ರಣಬೀರ್ ಕಪೂರ್ ಚಾಕಲೇಟ್ ಬಾಯ್ ಎಂದೇ ಖ್ಯಾತಿ ಪಡೆದಿದ್ದಾರೆ. ಆದರೆ, ಅವರ ಪ್ರೇಮ ಜೀವನದಲ್ಲಿ ಅನೇಕ ನಟಿಯರಿದ್ದಾರೆ. ದೀಪಿಕಾ ಪಡುಕೋಣೆ ಜೊತೆಗಿನ ಸಂಬಂಧ ಮುರಿದು ಬಿದ್ದ ನಂತರ ಖಿನ್ನತೆಗೆ ಒಳಗಾಗಿದ್ದರು. ಆಲಿಯಾ ಭಟ್ ಜೊತೆ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು ಎಂಬ ಮಾತುಗಳಿವೆ. ಇತ್ತೀಚೆಗೆ 'ಅನಿಮಲ್' ಚಿತ್ರದ ಯಶಸ್ಸಿನಿಂದ ಅವರ ಆಸ್ತಿ 345 ಕೋಟಿ ರೂಪಾಯಿ ದಾಟಿದೆ. ಪ್ರತಿ ಚಿತ್ರಕ್ಕೆ 50 ಕೋಟಿ ಸಂಭಾವನೆ ಪಡೆಯುತ್ತಾರೆ.
ನಟಿ ಆಲಿಯಾ ಭಟ್ ಪತಿ, ನಟ ರಣಬೀರ್ ಕಪೂರ್ ಚಾಕಲೇಟ್ ಬಾಯ್ ಎಂದೇ ಫೇಮಸ್ ಆದವರು. ಆದರೆ ಇವ್ರ ಹಿಸ್ಟರಿ ಮಾತ್ರ ಭಯಾನಕವಾಗಿದೆ. ಹತ್ತಕ್ಕೂ ಅಧಿಕ ನಟಿಯರ ಜೊತೆ ಸಂಬಂಧ ಹೊಂದಿದ್ದ ರಣಬೀರ್, ನಟಿ ದೀಪಿಕಾಳನ್ನು ಮೋಹನ ಜಾಲದಲ್ಲಿ ಸಿಲುಕಿಸಿ ಖಿನ್ನತೆಗೂ ತಳ್ಳಿದ್ದರು ಎನ್ನುವುದು ಗೊತ್ತೆ? ಮದುವೆಯಾಗಿ ಆರೇ ತಿಂಗಳಿಗೆ ಆಲಿಯಾ ಭಟ್ಗೆ ಮಗು ಹುಟ್ಟಿತ್ತು. ಇದರ ಅರ್ಥ ಆಲಿಯಾ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರಿಂದಲೋ ಏನೋ, ಆಕೆಯನ್ನೇ ಮದುವೆಯಾಗುವ ಸ್ಥಿತಿ ರಣಬೀರ್ಗೆ ಬಂತು, ಇಲ್ಲದಿದ್ದರೆ ಆಲಿಯಾ ಕೂಡ ಹತ್ತರಲ್ಲಿ 11 ಆಗುತ್ತಿದ್ದರು ಎಂದೇ ಬಿ-ಟೌನ್ನಲ್ಲಿ ಮಾತನಾಡಿಕೊಳ್ಳುವುದು ಇದೆ. ಅಂದಹಾಗೆ, 1982ರಲ್ಲಿ ಜನಿಸಿರೋ ನಟ 43ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕೆಲವು ಬ್ಲಾಕ್ಬಸ್ಟರ್ ಚಿತ್ರ ಕೊಟ್ಟಿರೋ ನಟನಿಗೆ ಸಿಕ್ಕಾಪಟ್ಟೆ ಕಮಾಯಿ ಮಾಡಿಸಿದ್ದು ಕಳೆದ ವರ್ಷ ಬಿಡುಗಡೆಯಾದ ‘ಅನಿಮಲ್’. ಬೆತ್ತಲಾಗುತ್ತಲೇ ಹಲ್ಚಲ್ ಸೃಷ್ಟಿಸಿ ತೃಪ್ತಿ ಡಿಮ್ರಿ ಜೊತೆ ಹಸಿಬಿಸಿಯಾಗಿ ಕಾಣಿಸಿಕೊಂಡದ್ದೂ ಅಲ್ಲದೇ, ಒಬ್ಬ ಮನುಷ್ಯ ಅತ್ಯಂತ ಕ್ರೂರವಾಗಿ ಹೇಗೆ ಇರಬಹುದು ಎಂದು ತೋರಿಸಿಕೊಟ್ಟ ಅನಿಮಲ್ ಚಿತ್ರದ ಯಶಸ್ಸಿನ ಹಿಂದೆ ರಣಬೀರ್ ಪಾಲು ಬಲು ದೊಡ್ಡದಿದೆ. ಈ ಚಿತ್ರದಿಂದಾಗಿ ಸದ್ಯ ನಟ ಒಟ್ಟು ಆಸ್ತಿ 345 ಕೋಟಿ ರೂಪಾಯಿಗೂ ಅಧಿಕವಾಗಿ ಇದೆ ಎಂದು ವರದಿಯಾಗಿದೆ. ಅವರು ಪ್ರತಿ ಸಿನಿಮಾಗೆ 50 ಕೋಟಿ ರೂಪಾಯಿ ಸಂಭಾವನೆ ಮಾಡುತ್ತಾರೆ. ‘ಅನಿಮಲ್’ ಚಿತ್ರಕ್ಕೆ ಅವರು ಪಡೆದಿದ್ದು 60 ಕೋಟಿ ರೂಪಾಯಿ ಪಡೆದಿರುವುದಾಗಿ ಹೇಳಲಾಗುತ್ತಿದೆ.
