ಟಾಲಿವುಡ್‌ ಮಹೇಶ್‌ ಬಾಬು ಹಾಗೂ ಬಾಲಿವುಡ್‌ ರಣವೀರ್ ಸಿಂಗ್ ಸಾಫ್ಟ್‌ ಡ್ರಿಂಕ್‌ ಕಂಪನಿವೊಂದರ ರಾಯಭಾರಿ ಆಗಿದ್ದು, ಮೊದಲ ಬಾರಿ ಇಬ್ಬರೂ ಒಂದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಶನಿವಾರ ಇನ್‌ಸ್ಟಾಗ್ರಾಂನಲ್ಲಿ ರಣವೀರ್ ಶೇರ್ ಮಾಡಿಕೊಂಡ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

12 ವರ್ಷಕ್ಕೇ ವರ್ಜಿನಿಟಿ ಕಳ್ಕೊಂಡಿದ್ದೆ ಎಂದ ರಣವೀರ್ ಸಿಂಗ್ 

'ಒಬ್ಬ ಅದ್ಭುತ ಕಲಾವಿದ. ಈ ಜೆಂಟಲ್‌ಮ್ಯಾನ್ ಜೊತೆ ಒಟ್ಟಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ಖುಷಿ. ನಮ್ಮ ಮಾತುಕತೆ ಸದಾ ಎನ್‌ರಿಚಿಂಗ್ ಆಗಿರುತ್ತದೆ. ನಿಮ್ಮ ಮೇಲೆ ನನಗೆ ಪ್ರೀತಿ ಹಾಗೂ ಗೌರವ.  ದೊಡ್ಡ ಅಣ್ಣ ಮಹೇಶ್ ಗಾರು,' ಎಂದು ರಣವೀರ್ ಸಿಂಗ್ ಬರೆದಿದ್ದಾರೆ.

ರಣವೀರ್ ಸಿಂಗ್ ಅಪ್ಲೋಡ್ ಮಾಡಿದ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಮಹೇಶ್ ಬಾಬು 'ನಿಮ್ಮ ಜೊತೆ ಕೆಲಸ ಮಾಡಿದ ಸಂತೋಷ ನನಗಿದೆ ಬ್ರದರ್ ರಣವೀರ್,' ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ಆಲೋಚನೆ:
ಸಾಮಾನ್ಯವಾಗಿ ಸ್ಟಾರ್ ನಟರು ಒಂದು ಸಿನಿಮಾ ಮಾಡುವುದಕ್ಕೆ ಕೋಟಿಯಲ್ಲಿ ಹಣ ಪಡೆಯುತ್ತಾರೆ. ಹಾಗೆಯೇ ಜಾಹೀರಾತಿಗೂ ಅಷ್ಟೇ ಮೊತ್ತದ ಹಣ ಪಡೆಯುತ್ತಾರೆ ಎಂಬುವುದು ನೆಟ್ಟಿಗರ ಅನುಮಾನ. 'ನೀವಿಬ್ಬರೂ ಈ ಸಾಫ್ಟ್ ಡ್ರಿಂಕ್ ರಾಯಭಾರಿಯಾಗಿ ಎಷ್ಟು ಸಂಪಾದಿಸಿದ್ದೀರಿ?' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ರಣವೀರ್ ನೀನು ತಮ್ಮ ಟಾಲಿವುಡ್‌ ಸಿನಿಮಾದಲ್ಲಿ ಅಭಿನಯಿಸುವುದಿಲ್ವಾ? ಎಂದೂ ವಿಚಾರಿಸಿದ್ದಾರೆ.

ಈ ಹೇರ್‌ ಸ್ಟೈಲ್‌ಗೆ ಮಹೇಶ್ ಬಾಬು ಖರ್ಚು ಮಾಡಿರುವ ಹಣ ಎಷ್ಟು ಗೊತ್ತಾ? 

ಸಿಕ್ಕಾಪಟ್ಟೆ ಗ್ರಾಫಿಕ್ಸ್‌ ಹಾಗೂ ಹೆಚ್ಚಿನ ಜನರನ್ನು ಬಳಸಿ ಮಾಡಿರುವ ಈ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.