ಅಧಿಕೃತವಾಗಿ ​ಆಸ್ಕರ್​ ಅಂಗಳದಲ್ಲಿಲ್ಲ ವೀರ್​ ಸಾವರ್ಕರ್: ನಿರ್ಮಾಪಕರ ತಪ್ಪು ಮಾಹಿತಿಯಿಂದ ಗೊಂದಲ!

ಭಾರತದಿಂದ ಕಿರಣ್​ ರಾವ್​ ಅವರ ಲಾ ಪತಾ ಲೇಡೀಸ್​ ಮಾತ್ರ ಆಸ್ಕರ್​ಗೆ ಅಧಿಕೃತ ಎಂಟ್ರಿ ಪಡೆದಿದ್ದು, ವೀರ್​ ಸಾವರ್ಕರ್​ ಅಲ್ಲ ಎನ್ನುವ ಸ್ಪಷ್ಟನೆ ಬಂದಿದೆ. ಅಷ್ಟಕ್ಕೂ ಸುದ್ದಿ ಹರಡಿದ್ದು ಹೇಗೆ? 
 

Randeep Hoodas Swatantrya Veer Savarkar NOT Officially Submitted For Oscars suc

 ನಟ ರಣ್‌ದೀಪ್‌ ಹೂಡಾ ನಟಿಸಿ ನಿರ್ದೇಶಿಸಿರುವ ಸ್ವಾತಂತ್ರ್ಯ ವೀರ್‌ ಸಾವರ್ಕರ್‌ ಸಿನಿಮಾವೂ ಅಧಿಕೃತವಾಗಿ 2025ರ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ ಎನ್ನುವುದು ತಪ್ಪು ಮಾಹಿತಿ. ಆಮೀರ್​ ಖಾನ್​ ಅವರ ಮಾಜಿ ಪತ್ನಿ ಕಿರಣ್​ ರಾವ್​ ಅವರ ಲಾಪತಾ ಲೇಡೀಸ್​ ಬಿಟ್ಟರೆ ಭಾರತದಿಂದ ಇನ್ನಾವುದೇ ಸಿನಿಮಾ ಆಸ್ಕರ್​ ಅಂಗಳಕ್ಕೆ ಹೋಗಿಲ್ಲ. ಆದರೆ, ಚಿತ್ರದ ನಿರ್ಮಾಪಕರು ನೀಡಿದ ತಪ್ಪು ಮಾಹಿತಿಯಿಂದಾಗಿ ಗೊಂದಲ ಏರ್ಪಟ್ಟಿತ್ತು, ವೀರ್ ಸಾವರ್ಕರ್​  ಕೂಡ ಅಧಿಕೃತವಾಗಿ ಆಸ್ಕರ್​  ಅಂಗಳಕ್ಕೆ ಹೋಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ‘2025ರ ಆಸ್ಪರ್​ ಪ್ರಶಸ್ತಿಯ ಸ್ಪರ್ಧೆಗೆ ನಮ್ಮ ಸಿನಿಮಾ ಅಧಿಕೃತವಾಗಿ ಸಲ್ಲಿಕೆ ಆಗಿದೆ. ಮೆಚ್ಚುಗೆ ನೀಡಿದ್ದಕ್ಕೆ ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾಗೆ ಧನ್ಯವಾದಗಳು’ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದರಿಂದಾಗಿ ಈ ಗೊಂದಲ ಉಂಟಾಗಿದೆ.

ಅಷ್ಟಕ್ಕೂ, ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನಗಾಥೆಯನ್ನು ಹೊಂದಿರುವ ವೀರ್​ ಸಾವರ್ಕರ್​ ಚಿತ್ರವನ್ನು ಚಿತ್ರತಂಡವೇ ಬೇಕಿದ್ದರೆ ಆಸ್ಕರ್​ಗೆ ಕಳುಹಿಸಬಹುದು. ಅದಕ್ಕೆ ಹಣದ ಖರ್ಚು ಮಾತ್ರವಲ್ಲದೇ ಇನ್ನು ಹಲವಾರು ಪ್ರಕ್ರಿಯೆಗಳು ಇವೆ.  ಆದರೆ ಸದ್ಯದ ಮಟ್ಟಿಗೆ ಅದು ಅಧಿಕೃತವಾಗಿ ಆಸ್ಕರ್​ಗೆ ನಾಮನಿರ್ದೇಶನಗೊಂಡಿಲ್ಲ.  ಅಷ್ಟಕ್ಕೂ ಒಂದು ದೇಶದಿಂದ 2 ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡಲು  ಸಾಧ್ಯವೂ ಇಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಷಯ ವೈರಲ್​ ಆಗುತ್ತಿದ್ದಂತೆಯೇ  ಹಲವರು ಇದರ ಬಗ್ಗೆ ಪ್ರಶ್ನಿಸಿದ್ದರು. ಲಾ ಪತಾ ಲೇಡೀಸ್​ ಇರುವಾಗ ಮತ್ತೊಂದು ಸಿನಿಮಾ ಅಧಿಕೃತ ಪ್ರವೇಶ ಪಡೆದದ್ದು ಹೇಗೆ ಎಂದು ಪ್ರಶ್ನಿಸಲಾಗಿತ್ತು.  

