Asianet Suvarna News Asianet Suvarna News

Mrs Chatterjee Vs Norway: ಮಕ್ಕಳಿಗಾಗಿ ದೇಶದ ವಿರುದ್ಧ ಹೋರಾಡ್ತಾರೆ ರಾಣಿ ಮುಖರ್ಜಿ!

ಹಲವು ವರ್ಷಗಳ ನಂತರ ಕಮ್​ಬ್ಯಾಕ್​ ಆಗುತ್ತಿರೋ ನಟಿ ರಾಣಿ ಮುಖರ್ಜಿ ಮಿಸಸ್​ ಚಟರ್ಜಿ ವರ್ಸಸ್​ ನಾರ್ವೆದಲ್ಲಿ ನಟಿಸುತ್ತಿದ್ದು, ಅದರ ಟ್ರೇಲರ್​ ಬಿಡುಡೆಯಾಗಿದೆ. ಏನಿದರ ಕಥೆ?
 

Rani Mukerji as an ordinary housewife who fights an entire nation for her kids in Mrs Chatterjee Vs Norway
Author
First Published Feb 23, 2023, 5:40 PM IST

ಬಂಟಿ ಔರ್ ಬಾಬ್ಲಿ 2 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಾಣಿ ಮುಖರ್ಜಿ (Rani Mukharji) ಮತ್ತೊಮ್ಮೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಅವರ ಮಿಸೆಸ್ ಚಟರ್ಜಿ Vs ನಾರ್ವೆ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. 2.47 ನಿಮಿಷಗಳ ಟ್ರೇಲರ್​ನಲ್ಲಿ (Trailer) ರಾಣಿ ಮುಖರ್ಜಿ ಮತ್ತು ಅವರ ಕುಟುಂಬವು ನಗುತ್ತಾ ಆಟವಾಡುವುದನ್ನು ನೋಡಬಹುದು. ಆದರೆ ಏಕಾಏಕಿ  ಇಡೀ ಪ್ರಪಂಚವೇ ಇದ್ದಕ್ಕಿದ್ದಂತೆ ಕುಸಿಯುವ ಅನುಭವ. ಅವರ ಇಬ್ಬರೂ ಮಕ್ಕಳನ್ನು ಅವರಿಂದ ದೂರವಿಡಲಾಗುತ್ತದೆ.  ತನ್ನ ಮಕ್ಕಳನ್ನು ಮರಳಿ ಪಡೆಯಲು ತಾಯಿಯ ಹೋರಾಟ ಪ್ರಾರಂಭವಾಗುತ್ತದೆ. ಈ ಟ್ರೇಲರ್​ ನೋಡಿದರೆ ಮಕ್ಕಳಿಗಾಗಿ ತಾಯಿ ಪಡುವ ಸಂಕಷ್ಟಗಳ ಸರಮಾಲೆ ಎಂದು ತಿಳಿಯುತ್ತದೆ. ಟ್ರೇಲರ್‌ನಲ್ಲಿ ಅಮೋಘ ಅಭಿನಯ ನೀಡಿರುವ ರಾಣಿ ಮತ್ತೊಮ್ಮೆ ಅಭಿಮಾನಿಗಳ ಮನವನ್ನು ಆಳಲು ಬರುತ್ತಿದ್ದಾರೆ.  ಚಿತ್ರದ ನಿರ್ದೇಶಕರು ಆಶಿಮಾ ಚಿಬ್ಬರ್ (Ashima chibber) ಮತ್ತು ನಿರ್ಮಾಪಕ ನಿಖಿಲ್ ಅಡ್ವಾಣಿ. ಈ ಸಿನಿಮಾವನ್ನು ಎಮ್ಮೆ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರವು ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಾಣಿ ಮುಖರ್ಜಿಯವರ ಮಿಸೆಸ್ ಚಟರ್ಜಿ v/s ನಾರ್ವೆ ಚಿತ್ರದ 2.47 ನಿಮಿಷಗಳ ಆರಂಭದಲ್ಲಿ, ನಾರ್ವೆಯಲ್ಲಿ ವಾಸಿಸುವ ರಾಣಿ ಮುಖರ್ಜಿ ಅವರು ತಮ್ಮ ಪತಿ ಮತ್ತು ಮಕ್ಕಳನ್ನು ಪರಿಚಯಿಸುತ್ತಾರೆ, ಅವರು ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ರಾಣಿಯ ವೇಷಭೂಷಣವು ಬಂಗಾಳಿ ಮಾದರಿಯಲ್ಲಿದೆ. ಇಬ್ಬರು ಮಕ್ಕಳ ತಾಯಿಯಾಗಿರುವ ಇವರು ತಮ್ಮ ಮಕ್ಕಳನ್ನು ತುಂಬಾ ಚೆನ್ನಾಗಿ ಸಾಕುತ್ತಿದ್ದಾರೆ. ನಂತರ ಒಂದು ದಿನ ಇದ್ದಕ್ಕಿದ್ದಂತೆ ಅವರ ಜೀವನದಲ್ಲಿ ಬಿರುಗಾಳಿ ಬರುತ್ತದೆ.  ರಾಣಿ ತನ್ನ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ತನ್ನ ಪ್ರಜ್ಞೆಯನ್ನು ಕಳೆದುಕೊಂಡು ಕಾನೂನು ಹೋರಾಟ ನಡೆಸುತ್ತಾಳೆ. 

