ನವದೆಹಲಿ (ನ. 30): ಪ್ರಧಾನಿ ಮೋದಿ ಖಾಸಗಿ ಸಮಾರಂಭಗಳಲ್ಲಿ ಭಾಗವಹಿಸುವುದು ಕಡಿಮೆ.  ಕಿರುತೆರೆ ನಟಿಯೊಬ್ಬರ ರಿಸೆಪ್ಷನ್‌ನಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ. 

ಯೇ ರಿಶ್ತಾ ಕ್ಯಾ ಕೆಹಲಾತಾ ಹೇ ಖ್ಯಾತಿಯ ಮೋಹೇನಾ ಕುಮಾರಿ ಸಿಂಗ್ ರಿಸೆಪ್ಷನ್‌ನಲ್ಲಿ ಭಾಗವಹಿಸಿ ಗಮನ ಸೆಳೆದರು.  ಮೋಹನ್ ಕುಮಾರಿ ಸಿಂಗ್ ಹಾಗೂ ಅವರ ಪತಿ ಮೋದಿ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

ಖುಷ್ಬು ಜೊತೆ ಚಿರಂಜೀವಿ ಸಖತ್ ಡ್ಯಾನ್ಸ್; ವಿಡಿಯೋ ವೈರಲ್

ಪ್ರಧಾನಿ ಮೋದಿಯವರ ಉಪಸ್ಥಿತಿ ನಮಗೆ ನಿಜವಾದ ಆಶೀರ್ವಾದ ಸಿಕ್ಕಂತೆ. ಮೋದಿಜಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಎಂದು ಮೋಹೆನಾ ಕುಮಾರಿ ಬರೆದುಕೊಂಡಿದ್ದಾರೆ. 

ಪ್ರಿಯಾಂಕ ರೆಡ್ಡಿ ಹತ್ಯೆ: ಸಿನಿ ಸೆಲಬ್ರಿಟಿಗಳಿಂದ ಆಕ್ರೋಶ

ಮೊಹೆನಾ ಹಾಗೂ ಸುಯೇಶ್ ರಾವತ್ ಇದೇ ವರ್ಷ ಅಕ್ಟೋಬರ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಮುನ್ನ ರಿಸೆಪ್ಷನ್ ಆಯೋಜಿಸಿದ್ದು ಗಣ್ಯರು ಭಾಗವಹಿಸಿದ್ದರು.  ಮೋಹೆನಾ ಕುಮಾರಿ ಯೇ ರಿಶ್ತಾ ಕ್ಯಾ ಕೆಹಲಾತಾ ಹೇ ಧಾರಾವಾಹಿಯ ಕೀರ್ತಿ ಪಾತ್ರದಲ್ಲಿ ಗಮನ ಸೆಳೆದಿದ್ದರು.