Asianet Suvarna News Asianet Suvarna News

ದೀಪಾವಳಿಯಲ್ಲೂ ಸದ್ದು ಮಾಡ್ತಿದೆ ರಶ್ಮಿಕಾ-ವಿಜಯ್​ ದೇವರಕೊಂಡ ಜೋಡಿ: ಏನಪ್ಪಾ ಈ ಗುಸುಗುಸು?

ದೀಪಾವಳಿಯಲ್ಲೂ ಸದ್ದು ಮಾಡ್ತಿದೆ ರಶ್ಮಿಕಾ-ವಿಜಯ್​ ದೇವರಕೊಂಡ ಜೋಡಿ: ಏನಪ್ಪಾ ಈ ಗುಸುಗುಸು?
 

Rashmika Mandanna Celebrates Diwali With Vijay Deverakonda Amid Deepfake Row suc
Author
First Published Nov 14, 2023, 5:52 PM IST

ವಿಜಯ್​ ದೇವರಕೊಂಡ ಅವರು ನಟಿ ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ಸುದ್ದಿ ತುಂಬಾ ಹಳೆಯದ್ದು. ಇವರಿಬ್ಬರು ಎಲ್ಲಿಯೇ ಹೋದರೂ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಆದರೆ ಈ ಸುದ್ದಿಯನ್ನು ರಶ್ಮಿಕಾ ಒಮ್ಮೆ ಅಲ್ಲಗಳೆದಿದ್ದರು.  ನಾನು, ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ನನಗೆ ಫ್ರೆಂಡ್ಸ್ ಸರ್ಕಲ್ ಇದೆ, ಅವರ ಜೊತೆಯೇ ನಾನು ಜಾಸ್ತಿ ಮಾತನಾಡ್ತೀನಿ, ತಿರುಗಾಡ್ತೀನಿ. ಅದರಲ್ಲೇನು ಎಂದು ಸ್ವಲ್ಪ ಗರಂ ಆಗಿದ್ದರು.  ಇವರಿಬ್ಬರೂ ನ್ಯೂಯಾರ್ಕ್​ಗೆ ಹೋಗಿದ್ದರು ಎನ್ನುವ ಸುದ್ದಿ ಬಹಳ ಸದ್ದು ಮಾಡಿದ್ದ ಬಗ್ಗೆಯೂ ಮಾತನಾಡಿದ್ದ ರಶ್ಮಿಕಾ  ನಾವು 10 ಜನರು ಒಟ್ಟಿಗೆ ಟ್ರಿಪ್ ಹೋಗ್ತೀವಿ. ಈಗ ಎಲ್ಲರೂ ಸ್ನೇಹಿತರ ಜೊತೆ ಟ್ರಿಪ್ ಹೋಗ್ತಾರೆ. ಅದರಲ್ಲೇನಿದೆ ಎಂದಿದ್ದರು. ಆದರೆ ನಂತರ,  ಟರ್ಕಿಯಲ್ಲಿ ಒಟ್ಟಿಗೇ ಇದ್ದರು ಎನ್ನುವುದು ಇಬ್ಬರ ಫೋಟೋಗಳಿಂದ ಫ್ಯಾನ್ಸ್​ ಪತ್ತೆ ಹಚ್ಚಿದ್ದರು.   ವಿಜಯ ಮತ್ತು ರಶ್ಮಿಕಾ ಟರ್ಕಿಯ ಫೋಟೋಗಳನ್ನು ತುಂಬಾ ದಿನಗಳ ಅಂತರದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​  ಮಾಡಿಕೊಂಡಿದ್ದರು. ಮೊದಲು ಇದನ್ನು ವಿಜಯ್​ ಶೇರ್​ ಮಾಡಿಕೊಂಡಿದ್ದರು. ರೆಸ್ಟೋರೆಂಟ್​ ಒಂದರಲ್ಲಿ ಆಹಾರ ಸೇವಿಸುವ ಫೋಟೋ ಇದಾಗಿದೆ. ಅದೇ ಬ್ಯಾಕ್​ಗ್ರೌಂಡ್​ ಇರುವ ಫೋಟೋವನ್ನು ರಶ್ಮಿಕಾ ಬಹಳ ದಿನಗಳ ಬಳಿ ಶೇರ್​ ಮಾಡಿಕೊಂಡಿದ್ದು, ಇದು ತುಂಬಾ ಹಳೆಯ ಫೋಟೋ ಎಂದಿದ್ದರು. ಆದರೆ ಇಬ್ಬರ ಫೋಟೋಗಳನ್ನು ಕಂಪೇರ್​ ಮಾಡಿರುವ ಫ್ಯಾನ್ಸ್​ ಇವೆರಡೂ ಒಂದೇ ಹೋಟೆಲ್​ನದ್ದು ಎಂದಿದ್ದರು.