Actress Sridevi ಸಾವಿಗೆ 5 ವರ್ಷ: ಭಾವುಕ ನುಡಿನಮನ ಸಲ್ಲಿಸಿದ ಮಗಳು ಜಾಹ್ನವಿ ಕಪೂರ್​

ರಾಣಿಯಾಗಿರುವ ಶ್ರೀಮತಿ ಚಟರ್ಜಿ (Chatarji) ವಿರುದ್ಧ ನ್ಯಾಯಾಲಯವು ತೀರ್ಪು ಪ್ರಕಟಿಸುತ್ತದೆ. ಆದರೂ ಅವಳು ಬಿಡುವುದಿಲ್ಲ ಮತ್ತು ತನ್ನ ಮಕ್ಕಳನ್ನು ಮರಳಿ ಪಡೆಯಲು ಪ್ರತಿ ಯುದ್ಧವನ್ನು ಮಾಡುತ್ತಾಳೆ. ರಾಣಿ ತನ್ನ ಮಕ್ಕಳನ್ನು ಹೇಗೆ ಕಳೆದುಕೊಳ್ಳುತ್ತಾಳೆ ಮತ್ತು ಅವರನ್ನು ಹೇಗೆ ಮರಳಿ ಪಡೆಯುತ್ತಾಳೆ ಎನ್ನುವುದನ್ನು ಈ ಚಿತ್ರ ಆಧರಿಸಿದೆ. ಇದೇ ವೇಳೆ ಮಕ್ಕಳ ಇಲಾಖೆಯೂ ಇದರ ನೆಪದಲ್ಲಿ ದೊಡ್ಡ ಹಗರಣ ನಡೆಸುತ್ತಿದೆ ಅಂದರೆ ಮಕ್ಕಳ ಕಳ್ಳಸಾಗಾಣಿಕೆ ಮತ್ತು ವೇಶ್ಯಾವಾಟಿಕೆ ನಡೆಸುತ್ತಿರುವುದು ಶ್ರೀಮತಿ ಚಟರ್ಜಿಯವರಿಗೆ ತಿಳಿಯುತ್ತದೆ. ಟ್ರೈಲರ್ ಕೊನೆಯಲ್ಲಿ, ರಾಣಿ ನಾನು ಒಳ್ಳೆಯ ತಾಯಿ ಅಥವಾ ಕೆಟ್ಟ ತಾಯಿ, ಆದರೆ ನಾನು ತಾಯಿ ಎಂದು ಹೇಳುತ್ತಾರೆ. ಇದಿಷ್ಟು ಚಿತ್ರದ ಕಥೆ. 

ಇನ್ನು ರಾಣಿ ಮುಖರ್ಜಿ ಅವರ ನಿಜ ಜೀವನದ ವಿಷಯಕ್ಕೆ ಬರುವುದಾದರೆ, 50 ವರ್ಷದ ರಾಣಿಯವರು 1997ರ ರಾಜಾ ಕಿ ಆಯೇಗಿ ಬಾರಾತ್ ಮೂಲಕ ನಟನಾ ರಂಗಕ್ಕೆ  ಪ್ರವೇಶ ಮಾಡಿದರು. ಕುಚ್ ಕುಚ್ ಹೋತಾ ಹೈ'  (1990) ಚಿತ್ರ ಇವರಿಗೆ ಬ್ರೇಕ್​ ನೀಡಿತು.  ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್​ನ (film fare) ಅತ್ಯಂತ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. ಅವರು ನಂತರ ಅನೇಕ ಚಲನಚಿತ್ರಗಳಲ್ಲಿ ನಟಿಸಿದರೂ ಹೆಚ್ಚು ನಿರೀಕ್ಷೆಯ ಮಟ್ಟವನ್ನು ಮುಟ್ಟಲಿಲ್ಲ. 2004 ರಲ್ಲಿ ತೆರೆ ಕಂಡ  ಹಮ್ ತುಮ್  ಹಾಗೂ ವಿಮರ್ಶಾತ್ಮಕವಾಗಿ ಯಶಸ್ಸು ಕಂಡ 'ಯುವ' ಇವರ ಚಿತ್ರರಂಗದ ದಿಕ್ಕನ್ನೇ ಬದಲಿಸಿದವು. ಫಿಲ್ಮ್ ಫೇರ್ ಉತ್ಸವದಲ್ಲಿ  ಶ್ರೇಷ್ಠ ನಟಿ ಹಾಗೂ  ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಗಳಿಸಿದರು. ಇವರಿಗೆ ಇನ್ನಷ್ಟು ಶ್ರೇಯಸ್ಸು ತಂದುಕೊಟ್ಟ ಚಿತ್ರ ಬ್ಲ್ಯಾಕ್​. 2005ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ  ಕುರುಡಿ, ಕಿವುಡಿ ಮತ್ತು ಮೂಕ ಮಹಿಳೆಯಾಗಿ ನಟಿಸಿ  ಅನೇಕ ಪ್ರಮುಖ ಪ್ರಶಸ್ತಿಗಳನ್ನು ಗಳಿಸಿದರು. 

 ಆದಿತ್ಯ ಚೋಪ್ರಾ (Aditya Chopra) ಅವರನ್ನು ಮದುವೆಯಾಗಿ ಮಗಳ ತಾಯಿಯಾದಾಗಿನಿಂದ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದರು. ಸದ್ಯ ವರ್ಷದಲ್ಲಿ ಒಂದೇ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಕೊನೆಯದಾಗಿ 2021 ರ ಬಂಟಿ ಔರ್ ಬಬ್ಲಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಜೊತೆಗೆ ನಟಿಸಿದ್ದರು.  ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಫ್ಲಾಪ್ ಆಗಿತ್ತು. ಈಗ ಈ ಹೊಸ ಚಿತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ. 

ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!
 

Follow Us:
Download App:
  • android
  • ios