ಏರ್ಪೋರ್ಟ್ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಮತ್ತೆ ಹಳೆ ಪ್ರಶ್ನೆಯನ್ನೇ ಕೇಳಿದ್ದಾರೆ. ಮದುವೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ತಾ? 

ವಿಜಯ್ ದೇವರಕೊಂಡ (Vijay Deverakonda) ಹೆಸರು ಕೇಳ್ತಿದ್ದಂತೆ ನಾಚಿ ನೀರಾಗಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National crush Rashmika Mandanna) ಈಗ ತಮ್ಮ ಹುಡುಗನ ಜೊತೆ ಕಾಣಿಸಿಕೊಂಡು ಮತ್ತೆ ಸುದ್ದಿಗೆ ಬಂದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ಈ ಜೋಡಿಯ ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಡೇಟಿಂಗ್ ವಿಷ್ಯ ಕೇಳ್ತಿದ್ದಂತೆ ಫ್ಯಾನ್ಸ್ ಕಿವಿ ನೆಟ್ಟಗಾಗುತ್ತೆ. ಅವ್ರ ಬಗ್ಗೆ ಪ್ರತಿಯೊಂದು ಅಪ್ ಡೇಟ್ ಕೇಳ್ತಿರ್ತಾರೆ ಅಭಿಮಾನಿಗಳು. ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರನ್ನು ಆನ್ ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್ ನಲ್ಲೂ ಒಟ್ಟಿಗೆ ನೋಡೋದು ಫ್ಯಾನ್ಸ್ ಗೆ ಇಷ್ಟ. ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಿದ್ದಂತೆ ಡೇಟಿಂಗ್ ವದಂತಿಗೆ ಮತ್ತೆ ರೆಕ್ಕೆ ಬಂದಿದೆ. ಇಬ್ಬರೂ ಒಂದೇ ಕಾರಿನಲ್ಲಿ ಕುಳಿತುಕೊಂಡಿರುವ ವಿಡಿಯೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಮದುವೆ ಕನಸು ಕಾಣ್ತಿದ್ದಾರೆ. ಯಾವಾಗ ಮದುವೆ ಅಂತ ಕೇಳ್ತಿದ್ದಾರೆ.

ಬುಧವಾರ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಲ್ಲದೆ ಇಬ್ಬರೂ ಒಟ್ಟಿಗೆ ಒಂದೇ ಕಾರಿನಲ್ಲಿ ಹೊರಟಿದ್ದನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಇಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ರು. ಕಾರಿನ ಮುಂದಿನ ಸೀಟಿನಲ್ಲಿ ವಿಜಯ್ ದೇವರಕೊಂಡ ಕುಳಿತಿದ್ರೆ, ಹಿಂದೆ ರಶ್ಮಿಕಾ ಮಂದಣ್ಣ ಕುಳಿತಿರೋದನ್ನು ವಿಡಿಯೋದಲ್ಲಿ ಕಾಣ್ಬಹುದು.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮಧ್ಯೆ ಏನೋ ಇದೆ ಎನ್ನುವ ಸುದ್ಧಿ ಈಗಿನದ್ದಲ್ಲ. 2024ರಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಾವು ಸಂಬಂಧದಲ್ಲಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದ್ರೆ ಸಂಗಾತಿ ಹೆಸ್ರನ್ನು ಅವ್ರು ಬಹಿರಂಗಪಡಿಸಿಲ್ಲ. ವಿಜಯ್ ಮತ್ತು ರಶ್ಮಿಕಾ ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದ್ರ ನಂತ್ರ ಅವರಿಬ್ಬರ ಪ್ರೇಮಕಥೆ ಶುರುವಾಯ್ತು. ಹಿಂದಿನ ವರ್ಷ ದೀಪಾವಳಿಯನ್ನು ರಶ್ಮಿಕಾ, ವಿಜಯ್ ಮನೆಯಲ್ಲಿ ಆಚರಿಸಿಕೊಂಡಿದ್ದು, ಅನೇಕ ಫೋಟೊಗಳು ಇದಕ್ಕೆ ಸಾಕ್ಷವಾಗಿವೆ. ಇದಲ್ಲದೆ ಇಬ್ಬರು ಅನೇಕ ಬಾರಿ ರಜೆಯನ್ನು ಒಟ್ಟಿಗೆ ಎಂಜಾಯ್ ಮಾಡಿದ್ದಾರೆ. ಆದ್ರೆ ಇಬ್ಬರೂ ಈವರೆಗೆ ತಮ್ಮಿಬ್ಬರ ಮಧ್ಯೆ ಇರುವ ಸಂಬಂಧವನ್ನು ಬಹಿರಂಗಪಡಿಸಿಲ್ಲ.

ಸದ್ಯ ರಶ್ಮಿಕಾ, ಕುಬೇರ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಿದ್ದಾರೆ. ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಸಂದರ್ಶನದಲ್ಲಿ ವಿಜಯ್ ಬಗ್ಗೆ ಕೇಳಿದ ಪ್ರಶ್ನೆಗೆ ರಶ್ಮಿಕಾ ನಾಚಿ ನೀರಾಗಿದ್ದಾರೆ. ನಿರೂಪಕಿ ಒಂದೊಂದೇ ನಟರ ಹೆಸರು ಹೇಳ್ತಿದ್ದಂತೆ ರಶ್ಮಿಕಾ ಅವರಲ್ಲಿ ತನಗೆ ಏನು ಇಷ್ಟ ಎಂಬುದನ್ನು ಹೇಳ್ತಾ ಹೋಗಿದ್ದಾರೆ. ವಿಜಯ್ ದೇವರಕೊಂಡ ಹೆಸರು ಹೇಳ್ತಿದ್ದಂತೆ ನನಗೆ ಅವರಲ್ಲಿ ಎಲ್ಲವೂ ಇಷ್ಟ ಎಂದಿದ್ದಾರೆ. ರಶ್ಮಿಕಾ ಈ ಮಾತು ಕೇಳಿ ಫ್ಯಾನ್ಸ್ ಖುಷಿಯಲ್ಲಿ ಕೂಗಾಡಿದ್ದಾರೆ.

ರಶ್ಮಿಕಾ ಕೆಲಸದ ಬಗ್ಗೆ ಹೇಳೋದಾದ್ರೆ ಕುಬೇರ ಇದೇ ಜೂನ್ 20ರಂದು ತೆರೆಗೆ ಬರ್ತಿದೆ. ಚಿತ್ರದಲ್ಲಿ ಧನುಷ್ ಜೊತೆ ರಶ್ಮಿಕಾ ಕಾಣಿಸಿಕೊಳ್ತಿದ್ದಾರೆ. ಅಷ್ಟೇ ಅಲ್ಲ ರಶ್ಮಿಕಾ ಕೈನಲ್ಲಿ ಥಾಮಾ ಮತ್ತು ದಿ ಗರ್ಲ್ಫ್ರೆಂಡ್ ಚಿತ್ರಗಳಿವೆ. ಇನ್ನು ವಿಜಯ್ ದೇವರಕೊಂಡ ಶೀಘ್ರದಲ್ಲೇ 'ಕಿಂಗ್ಡಮ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ಮತ್ತು ಸತ್ಯದೇವ್ ಕೂಡ ನಟಿಸಿದ್ದಾರೆ. ಈ ಚಿತ್ರ ಜುಲೈ 4 ರಂದು ತೆರೆಗೆ ಬರಲು ರೆಡಿಯಾಗ್ತಿದೆ.

View post on Instagram