್ಸಸ್ ಕಂಡಿದೆ. ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸ್ತಾ ಇದ್ದಾರೆ. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೀತಾ ಇದ್ದಾರೆ. ಇಂಥಾ ಟೈಂನಲ್ಲಿ ರಿಟೈರ್​ಮೆಂಟ್ ಮಾತೇಕೆ ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ.

ಭಾರೀ ಬಿಗ್‌ ಡೀಲ್‌ಗೆ ಕೈ ಹಾಕಿರೋ ಕಿಚ್ಚ ಸುದೀಪ್, ಸದ್ಯದಲ್ಲೇ ಅದು ರಿವೀಲ್!

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಶುರುವಾದ ರಶ್ಮಿಕಾ ಜರ್ನಿ ಈಗ ಪೀಕ್​ನಲ್ಲಿದೆ. ಸೌತ್​ನಿಂದ ಹಿಡಿದು ಬಾಲಿವುಡ್​ನ ಬಿಗ್ ಸ್ಟಾರ್​ಗಳ ವರೆಗೆ ಎಲ್ಲರ ಜೊತೆಗೆ ರಶ್ಮಿಕಾ ಮಿಂಚಿ ಮಿನುಗಿ ಆಗಿದೆ. ರಶ್ಮಿಕಾ ನಟಿಸಿದ ಸಿನಿಮಾಗಳು ಸಾವಿರಾರು ಕೋಟಿ ಗಳಿಕೆ ಮಾಡಿವೆ. ಒಬ್ಬ ನಟಿಯಾಗಿ ಏನೆಲ್ಲಾ ಯಶಸ್ಸು ನೋಡಬೇಕೋ ಅದನ್ನೆಲ್ಲಾ ರಶ್ಮಿಕಾ ನೋಡಿಯಾಗಿದೆ. ಸೋ ಎಲ್ಲಾ ನೋಡಿಯಾಯ್ತು ಇನ್ನು ಸಾಕು ಅನ್ನೋ ತೀರ್ಮಾನಕ್ಕೆ ರಶ್ಮಿಕಾ ಬಂದ್ರಾ..? ಗೊತ್ತಿಲ್ಲ.

ಈ ವರ್ಷ ಮದುವೆ ಮಾಡ್ಕೊಂಡು ಸೆಟಲ್ ಆಗ್ತಾರಾ ರಶ್ಮಿಕಾ..?
ಯೆಸ್, ರಶ್ಮಿಕಾ ಈ ವರ್ಷ ಮದುವೆಯಾಗ್ತಾರೆ ಅನ್ನೋ ಸುದ್ದಿ ಕೂಡ ಇದೆ. ಖುದ್ದು ಪುಷ್ಪ-2 ಇವೆಂಟ್​​ನಲ್ಲಿ ತನ್ನ ಇನಿಯ ಯಾರು ಅನ್ನೋದನ್ನ ರಶ್ಮಿಕಾ ಹೇಳಿಕೊಂಡಿದ್ರು. ವಿಜಯ್ ದೇವರಕೊಂಡ-ರಶ್ಮಿಕಾ ರಿಲೇಷನ್ ಶಿಪ್ ಗುಟ್ಟಾಗೇನೂ ಉಳಿದಿಲ್ಲ. ಸೋ ಈ ವರ್ಷ ಈ ಜೋಡಿ ಮದುವೆಯಾಗಬಹುದು. ಆ ಬಳಿಕ ರಶ್ಮಿಕಾ ಸಿನಿಲೋಕದಕ್ಕೆ ಗುಡ್ ಬೈ ಹೇಳಬಹುದು ಎನ್ನಲಾಗ್ತಾ ಇದೆ.

ಸೋ ರಶ್ಮಿಕಾ ಬಾಯಲ್ಲಿ ರಿಟೈರ್​ಮೆಂಟ್ ಮಾತು ಬಂದಿದ್ದಕ್ಕೆ ಇಷ್ಟೆಲ್ಲಾ ಚರ್ಚೆ ಶುರುವಾಗಿದೆ. ಆದ್ರೆ ರಶ್ಮಿಕಾ ನಿಜಕ್ಕೂ ಹೇಳಿದ್ದು, ಛಾವಾ ಸಿನಿಮಾದ ರಾಣಿ ಯೇಸುಬಾಯಿ ಪಾತ್ರ ಮಾಡಿದ ಮೇಲೆ ಅದೆಷ್ಟು ತೃಪ್ತಿಯಾಗಿದೆ ಅಂದ್ರೆ ನಾನು ಈಗಲೇ ರಿಟೈರ್ ಆಗೋಕೆ ರೆಡಿ ಅಂತ.

ಅನುಪಮಾಗೆ ಚಾನ್ಸ್ ಯಾಕಿಲ್ಲ? ದಾರಿನ ಅವ್ರೇ ಕಂಡ್ಕೊಂಡಿದಾರೆ, ಜಾಗ ಬಿಡಿ ಅಷ್ಟೇ!

ಒಟ್ಟಾರೆ ರಶ್ಮಿಕಾ ಬಾಯಲ್ಲಿ ರಿಟೈರ್​ಮೆಂಟ್ ಮಾತು ಕೇಳಿ ಈಕೆಯ ಫ್ಯಾನ್ಸ್ ಕಂಗಾಲಾಗಿರೋದು ಸುಳ್ಳಲ್ಲ. ಮೊದಲೇ ರಶ್ ಕಾಲು ಮುರಿದುಕೊಂಡಿದ್ದಕ್ಕೆ ಘಾಸಿಯಾಗಿರೋ ನಮ್ಮ ಹೃದಯಕ್ಕೆ ರಿಟೈರ್​ಮೆಂಟ್ ಬಗ್ಗೆ ಮಾತಾಡಿ ಮತ್ತಷ್ಟು ನೋವು ಮಾಡಬೇಕಿತ್ತಾ ಅಂತಿದ್ದಾರೆ ಶ್ರೀವಲ್ಲಿ ಭಕ್ತರು..!