ಬ್ರೇಕಪ್ ವದಂತಿ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ದೀಪ್‌ವೀರ್; ಪ್ರವಾಸ ಫೋಟೋ ವೈರಲ್

ದಾಂಪತ್ಯದಲ್ಲಿ ಬಿರಿಕು ಮೂಡಿದೆ ಎನ್ನುವ ವದಂತಿ ಬಳಿಕ ಮೊದಲ ಬಾರಿಗೆ ದೀಪಿಕಾ ಮತ್ತು ರಣ್ವೀರ್ ಸಿಂಗ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  

Ranveer Singh shares video with his wife Deepika Padukone viral on social media sgk

ಕಳೆದ ಕೆಲವುದಿನಗಳ ಹಿಂದೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಸ್ಟಾರ್ ದಂಪತಿಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವಿಚಾರ ವೈರಲ್ ಆಗಿತ್ತು. ಈ ಸುದ್ದಿ ಕೇಳಿ ಅಭಿಮಾನಿಗಳು ಸಹ ಶಾಕ್ ಆಗಿದ್ದರು. ಅನ್ಯೋನ್ಯವಾಗಿದ್ದ ಈ ಜೋಡಿ ಬೇರೆ ಬೇರೆ ಆಗುತ್ತಿದ್ದಾರಾ ಎಂದು ಅಚ್ಚರಿ ಪಟ್ಟಿದ್ದರು.  ಇಬ್ಬರೂ ದೂರ ದೂರ ಆಗುತ್ತಿದ್ದಾರೆ ಎನ್ನುವ ಸುದ್ದಿಗೆ ಪುಷ್ಠಿ ನೀಡುವಂತೆ ಇತ್ತೀಚಿನ ದಿನಗಳಲ್ಲಿ ದೀಪಿಕಾ ಮತ್ತು ರಣ್ವೀರ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಒಟ್ಟಿಗೆ ಇರುವ ಫೋಟೋಗಳನ್ನು ಶೇರ್ ಮಾಡಿರಲಿಲ್ಲ, ಹಾಗಾಗಿ ಈ ಸುದ್ದಿ ನಿಜ ಇರಬಹುದು ಅಂತನೆ ಬಹುತೇಕರು ಅಂದುಕೊಂಡಿದ್ದರು.

ಆದರೇ ದೀಪಿಕಾ ಫೋಟೋಗಳಿಗೆ ಕಾಮೆಂಟ್ ಮಾಡುವ ಮೂಲಕ ರಣ್ವೀರ್ ಸಿಂಗ್ ಈ ವದಂತಿಗೆ ಬ್ರೇಕ್ ಹಾಕಿದ್ದರು. ಆದರೂ ಇಬ್ಬರ ನಡುವೆ ಯಾವುದೇ ಸರಿ ಇಲ್ಲ ಎನ್ನುವ ಅನುಮಾನ ಮಾಡುತ್ತಿತ್ತು. ಆದರೀಗ ರಣ್ವೀರ್ ಸಿಂಗ್ ಪತ್ನಿ ದೀಪಿಕಾ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ. ಇಬ್ಬರೂ ಬೋಟ್ ನಲ್ಲಿ ಪ್ರಯಣಿಸುತ್ತಿರುವ ವಿಡಿಯೋ ವೈರಲ್ ವನ್ನು ಶೇರ್ ಮಾಡಿದ್ದಾರೆ. ಅನೇಕ ಸಮಯದ ಬಳಿಕ ದೀಪ್‌ವೀರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಪ್ರವಾಸಕ್ಕೆ ತೆರಳಿದ್ದಾರೆ. ಇಬ್ಬರ ಪ್ರವಾಸದ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ದಾಂಪತ್ಯದಲ್ಲಿ ಬಿರುಕು; ವದಂತಿಗೆ ಬ್ರೇಕ್ ಹಾಕಿದ ನಟ ರಣ್ವೀರ್ ಸಿಂಗ್ 'ಕ್ವೀನ್' ಹೇಳಿಕೆ

