ಹೀಗಿರುವಾಗ ದೀಪಿಕಾ ಖಾಸಗಿ ಸಂದರ್ಶನವೊಂದರಲ್ಲಿ ಮನಸು ಬಿಚ್ಚಿ ಮಾತನಾಡಿದ್ದಾರೆ. ಅದು ತಮ್ಮ ಇಡೀ ಸಿನಿಮಾ ಜರ್ನಿಯ ಬಗ್ಗೆ.

ಈಗಾಗಲೇ ಸಾಧನೆಯ ಉತ್ತುಂಗದಲ್ಲಿ ಇರುವ ದೀಪಿಕಾಗೆ ಇಷ್ಟೊಂದು ಶಕ್ತಿ ಬಂದದ್ದು ಎಲ್ಲಿಂದ ಗೊತ್ತಾ? ಅದು ಪತಿ ರಣವೀರ್‌ ಸಿಂಗ್‌ ನೀಡಿದ ಕಂಫರ್ಟ್‌ನೆಸ್‌ ಮತ್ತು ತುಂಬಿದ ಆತ್ಮವಿಶ್ವಾಸದಿಂದ. ಇದನ್ನು ಸ್ವತಃ ದೀಪಿಕಾ ಹೇಳಿಕೊಂಡಿದ್ದಾರೆ. ಜೊತೆಗೆ ನಾನು ಮುಂದೆ ಮಾಡುವ ಯಾವುದೇ ಒಳ್ಳೆಯ ಕಾರ್ಯ, ಸಾಧನೆಗಳೆಲ್ಲವೂ ರಣವೀರ್‌ಗೆ ಅರ್ಪಿತ ಎಂದು ಹೇಳಿಕೊಂಡಿದ್ದಾರೆ.

ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!

ಇದು ಎಲ್ಲಾ ಜೋಡಿಯ ವಿಚಾರದಲ್ಲಿ ಸಾಮಾನ್ಯವೇ ಆದರೂ ದೀಪಿಕಾ ಡಿಪ್ರೆಷನ್‌ಗೆ ತುತ್ತಾಗಿದ್ದಾಗ, ಬದುಕು ಬೇಸರ ಎನ್ನಿಸಿದಾಗ ರಣವೀರ್‌ ಧೈರ್ಯ ತುಂಬಿದ್ದಾರೆ. ಅದು ಈಗ ದೀಪಿಕಾ ಮನದಲ್ಲಿ ಮರವಾಗಿ ಬೆಳೆದು ಮುನ್ನುಗ್ಗುತ್ತಿದ್ದಾರೆ. ಅದೇ ಖುಷಿಯಲ್ಲಿಯೇ ತಾನು ಮುಂದೆ ಮಾಡುವ ಎಲ್ಲಾ ಸಾಧನೆಗಳೂ ಪತಿ ರಣವೀರ್‌ಗೆ ಅರ್ಪಿತ ಎಂದು ಹೇಳಿಕೊಂಡಿದ್ದಾರೆ ಕೂಡ.

ಖಿನ್ನತೆ ಗೆಲ್ಲುವುದು ಹೇಗೆ? ದೀಪಿಕಾ ಕೊಟ್ಟ ಮದ್ದಿದು!