ಇದೀಗ ಇಬ್ಬರೂ ದೀಪಾವಳಿಯನ್ನು ಒಂದೇ ಮನೆಯಲ್ಲಿ ಆಚರಿಸಿದ್ರಾ ಎನ್ನುವ ಗುಮಾನಿ ಅವರ ಅಭಿಮಾನಿಗಳಿಗೆ ಶುರುವಾಗಿದೆ. ಇದಕ್ಕೆ ಕಾರಣ, ಇಬ್ಬರೂ ಒಂದೇ ರೀತಿಯಲ್ಲಿ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ,ಮಾತ್ರವಲ್ಲದೇ ಹಿಂದೆ ಇರುವ ವಾಲ್​ ಡಿಸೈನ್​ ಕೂಡ ಒಂದೇ ರೀತಿ ಇದೆ ಎನ್ನುವುದು ನೆಟ್ಟಿಗರ ಅಭಿಮತ. ಆಗಿರೋದು ಏನೆಂದರೆ,  ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಬ್ಬರೂ ಶುಭಾಶಯ ಹಂಚಿಕೊಂಡಿದ್ದಾರೆ.  ರಶ್ಮಿಕಾ ಮಂದಣ್ಣ ಹಂಚಿಕೊಂಡ ಫೋಟೋ ಹಿಂದಿನ ವಾಲ್​ ಹಾಗೂ ವಿಜಯ್​ ದೇವಕೊಂಡ ಶೇರ್ ಮಾಡಿದ ಫೋಟೋಗಳಿರುವ ವಾಲ್​ ಡಿಸೈನ್ ಒಂದೇ ಇದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಕತ್ರೀನಾ ಟವಲ್​ ತಂದ ಆಪತ್ತು? ಇಸ್ಲಾಮಿಕ್​ ದೇಶಗಳಲ್ಲಿ ಸಲ್ಮಾನ್​ ಖಾನ್​ ಟೈಗರ್​-3 ಚಿತ್ರ ಬ್ಯಾನ್​!
 

ಅಂದಹಾಗೆ  ರಶ್ಮಿಕಾ, ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆ ನಂತರ ತೆಲಗು ಸಿನಿಮಾದಲ್ಲಿಯೂ ನಟಿಸಿದರು. ಒಂದಷ್ಟು ಸಿನಿಮಾಗಳನ್ನೂ ಮಾಡಿ ಸ್ಟಾರ್ ಆದರು. ರಶ್ಮಿಕಾ ಮಂದಣ್ಣ ಅವರು ತಮ್ಮ ಚಿತ್ರರಂಗದ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಕನ್ನಡದ ನಾಯಕ ರಕ್ಷಿತ್ ಶೆಟ್ಟಿ ಅವರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಸಂಬಂಧ ಮುರಿದು ಬಿತ್ತು. ರಶ್ಮಿಕಾ ಮಂದಣ್ಣ ಈಗ ಸೌತ್‌ ಸಿನಿಮಾಗಳ ಜೊತೆಗೆ ಬಾಲಿವುಡ್‌ನಲ್ಲಿಯೂ ಸದ್ದು ಮಾಡುತ್ತಿದ್ದಾರೆ. ಪುಷ್ಪಾ 2 ಸಿನಿಮಾದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಬಾಲಿವುಡ್ ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಸದ್ಯ ಇವರು ಡೀಪ್​ ಫೇಕ್​ ಪ್ರಕರಣದಿಂದ ಸುದ್ದಿಯಲ್ಲಿದ್ದಾರೆ. ಇನ್ನು, ಲೈಗರ್ ಸಿನಿಮಾ ಸೋಲಿನ ಬಳಿಕ ಗೆಲುವಿನ ನಿರೀಕ್ಷೆಯಲ್ಲಿದ್ದ ವಿಜಯ್ ದೇವರಕೊಂಡಗೆ ಶಿವ ನಿರ್ವಾಣ ನಿರ್ದೇಶನದಲ್ಲಿ ಖುಷಿ ಚಿತ್ರದಲ್ಲಿ ತಕ್ಕ ಮಟ್ಟಿನ ಯಶಸ್ಸು ಸಿಕ್ಕಿದೆ.. ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ರು. ಸೆಪ್ಟೆಂಬರ್ 1 ರಂದು ಖುಷಿ ಸಿನಿಮಾ ಆಗಿ ಸೂಪರ್ ಹಿಟ್ ಆಗಿದೆ. 

ವಿಜಯ್ ದೇವರಕೊಂಡ ಕುಟುಂಬದ ಜೊತೆ ರಶ್ಮಿಕಾಗೇ ಉತ್ತಮ ಒಡನಾಟವಿದೆ. ವಿಜಯ್ ಮನೆಗೆ ಭೇಟಿ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಭೇಟಿ ನೀಡಿದ್ದಾರೆ. ಇತ್ತೀಚೆಗೆ ‘ಖುಷಿ’ ಸಿನಿಮಾದ ಪ್ರಚಾರದ ವೇಳೆ ಮದುವೆ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ನೀಡುತ್ತೇನೆ ಎಂದು ವಿಜಯ್ ತಿಳಿಸಿದ್ದರು.

ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್​ ರಾಜ್​ಗೆ ನೆಟ್ಟಿಗರ ತರಾಟೆ
 

Follow Us:
Download App:
  • android
  • ios