ಸೆನ್ಸೇಷನಲ್ ಗಾಯಕಿ ರಾನು ಮಂಡಾಲ್ ಓವರ್ ಮೇಕಪ್ ಇತ್ತೀಚಿಗೆ ವೈರಲ್ ಆಗಿತ್ತು.   ಓವರ್ ಮೇಕಪ್ ಮಾಡಿಕೊಂಡಿರುವ ಫೋಟೋವನ್ನು ಟ್ರೋಲ್ ಆಗಿತ್ತು. ಟ್ರೋಲ್ ಮಾಡಿದವರಿಗೆ ರಾನು ಮಂಡಾಲ್ ಪುತ್ರಿ ಎಲಿಜಬೆತ್ ಸಾಥಿ ರಾಯ್ ತಿರುಗುತ್ತರ ಕೊಟ್ಟಿದ್ದಾರೆ. 

ಕಿರುತೆರೆ ನಟಿ ರಿಸೆಪ್ಷನ್‌ನಲ್ಲಿ ಮೋದಿ; ಸೆಲ್ಫಿ ಆಯ್ತು ವೈರಲ್!

ನನ್ನ ತಾಯಿಯ ಫೋಟೋವನ್ನು ಈ ರೀತಿ ವೈರಲ್ ಮಾಡುತ್ತಿರುವುದಕ್ಕೆ ಬೇಸರವಿದೆ. ಲೈಫಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಈಗ ನಿಧಾನಕ್ಕೆ ಯಶಸ್ಸು ಸಿಗುತ್ತಿದೆ. ಈಗ ನನ್ನ ಅಮ್ಮನನ್ನು ಟ್ರೋಲ್ ಮಾಡುತ್ತಿರುವುದು ಬೇಸರ ತರಿಸಿದೆ' ಎಂದು ಹೇಳಿದ್ದಾರೆ. 

ಕಲ್ಕತ್ತಾ ರೈಲ್ವೇ ಸ್ಟೇಷನ್ನಲ್ಲಿ ಲತಾ ಮಂಗೇಶ್ಕರ್ ಅವರ ಹೇ ಪ್ಯಾರ್ ಕ ನಗ್ಮಾ ಹೇ ಹಾಡು ಇವರ ಬದುಕಿನ ನಗ್ಮಾವನ್ನೇ ಬದಲಾಯಿಸಿತು. ಏಕಾಏಕಿ ಸೆನ್ಸೇಷನಲ್ ಸಿಂಗರ್ ಆದರು. ಇವರಲ್ಲಿರುವ ಟ್ಯಾಲೆಂಟ್ ನೋಡಿ ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟರು. ಅಲ್ಲಿಂದ ಮುಂದೆ ರಾನು ಅದೃಷ್ಟವೇ ಬದಲಾಗಿ ಹೋಯಿತು. 

ಖುಷ್ಬು ಜೊತೆ ಚಿರಂಜೀವಿ ಸಖತ್ ಡ್ಯಾನ್ಸ್; ವಿಡಿಯೋ ವೈರಲ್

ಇತ್ತೀಚಿಗೆ ರಾನು ಕಾರ್ಯಕ್ರಮವೊಂದಕ್ಕೆ ಅತಿಯಾದ ಮೇಕಪ್ ಮಾಡಿಕೊಂಡು ಹೋಗಿದ್ದರು. ಅವರ ಮೇಕಪ್ ಲುಕ್ ಟ್ರೋಲ್ ಆಗಿತ್ತು. ಕೊನೆಗೆ ಮೇಕಪ್ ಮಾಡಿದ ಬ್ಯೂಟಿಶಿಯನ್ ಇದು ನಿಜವಾದ ಫೋಟೋವಲ್ಲ. ಫೇಕ್ ಫೋಟೋ ಎಂದು ಸ್ಪಷ್ಟನೆ ನೀಡಿದ್ದರು.