ಹುಡುಗರಿಗೆ ಇವನು ಹ್ಯಾಂಡ್ಸಮ್. ಹುಡುಗಿಯರಿಗೆ ಇವನು ಕ್ಯೂಟ್‌. ಆದರೆ ದೀಪಿಕಾಳಿಗೆ ಮಾತ್ರ ಇವನೇ ಪಾರ್ಟಿ ಬಾಯ್. ಡಿಫರೆಂಟ್‌ ಲುಕ್‌ನಲ್ಲಿ ಪಾರ್ಟಿಗಳಲ್ಲಿ ಗಮನ ಸೆಳೆಯುವ ಮಟ್ಟಕ್ಕೆ ಕುಣಿದು ಕುಪ್ಪಳಿಸುವ ರಣವೀರ್ ಸಿಂಗ್ 'ಶಾದಿ ಟೈಂ' ಎಂದಿದ್ದಾರೆ.

ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ

ಇನ್‌ಸ್ಟಾಗ್ರಾಂ ಖಾತೆಯಲ್ಲಿ ನೀಲಿ ಶೇರ್‌ವಾನಿಯಲ್ಲಿ ಮಿಂಚುತ್ತಿರುವ ರಣವೀರ್‌ ಸಿಂಗ್ 'ಶಾದಿ ಸೀಸನ್‌ ಬರುತ್ತಿದೆ! ಮನೋರಂಜನೆಗೆ ನಾನು ಸಿದ್ದ. ಮದುವೆ, ಫ್ರೆಂಡ್‌ ಪಾರ್ಟಿ, ಮುಂಡನ್ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ...' ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ ನೋಡಿದ ತಕ್ಷಣ 'ಬುಕ್ಕಿಂಗ್‌ಗೆ ದೀಪಿಕಾಳನ್ನು ಸಂಪರ್ಕಿಸಿ' ಎಂದು ದೀಪಿಕಾ ಕಾಮೆಂಟ್ ಮಾಡಿದ್ದಾರೆ.

 
 
 
 
 
 
 
 
 
 
 
 
 

Shaadi Season is here! Entertainer for Hire. 🕺🏿 Available for events, wedding, budday party, mundan 🎊

A post shared by Ranveer Singh (@ranveersingh) on Oct 30, 2019 at 7:31am PDT

ರಣವೀರ್ ಪೋಸ್ಟ್‌ ವೈರಲ್ ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ, ಆದರೆ ದೀಪಿಕಾ ಕಾಮೆಂಟ್ ಮಾಡಿದ್ದೇ ತಡ ಅಭಿಮಾನಿಗಳ ಕಾಮೆಂಟ್‌‌ಗಳು ತುಂಬಿ ಹರಿಯುತ್ತಿವೆ. ಅದಕ್ಕೆ '2 states' ಖ್ಯಾತಿಯ ಅರ್ಜುನ್ ಕಪೂರ್ 'ಬಾಬಾ ನೀನು ತುಂಬಾ ಚೀಪ್‌, ಆದರೆ ಆಕೆ ದುಬಾರಿ' ಎಂದಿದ್ದಾರೆ. ನಿರ್ದೇಶಕಿ ಏಕ್ತಾ ಕಪೂರ್ 'ಮದುವೆಗೆ ಹೆಣ್ಣು ಬೇಕಾಗಿದ್ದಾಳೆ, ನಿಮ್ಮ ಮ್ಯಾನೇಜರ್ ನಂಬರ್ ಕೋಡಿ' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಗಂಡನ ಕಾಲೆಳೆದ ಹೆಂಡತಿ ಕಾಮೆಂಟ್‌ಗೆ ಪ್ರತಿಕ್ರಿಯೆಗಳು ತುಂಬಾ ಬಂದಿವೆ.

ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!

ರಾಮ್ ಲೀಲಾ, ಪದ್ಮಾವತಿ, ಬಾಜೀರಾವ್ ಮಸ್ತಾನಿಯಂತ ಐತಿಹಾಸಿಕ ಚಿತ್ರಗಳಲ್ಲಿ ನಟಿಸಿದ ಈ ಜೋಡಿ ನಡುವೆ ಪ್ರೇಮಾಂಕುರವಾಗಿ ಕಳೆದ ವರ್ಷ ನವೆಂಬರ್ 14 ಹಾಗೂ 15ರಂದು ಇಟಲಿಯಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿರಿಸಿತು.

ನವೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: