Asianet Suvarna News Asianet Suvarna News

ನಯನತಾರಾ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ, ಸಲ್ಮಾನ್ ಜೊತೆಗಿನ ಚಿತ್ರಕ್ಕೆ ಪಡೆದ ಸಂಭಾವನೆ ಇಷ್ಟೊಂದಾ?

ದಕ್ಷಿಣ ಭಾರತದ ನಟಿಯರ ಪೈಕಿ ಗರಿಷ್ಠ ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಗೆ ಇಲ್ಲೀವರೆಗ ನಯನತಾರಾ ಪಾಲಾಗಿತ್ತು. ನಯನತಾರಾ ಪ್ರತಿ ಚಿತ್ರಕ್ಕೆ 10 ರಿಂದ 12 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಜೊತೆಗಿನ ಸಿಕಂದರ್ ಚಿತ್ರಕ್ಕೆ ಪಡೆದ ಸಂಭಾವನೆ ಎಲ್ಲಾ ದಾಖಲೆ ಪುಡಿ ಮಾಡಿದೆ.
 

Rashmika Mandanna Charge rs 13 crore for upcoming Bollywood Sikandar movie says Report ckm
Author
First Published Jun 15, 2024, 5:08 PM IST

ಮುಂಬೈ(ಜೂ.15) ನಟಿ ನಯತನಾರಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ರಶ್ಮಿಕಾ ಮಂದಣ್ಣ ಮುರಿದಿದ್ದಾರೆ. ದಕ್ಷಿಣ ಭಾರತದ ನಟಿಯರ ಪೈಕಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಯನತಾರಾ ಪ್ರತಿ ಚಿತ್ರಕ್ಕೆ 10 ರಿಂದ 12 ಕೋಟಿ ರೂಪಾಯಿ ಚಾರ್ಚ್ ಮಾಡುತ್ತಾರೆ. ಆದರೆ ನಯತನಾರಾ ದಾಖಲೆಯನ್ನು ರಶ್ಮಿಕಾ ಮಂದಣ್ಣ ಮುರಿದಿದ್ದಾರೆ. ಇದೀಗ ನಟ ಸಲ್ಮಾನ್ ಖಾನ್ ಜೊತೆ ಸಿಕಂಕದರ್ ಬಾಲಿವುಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಮೂಲಗಳ ಪ್ರಕಾರ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಬರೋಬ್ಬರಿ 13 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್‌ನ ಆ್ಯನಿಮಲ್ ಚಿತ್ರದ ಯಶಸ್ಸಿನಲ್ಲಿ ರಶ್ಮಿಕಾ ಮಂದಣ್ಣಗೆ ಇದೀಗ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಆಫರ್ ಬರುತ್ತಿದೆ. ಈ ಪೈಕಿ ಎಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರ ಅದ್ಧೂರಿಯಾಗಿ ಸೆಟ್ಟೇರಿದೆ. ಸಲ್ಮಾನ್ ಖಾನ್ ಅಭಿನಯದ ಈ ಚಿತ್ರಕ್ಕೆ ಭಾರಿ ಬಜೆಟ್ ಸುರಿಯಾಲಾಗುತ್ತಿದೆ. ಈ ಚಿತ್ರಕ್ಕೆ ನಾಯಕಿಯಾಗಿರುವ ರಶ್ಮಿಕಾ ಮಂದಣ್ಣ 13 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ರಶ್ಮಿಕಾ ಮಂದಣ್ಣ ಹತ್ರ ಇರೋ ಐಷಾರಾಮಿ ಕಾರುಗಳು ಒಂದೆರಡಲ್ಲ, ಆಸ್ತಿಯೂ ಕಮ್ಮಿ ಇಲ್ಲ!

ರಶ್ಮಿಕಾ ಮಂದಣ್ಣ ಈ ಹಿಂದಿನ ಆ್ಯನಿಮಲ್ ಚಿತ್ರಕ್ಕೆ 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಆ್ಯನಿಮಲ್ ಚಿತ್ರದ ಯಶಸ್ಸೂ ಹಾಗೂ ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಲಕ್ಕಿ ಚಾರ್ಮ್ ಆಗಿ ಹೊರಹೊಮ್ಮಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಸಂಭಾವನೆಯನ್ನೂ ರಶ್ಮಿಕಾ ಹೆಚ್ಚಿಸಿದ್ದಾರೆ. ಇದೀಗ ಸಿಕಂದರ್ ಚಿತ್ರಕ್ಕೆ 13 ಕೋಟಿ ರೂಪಾಯಿ ಚಾರ್ಚ್ ಮಾಡಿದ್ದರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸಂಭಾವನೆ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇಷ್ಟೇ ಅಲ್ಲ ಈ ಚಿತ್ರದ ಬಜೆಟ್ ಕುರಿತು ಅಧಿಕೃತ ಮಾಹಿತಿಗಳು ಬಹಿರಂಗವಾಗಿಲ್ಲ.

ರಶ್ಮಿಕಾ ಮಂದಣ್ಣ 13 ಕೋಟಿ ರೂ ಸಂಭಾವನೆ ಮೂಲಕ ದಕ್ಷಿಣ ಭಾರತದ ಗರಿಷ್ಠ ಸಂಭಾವನೆ ಪಡೆಯುತ್ತಿರುವ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ಮುರುಗದಾಸ್ ನಿರ್ದೇಶನದ ಈ ಸಿಕಂದರ್ ಚಿತ್ರ ಮುಂದಿನ ವಾರದಿಂದ ಶೂಟಿಂಗ್ ಆರಂಭಿಸಲಿದೆ. 2025ರ ಈದ್ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರದಲ್ಲಿ ಬಾಲಿವುಡ್‌ನ ಕೆಲ ಸ್ಟಾರ್ ನಟ ನಟಿಯರು ಕಾಣಿಸಿಕೊಳ್ಳಲಿದ್ದಾರೆ.  

ಅಭಿಮಾನಿ ಪೋಸ್ಟಿಗೆ ಗೆ ರಶ್ಮಿಕಾ ಮಂದಣ್ಣ ಹಾರ್ಟ್ ಟಚಿಂಗ್ ಕಮೆಂಟ್
 

Latest Videos
Follow Us:
Download App:
  • android
  • ios