28 ಸಿನಿಮಾ ಹಿಂದಿಕ್ಕಿ ಆಸ್ಕರ್​ ಅಂಗಳಕ್ಕೆ 'ಲಾಪತಾ ಲೇಡೀಸ್': ಚೊಚ್ಚಲ ಚಿತ್ರದಲ್ಲಿ ಮೂವರು ತಾರೆಯರಿಗೆ ಧಮಾಕಾ! ​

ಇದಕ್ಕೆ ಈಗ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (FFI) ಸ್ಪಷ್ಟನೆ ನೀಡಿದೆ. ಅಂದಹಾಗೆ, ಆಸ್ಕರ್​ಗೆ ಅಧಿಕೃತ ಪ್ರವೇಶ ಮಾಡಿಸುವ  ಪ್ರಕ್ರಿಯೆಯನ್ನು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (FFI) ಎಂಬ ಸ್ವತಂತ್ರ ಸಂಸ್ಥೆಯು ನಡೆಸುತ್ತದೆ. ದಶಕಗಳಿಂದ ಈ ಜವಾಬ್ದಾರಿಯನ್ನು ಇದಕ್ಕೆ ವಹಿಸಲಾಗಿದೆ. ಪ್ರತಿ ದೇಶವೂ ಮುಂದಿನ ವರ್ಷದ ಆಸ್ಕರ್‌ಗೆ ತಮ್ಮ ಅಧಿಕೃತ ಪ್ರವೇಶವಾಗಿ ಒಂದು ಚಲನಚಿತ್ರವನ್ನು ಅದು ಕಳುಹಿಸುತ್ತದೆ. ಇದೀಗ FFI ಬಿಡುಗಡೆಯ ಪ್ರಕಾರ, ಅದು ಲಾಪತಾ ಲೇಡೀಸ್ ಮಾತ್ರವೇ ಆಗಿದೆ. ಆದರೆ ವೀರ್​ ಸಾವರ್ಕರ್​ ನಿರ್ಮಾಪಕರ ತಪ್ಪು ಮಾಹಿತಿಯಿಂದಾಗಿ ಸುಳ್ಳು ಸುದ್ದಿ ಎಲ್ಲೆಡೆ ಹರಡಿದೆ. 

ವೀರ್ ಸಾವರ್ಕರ್​ ಚಿತ್ರವನ್ನು ಸ್ವತಂತ್ರವಾಗಿ ಆಸ್ಕರ್​ಗೆ ಕಳುಹಿಸುವ ಅವಕಾಶವಿದೆ. 2022 ರಲ್ಲಿ ಗುಜರಾತಿ ಚಲನಚಿತ್ರ ಚೆಲೋ ಶೋ (ಕೊನೆಯ ಚಲನಚಿತ್ರ ಪ್ರದರ್ಶನ) ಭಾರತದಿಂದ ಆಸ್ಕರ್​ಗೆ ಅಧಿಕೃತ ಪ್ರವೇಶ ಕಂಡಿತ್ತು. ಆ ಸಂದರ್ಭದಲ್ಲಿ  ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿವಾಡಿಯಂತೆ, ಎಸ್​ಎಸ್​ ರಾಜಮೌಳಿಯ ಬ್ಲಾಕ್‌ಬಸ್ಟರ್ ಆರ್​ಆರ್​ಆರ್​ ಅನ್ನು ಸ್ವತಂತ್ರವಾಗಿ ಸಲ್ಲಿಸಲಾಗಿತ್ತು. ಹೀಗೆ ವೀರ್​ ಸಾವರ್ಕರ್​ಗೂ ಅವಕಾಶವಿದೆಯೇ ವಿನಾ ಅಧಿಕೃತವಾಗಿ ಅದನ್ನು ಕಳುಹಿಸಿಲ್ಲ ಎಂದು ಈಗ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಅಂದಹಾಗೆ, ಆಸ್ಕರ್​ ರೇಸ್​ನಲ್ಲಿ ಲಾ ಪತಾ ಲೇಡೀಸ್​ ಸೇರಿದಂತೆ 29 ಸಿನಿಮಾಗಳಿದ್ದವು. ಆ ಪೈಕಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ'ವೇ ಆಯ್ಕೆಯಾಗಲಿದೆ ಎಂದೇ ಕೊನೆಯ ಕ್ಷಣದವರೆಗೂ ಅಂದುಕೊಳ್ಳಲಾಗಿತ್ತು. ಉಳಿದಂತೆ ತಮಿಳು ಚಿತ್ರ ಮಹಾರಾಜ, ತೆಲುಗುವಿನ  ಕಲ್ಕಿ 2898 AD ಮತ್ತು ಹನುಮಾನ್, ಬಾಲಿವುಡ್​ನ   ಸ್ವಾತಂತ್ರ್ಯ ವೀರ್ ಸಾವರ್ಕರ್ ಮತ್ತು ಆರ್ಟಿಕಲ್ 370 ಸಹ ಪಟ್ಟಿಯಲ್ಲಿದ್ದವು. ಆದರೆ ನಿರೀಕ್ಷೆಗೂ ಮೀರಿ ಲಾಪತಾ ಲೇಡೀಸ್​ ಆಯ್ಕೆಯಾಗಿದೆ. ಈ ಮೂಲಕ ಹೊಸದಾಗಿ ಎಂಟ್ರಿ ಕೊಟ್ಟಿರೋ, ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ಅವರು ಲಾಟರಿ ಹೊಡೆದಿದ್ದಾರೆ. ಮೊದಲ ಚಿತ್ರದಲ್ಲಿಯೇ ಈ ಪರಿಯ ಯಶಸ್ಸು ಕಂಡಿದ್ದಾರೆ.  

ಅರ್ಜೆಂಟ್​ ಬಂದ್ರೂ ಬಾತ್​ರೂಮ್​ಗೆ ಹೋಗಲು ಪರದಾಡಿದ್ರಂತೆ ಆಲಿಯಾ! ಸೀರೆ ಫಜೀತಿ ಬಗ್ಗೆ ಹೇಳಿದ್ದೇನು ಕೇಳಿ
 

Latest Videos
Follow Us:
Download App:
  • android
  • ios