Asianet Suvarna News Asianet Suvarna News

ಸೋ ಬ್ಯೂಟಿಫುಲ್‌...ಸೋ ಎಲಿಗೆಂಟ್‌... ಜಸ್ಟ್‌ ವಾವ್‌! ನೀತಾ ಅಂಬಾನಿಯನ್ನು ಹಾಡಿ ಹೊಗಳಿದ ರಣವೀರ್‌ ಸಿಂಗ್‌

ಜಿಯೋ ವರ್ಲ್ಡ್ ಪ್ಲಾಜಾ ಉದ್ಘಾಟನೆ ಸಮಾರಂಭದಲ್ಲಿ ನೀತಾ ಅಂಬಾನಿ ಅವರನ್ನು ನಟ ರಣವೀರ್‌ ಸಿಂಗ್‌ ಹಾಡಿ ಹೊಗಳಿದ್ದು, ಅದೀಗ ವೈರಲ್‌ ಆಗಿದೆ.
 

Ranveer Singh Praises Bhabhi Nita Ambani With Looking Like A Wow Trend suc
Author
First Published Nov 3, 2023, 5:01 PM IST

ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಇತ್ತೀಚೆಗೆ ಭಾರತದ ಅತಿದೊಡ್ಡ ಐಷಾರಾಮಿ ಮಾಲ್ ಜಿಯೋ ವರ್ಲ್ಡ್ ಪ್ಲಾಜಾವನ್ನು ಉದ್ಘಾಟಿಸಿದರು. ಕಳೆದ ಅಕ್ಟೋಬರ್ 31ರಂದು, ಅಂಬಾನಿ ಕುಟುಂಬವು ಜಿಯೋ ವರ್ಲ್ಡ್ ಪ್ಲಾಜಾದ ಗ್ರ್ಯಾಂಡ್ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉದ್ಘಾಟನಾ ಸಮಾರಂಭದಲ್ಲಿ ಮನರಂಜನಾ ಪ್ರಪಂಚದ ಅನೇಕ ಹೆಸರಾಂತ ವ್ಯಕ್ತಿಗಳು ಭಾಗವಹಿಸಿದ್ದರು. ಹಲವಾರು ನಟ-ನಟಿಯರು ಇದಕ್ಕೆ ಸಾಕ್ಷಿಯಾದರು. ಆದರೆ ಈ ಸಂದರ್ಭದಲ್ಲಿ ನಟ ರಣವೀರ್ ಸಿಂಗ್, ಸ್ಟಾರ್-ಸ್ಟಡ್ ಈವೆಂಟ್‌ಗೆ ಹೆಚ್ಚು ಅಗತ್ಯವಿರುವ ಶಕ್ತಿಯುತ ವೈಬ್ ಸೃಷ್ಟಿಸಿದರು. ಅದರ ವಿಡಿಯೋ ವೈರಲ್‌ ಆಗುತ್ತಿದ್ದು, ಇದರಲ್ಲಿ ರಣವೀರ್‌ ಸಿಂಗ್‌ ನೀತಾ ಅಂಬಾನಿ ಅವರನ್ನು ಹಾಡಿ ಹೊಗಳುವುದನ್ನು ನೋಡಬಹುದು. 

 ನಟ ಈವೆಂಟ್‌ನಲ್ಲಿ ಸಣ್ಣ ಭಾಷಣ ಮಾಡುವ ಅವಕಾಶವನ್ನು ಬಳಸಿಕೊಂಡರು ಮತ್ತು ನೀತಾ ಅಂಬಾನಿಯನ್ನು ತಮ್ಮ ಹಾಸ್ಯದ ಶೈಲಿಯಲ್ಲಿ ಹೊಗಳಿದರು. ರಣವೀರ್ ಅವರು ನೀತಾ ಅಂಬಾನಿಗಾಗಿ ವೈರಲ್ ಡೈಲಾಗ್ ಅನ್ನು ಮರುಸೃಷ್ಟಿಸಿ, ’ಸೋ ಬ್ಯೂಟಿಫುಲ್, ಸೋ ಎಲಿಗೆಂಟ್‌, ಜಸ್ಟ್‌ ವಾವ್’ ಎಂದರು. ನಂತರ ನೀತಾ ಅವರ  ಸೌಂದರ್ಯವನ್ನು ಮೆಚ್ಚಿದರು. ಮುಂದಿನ ಸಾಲಿನಲ್ಲಿ ಕುಳಿತಿದ್ದ ನೀತಾ ಅವರಿಗೆ ಇದನ್ನು ಕೇಳಿ ನಗು ತಡೆಯಲಾಗಲಿಲ್ಲ.