ರಣ್ವೀರ್ ಸಿಂಗ್ ಪತ್ನಿ ದೀಪಿಕಾ ಅವರ ವಿಡಿಯೋ ಶೇರ್ ಮಾಡಿ ಕ್ಯೂಟಿ ಎಂದು ಹೇಳಿದ್ದಾರೆ. ದೀಪಿಕಾ ಜೋರಾಗಿ ನಗುತ್ತಾ ರಣ್ವೀರ್ ಸಿಂಗ್ ಕಾಲಿಗೆ ಹೊಡೆಯುತ್ತಿರುವ ವಿಡಿಯೋ ಅಭಿಮಾನಿಗಳ ಹೃದಯ ಗೆದ್ದಿದೆ. ದೀಪಿಕಾ ಸದ್ಯ ಪಠಾಣ್ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶಾರುಖ್ ಜೊತೆ ದೀಪಿಕಾ ತೆರೆಹಂಚಿಕೊಂಡಿದ್ದಾರೆ.  ಈ ಸಿನಿಮಾ ಜೊತೆಗೆ ಅನೇಕ ಸಿನಿಮಾಗಳಲ್ಲಿ ದೀಪಿಕಾ ಬ್ಯುಸಿಯಾಗಿದ್ದಾರೆ.  

ಇನ್ನು ದೀಪಿಕಾ ಮತ್ತು ರಣ್ವೀರ್ ಸಿಂಗ್ ಜೋಡಿ ಬಗ್ಗೆ ಹೇಳುವುದಾದರೆ ಇಬ್ಬರೂ 2012ರಿಂದ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಸದ್ಯ ಇಬ್ಬರ ಸಂಬಂಧಕ್ಕೆ 10 ವರ್ಷ. ಈ ಬಗ್ಗೆ ರಣ್ವೀರ್ ಸಿಂಗ್ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿ,  'ನಾನು ಮತ್ತು ದೀಪಿಕಾ 10 ವರ್ಷಗಳಿಂದ  ಒಟ್ಟಿಗೆ ಇದ್ದೇವೆ. ನಮ್ಮಿಬ್ಬರ ಸಂಬಂಧ ಮತ್ತಷ್ಟು ಆಳವಾಗುತ್ತಿದೆ. ದೀಪಿಕಾ ಬಗ್ಗೆ ನನಗೆ ಸಂತೋಷವಾಗಿದೆ  ಆಕೆಯ ಬಗ್ಗೆ ನನಗೆ ತುಂಬಾ ಗೌರವವಿದೆ' ಎಂದು ರಣವೀರ್‌ ಹೇಳಿದ್ದರು.

ರಾಜಮೌಳಿ ಸಿನಿಮಾದಲ್ಲಿ ಕರಾವಳಿ ಸುಂದರಿ; ಪ್ರಭಾಸ್ ಬಳಿಕ ಮಹೇಶ್ ಬಾಬು ಜೊತೆ ದೀಪಿಕಾ ರೊಮ್ಯಾನ್ಸ್

2012ರಲ್ಲಿ ದೀಪಿಕಾ ಮತ್ತು ರಣ್ವೀರ್ ಸಿಂಗ್ ಇಬ್ಬರೂ ಡೇಟಿಂಗ್ ಪ್ರಾರಂಭ ಮಾಡಿದರು. ನಾಲ್ಕು ವರ್ಷಗಳ ಪ್ರೀತಿಯ ಬಳಿಕ ಇಬ್ಬರೂ 2018ರಲ್ಲಿ ಹಸೆಮಣೆ ಏರಿದರು. ಅದ್ದೂರಿಯಾಗಿ ನಡೆದ ದೀಪಿಕಾ ಮತ್ತು ರಣ್ವೀರ್ ಸಿಂಗ್ ಮದುವೆ ಸಮಾರಂಭದಲ್ಲಿ ಅನೇಕ ಬಾಲಿವುಡ್ ಸ್ಟಾರ್ಸ್ ಭಾಗಿಯಾಗಿದ್ದರು. ದೀಪಿಕಾ ಮತ್ತು ರಣ್ವೀರ್ ಸಿಂಗ್ ಮದುವೆ ಫೋಟೋಗಳು ಈಗಲೂ ಅಭಿಮಾನಿಗಳ ಗಮನ ಸೆಳೆಯುತ್ತಿವೆ.


 

Latest Videos
Follow Us:
Download App:
  • android
  • ios