ಅಮೆರಿಕದ ರ‍್ಯಾಪರ್ ಡೇವನ್ ಡಕ್ವಾನ್ ಬೆನೆಟ್‌ನನ್ನು ನೈಟ್ ಕ್ಲಬ್ ಹೊರಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಕಿಂಗ್ ವಾನ್ ಎಂದೇ ಫೇಮಸ್ ಆಗಿರುವ ಅಮೆರಿಕನ್ ರ‍್ಯಾಪರ್‌ಗೆ 26 ವರ್ಷ ವಯಸ್ಸಾಗಿತ್ತು.

ಶುಕ್ರವಾರ ನಡೆದ ಶೂಟ್‌ಔಟ್‌ನಲ್ಲಿ ಕಿಂಗ್ ವಾನ್ ಸೇರಿ ಮೂವರು ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಗಾಯಗೊಂಡಿದ್ದಾರೆ. ಕಿಂಗ್ ವಾನ್ ಮತ್ತು ಸ್ವಲ್ಪ ಯುವಕರು ಓಪಿಯಂ ನೈಟ್‌ಕ್ಲಬ್‌ನಿಂದ ಹೊರಗೆ ಬಂದು ಮೊನೆಕೋ ಹುಕ್ಕಾ ಲಾಂಜ್‌ಗೆ ಹೋಗುವವರಿದ್ದರು.

ಈ ಬಾರಿ ಮಾಸ್ಕ್‌ ಧರಿಸಿ ಪ್ರತ್ಯಕ್ಷನಾದ ಸ್ಪೈಡರ್ ಮ್ಯಾನ್..!

ಅವರು ಪಾರ್ಕಿಂಗ್ ಸ್ಟಾಲ್‌ಗೆ ಬಂದಾಗ ಇಬ್ಬರು ಯುವಕರು ಇವರನ್ನು ಸಮೀಪಿಸಿದ್ದಾರೆ. ನಂತರ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಎರಡೂ ಗುಂಪುಗಳ ನಡುವೆ ನಡೆದ ಮಾತಿನ ಚಕಮಕಿ ಕೂಡಲೇ ಗುಂಡಿನ ದಾಳಿಯಾಗಿ ಬದಲಾಗಿ ಫೈರಿಂಗ್ ನಡೆದಿದೆ ಎಂದು ಜಾರ್ಜಿಯಾ ಬ್ಯುರೋ ತನಿಖಾ ತಂಡ ತಿಳಿಸಿದೆ. ಬೆಳಗ್ಗೆ 4 ಗಂಟೆಗೆ ಘಟನೆ ನಡೆದಿದೆ ಎನ್ನಲಾಗಿದೆ. ಬೆನೆಟ್ ಸೇರಿ ಮೂವರು ಮೃತಪಟ್ಟಿದ್ದು, ಇನ್ನೂ ಕೆಲವರು ಗಾಯಗೊಂಡಿದ್ದಾರೆ