ಶ್ರೀಕೃಷ್ಣ ದಯೆ ತೋರಿದರೆ.... ರಾಜಕೀಯ ಎಂಟ್ರಿಗೆ ನಟಿ ಕಂಗನಾ ರಣಾವತ್‌ ಕೊಟ್ರು ದೊಡ್ಡ ಸುಳಿವು!
  
ನೀತಾ ಅಂಬಾನಿಯನ್ನು ಭಾಭಿ ಎಂದು ಕರೆದ ರಣವೀರ್ ಸಿಂಗ್, ಅವರು  ತನ್ನ ಭಾಷಣದಲ್ಲಿ ನೀತಾ ಅಂಬಾನಿಯವರನ್ನು ಹೊಗಳಿದರು.  ನೀತಾ ಅಂಬಾನಿ ಅತ್ಯಂತ ಉದಾರ ಹೃದಯವನ್ನು ಹೊಂದಿದ್ದಾರೆ ಮತ್ತು ಅವರು ಅತ್ಯಂತ ಅದಮ್ಯ ಮಹಿಳೆ ಎಂದು ರಣವೀರ್‌ ಹೇಳಿದರು. ಇದನ್ನು ಕೇಳುತ್ತಿದ್ದಂತೆಯೇ  ಪ್ರತಿಕ್ರಿಯಿಸಿದ ನೀತಾ, ರಣವೀರ್‌ ಅವರಿಗೆ ಫ್ಲೈಯಿಂಗ್ ಕಿಸ್ ಅನ್ನು ಬೀಸಿದರು. ಅಷ್ಟಕ್ಕೂ ಈ ವಾವ್‌ ಟ್ರೆಂಡ್‌ ಸೃಷ್ಟಿಸಿದವರು ರಣವೀರ್‌ ಪತ್ನಿ ದೀಪಿಕಾ ಪಡುಕೋಣೆ. ಇವರು ಈ ಡೈಲಾಗ್‌ ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ್ದು, ಹೆಚ್ಚಿನವರು ಇದೇ ಡೈಲಾಗ್‌ ಹೇಳಿ ರೀಲ್ಸ್‌ ಮಾಡುತ್ತಿದ್ದಾರೆ. 

ಅಂದ ಹಾಗೆ, ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ನಿನ್ನೆ 60ನೇ ಜನ್ಮ ದಿನ ಆಚರಿಸಿಕೊಂಡರು.  ಕರ್ನಾಟಕದ ಹೆಸರಘಟ್ಟ ಹಾಗೂ ರಾಮನಗರದ ಕುತಕಲ್ ಗ್ರಾಮದ ಇರುಳಿಗರ ದೊಡ್ಡಿಯೂ ಸೇರಿದಂತೆ ದೇಶದಾದ್ಯಂತ 1.4 ಲಕ್ಷ ಜನರಿಗೆ ಅನ್ನ ಸಂತರ್ಪಣೆ ಸೇವೆಯನ್ನು ಸಲ್ಲಿಸಲಾಯಿತು. ಪಡಿತರದ ಕಿಟ್ ಗಳನ್ನು 60 ಸಾವಿರಕ್ಕೂ ಹೆಚ್ಚು ಜನರಿಗೆ ವಿತರಿಸಲಾಯಿತು. ಭಾರತದ ಹದಿನೈದು ರಾಜ್ಯಗಳಲ್ಲಿ ಮಕ್ಕಳಿಗೆ, ವೃದ್ಧಾಶ್ರಮದಲ್ಲಿ ಇರುವಂಥ ಹಿರಿಯರಿಗೆ, ದಿನಗೂಲಿ ನೌಕರರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಕುಷ್ಠರೋಗದಂಥ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ವಿಶೇಷ ಅಗತ್ಯ ಇರುವಂಥ ಜನರಿಗೆ ಬುಧವಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

ಕೊಡವ ನೃತ್ಯದಲ್ಲಿ ಕಂಗೊಳಿಸಿದ ನಟಿ ಹರ್ಷಿಕಾ ಪೂಣಚ್ಚ: ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರ
 

 
 
 
 
 
 
 
 
 
 
 
 
 
 
 

A post shared by Snehkumar Zala (@snehzala)

Follow Us:
Download App:
  • android
  • ios