ಹೇಳಲೇಬಾರದ ದೀಪಿಕಾಗೆ ಮೂಡ್ ತರಿಸುವ ಗುಟ್ಟು ಹೇಳಿದ ರಣವೀರ್ ಸಿಂಗ್; ಅದೀಗ ವೈರಲ್!

ನಟ ರಣವೀರ್ ಸಿಂಗ್ ಅವರು ಸೀಕ್ರೆಟ್ ಒಂದನ್ನು ಜಗತ್ತಿನ ಮುಂದೆ ಬಯಲು ಮಾಡಿದ್ದು ಹಾಗೂ ಅದೀಗ ವೈರಲ್ ಆಗುತ್ತಿದೆ. ಹಾಗಿದ್ದರೆ ರಣವೀರ್ ಸಿಂಗ್ ಅವರು ಹೇಳಿದ್ದೇನು? ಹೊರಗೆ ಬರಬಾರದ ಅಂತಹ ಯಾವ ಸೀಕ್ರೆಟ್ ಅವರ ಬಾಯಿಂದ ಬಂದು ಇದೀಗ ಜಗತ್ತಿನ ಜನರ ಬಾಯಲ್ಲಿ ಬಿದ್ದಿದೆ? ಅದಕ್ಕೆಲ್ಲಾ ಉತ್ತರ..

Ranveer Singh reveals deepika padukone mood secret and it becomes viral

ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ (Deepika Padukone) ಹಾಗು ರಣವೀರ್ ಸಿಂಗ್ (Ranveer Singh) ಆಗಾಗ ಸುದ್ದಿ ಮಾಡುತ್ತ ಖಾಯಂ ಆಗಿ ಮಾಧ್ಯಮಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುವುದು ಗೊತ್ತೇ ಇದೆ. ಇತ್ತೀಚೆಗೆ ಈ ಜೋಡಿಗೆ ಮಗುವಾಗಿದ್ದು, ದೀಪಿಕಾ ಹೆಣ್ಣು ಮಗುವಿನ ತಾಯಿ ಆಗಿರುವುದು ಈಗ ಹಳೆಯ ಸುದ್ದಿ. ಇತ್ತೀಚೆಗೆ ವೈರಲ್ ಆಗುತ್ತಿರುವ ಹೊಸ ಸುದ್ದಿ ಏನೆಂದರೆ, ನಟ ರಣವೀರ್ ಸಿಂಗ್ ಅವರು ಸೀಕ್ರೆಟ್ ಸಂಗತಿಯೊಂದನ್ನು ಜಗತ್ತಿನ ಮುಂದೆ ಬಯಲು ಮಾಡಿದ್ದು ಹಾಗೂ ಅದೀಗ ವೈರಲ್ ಆಗುತ್ತಿರುವುದು. 

ಹಾಗಿದ್ದರೆ ರಣವೀರ್ ಸಿಂಗ್ ಅವರು ಹೇಳಿದ್ದೇನು? ಹೊರಗೆ ಬರಬಾರದ ಅಂತಹ ಯಾವ ಸೀಕ್ರೆಟ್ ಅವರ ಬಾಯಿಂದ ಬಂದು ಇದೀಗ ಜಗತ್ತಿನ ಜನರ ಬಾಯಲ್ಲಿ ಬಿದ್ದಿದೆ? ಅದಕ್ಕೆಲ್ಲಾ ಉತ್ತರ ಮುಂದಿದೆ ನೋಡಿ.. ನಮಗೆ ಮದುವೆಯ ದಿನ ಅಷ್ಟೊಂದು ಸುಸ್ತಾಗಿರಲಿಲ್ಲ. ಆದ್ದರಿಂದ ಆವತ್ತೇ ಫಸ್ಟ್‌ನೈಟ್ ಆಗಿತ್ತು. ನನಗೆ ದೀಪಿಕಾಗೆ ಮೂಡ್ ತರಿಸಲು ಪ್ಲೇ ಪಟ್ಟಿಗಳು ಗೊತ್ತಿದೆ. ನಾವು ವ್ಯಾನಿಟಿ ವ್ಯಾನ್‌ನಲ್ಲಿ ಕೂಡ ಒಂದು ಸಾಲ ಅದನ್ನು ಮಾಡಿದ್ದೆವು' ಎಂದು ದೀಪಿಕಾ ಪತಿ ರಣವೀರ್ ಹೇಳಿದ್ದಾರೆ. 

ಮೈಸೂರಿನ ಜೋಡಿ ತೆಂಗಿನಮರದ ಬಳಿ ಅಣ್ಣಾವ್ರು ಯಾಕೆ ಬೆಳಿಗ್ಗೆ 4 ಗಂಟಗೆ ಹೋಗ್ತಾ ಇದ್ರು?

ಹೌದು, ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಇಬ್ಬರೂ ಪರಸ್ಪರ ಒಪ್ಪಿ, ಲವ್-ಡೇಟಿಂಗ್ ಬಳಿಕವೇ ಮದುವೆ ಆಗಿದ್ದು. 2018ರಲ್ಲೇ ಹಸೆಮಣೆ ಏರಿರುವ ಈ ಜೋಡಿಗೆ ಈ ವರ್ಷ ಮಗುವಾಗಿದೆ. ತಮ್ಮ ಹೆಣ್ಣುಮಗು ದುವಾ ಪಡುಕೋಣೆಯನ್ನು(Dua Padukone) ಇತ್ತೀಚೆಗಷ್ಟೇ ಮುಂಬೈನಲ್ಲಿ ಕ್ಯಾಮೆರಾ ಎದುರು ಪ್ರದರ್ಶನ ಮಾಡಿದ್ದಾರೆ ಈ ಸ್ಟಾರ್ ಜೋಡಿ. ದೀಪಿಕಾ-ರಣವೀರ್ ಮಗುವನ್ನು ನೋಡಿ ಅವರ ಅಭಿಮಾನಿಗಳು ಕಣ್ಣರಳಿಸಿದ್ದಾರೆ, ಹರ್ಷ ವ್ಯಕ್ತಪಡಿಸಿದ್ದಾರೆ. 

ಅಂದಹಾಗೆ, ದೀಪಿಕಾ ಪಡುಕೋಣೆ ಮದುವೆ ಬಳಿಕವೂ ತಮ್ಮ ನಟನಾವೃತ್ತಿಯನ್ನು ಮುಂದುವರೆಸಿದ್ದಾರೆ. ಕಳೆದ ವರ್ಷ, ಅಂದರೆ 27 ಜೂನ್ 2024ರಂದು ದೀಪಿಕಾ ಪಡುಕೋಣೆ, ಪ್ರಭಾಸ್, ಅಮಿತಾಬ್ ಬಚ್ಚನ್, ದುಲ್ಕರ್ ಸಲ್ಮಾನ್ ಹಾಗೂ ಕಮಲ್ ಹಾಸನ್ ತಾರಾಬಳಗದ 'ಕಲ್ಕಿ 2898 ಎಡಿ (Kalki 2898 AD) ಚಿತ್ರವು ಬಿಡುಗಡೆಯಾಗಿ ಸದ್ದು ಮಾಡಿತ್ತು. ದೀಪಿಕಾ ನಟಿಸಿರುವ ಲವ್ 4 ಎವರ್ (Love 4 Ever) ಚಿತ್ರವು ಈ ವರ್ಷ, ಅಂದರೆ 09 ನವೆಂಬರ್ 2025ರಂದು ಬಿಡುಗಡೆ ಆಗಲಿದೆ. 

ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ!

ಕಲ್ಕಿ ಚಿತ್ರಕ್ಕಿಂತ ಮೊದಲು ದೀಪಿಕಾ ಪಡುಕೋಣೆ ಅವರು ಬ್ರಹ್ಮಾಸ್ತ್ರ ಹಾಗೂ ಫೈಟರ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಒಟ್ಟಿನಲ್ಲಿ, ನಟರಂತೆ ನಟಿಯರೂ ಕೂಡ ಈಗ ಮದುವೆ ಬಳಿಕವೂ ನಟನೆ ಮುಂದುವರಿಸುವುದು ಟ್ರೆಂಡ್ ಆಗುತ್ತಿದೆ. ಈ ಮೊದಲು ಅದು ಹಾಲಿವುಡ್ ಸಿನಿಮಾಗಳ ನಟನಟಯರಲ್ಲಿ ಕಾಣಿಸುತ್ತಿತ್ತು. ಈಗ ಅದು ಭಾರತಕ್ಕೂ ಕಾಲಿಟ್ಟು ಇಂದು ಅದು ಸಾಮಾನ್ಯ ಸಂಗತಿ ಎನ್ನಿಸುತ್ತಿದೆ. ಅದೇನೇ ಇರಲಿ, ಇಷ್ಟು ವರ್ಷಗಳ ಮೇಲೆ ನಟ ರಣವೀರ್ ಹಾಗೂ ನಟಿ ದೀಪಿಕಾ ಜೋಡಿಯ ಫಸ್ಟ್‌ ನೈಟ್ ಸಂಗತಿ ಜಗತ್ತಿಗೇ ಬಹಿರಂಗವಾಗಿದೆ. 

Latest Videos
Follow Us:
Download App:
  • android
  • ios