ಆಲಿಯಾ ಭಟ್ಗಿಂತಲೂ ಮುಂಚೆ ನಟನಿಗೆ ಏನಿಲ್ಲವೆಂದರೂ ಕನಿಷ್ಠ ಹತ್ತು ಮಂದಿ ಜೊತೆ ಸಂಬಂಧ ಇತ್ತು ಎನ್ನಲಾಗುತ್ತಿದೆ. ಅವರಲ್ಲಿ ಘಟಾನುಘಟಿ ಸ್ಟಾರ್ಗಳು ಸೇರಿದಂತೆ ಅಷ್ಟೊಂದು ಹೆಸರು ಮಾಡದ ನಟಿಯರೂ ಹಾಗೂ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಸೇರಿಕೊಂಡಿದ್ದಾರೆ. ನಟನಾ ವೃತ್ತಿ ಕೈಗೊಳ್ಳುವ ಪೂರ್ವದಲ್ಲಿಯೇ ಇವರ ಸಂಬಂಧ, ಡೇಟಿಂಗ್ ಎಲ್ಲಾ ಶುರುವಾಗಿತ್ತು. ಅವರ ಮೊದಲ ಲವ್ಸ್ಟೋರಿ ಶುರುವಾದದ್ದು ನಟಿ ಆವಂತಿಕಾ ಮಲಿಕ್. ರಣಬೀರ್ ಚಿಕ್ಕವಯಸ್ಸಿನಲ್ಲಿಯೇ ಇವರು ಆವಂತಿಕಾ ಜೊತೆ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಇದಾದ ಬಳಿಕ ಇವರು ಸಂಬಂಧದಲ್ಲಿ ಇದ್ದುದು ಫ್ಯಾಷನ್ ಡಿಸೈನರ್ ನಂದಿತಾ ಮಹ್ತಾನಿ. ಇವರು ಕೆಲಕಾಲ ಒಟ್ಟಿಗೆ ಇದ್ದರೂ ಎನ್ನಲಾಗುತ್ತದೆ.
'ಅಪ್ಪು' ಸಿನಿಮಾಕ್ಕೆ ನಾಯಕಿಯಾಗಿ ರಮ್ಯಾ ರಿಜೆಕ್ಟ್ ಆಗಿದ್ದೇಕೆ? ಕುತೂಹಲದ ಕಾರಣ ಹೇಳಿದ ನಿರ್ದೇಶಕ
ನಂದಿತಾ ಜೊತೆ ಬ್ರೇಕಪ್ ಆದ ಬಳಿಕ ಮೂರನೆ ಎಂಟ್ರಿ ಕೊಟ್ಟಿದ್ದು ಬಾಲಿವುಡ್ ನಟಿ ಸೋನಂ ಕಪೂರ್ ಅಂತೆ. ಇಬ್ಬರೂ ‘ಸಾವರಿಯಾ’ ಚಿತ್ರದಲ್ಲಿ ನಟಿಸುವಾಗಿ ಲವ್ ಆಗಿ, ಡೇಟಿಂಗ್ ಆಗಿ ಕೊನೆಗೆ ಸಂಬಂಧದಲ್ಲಿ ಬಿದ್ದು, ಬ್ರೇಕಪ್ ಮಾಡಿಕೊಂಡು ದೀಪಿಕಾ ಪಡುಕೋಣೆ ಹಿಂದೆ ಹೋದರು ರಣಬೀರ್. ಇವರಿಬ್ಬರ ಸಂಬಂಧ ಅಂತೂ ಬಿ-ಟೌನ್ನಲ್ಲಿ ಸಕತ್ ಸದ್ದು ಮಾಡಿತ್ತು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದೂ ಹೇಳಲಾಗಿತ್ತು. ಏಕೆಂದರೆ ಇವರ ಸಂಬಂಧ ಒಂದು ಹಂತ ಮೀರಿತ್ತು ಎನ್ನಲಾಗಿದೆ. ಆದರೆ ಎರಡೇ ವರ್ಷಗಳಲ್ಲಿ ಅಂದರೆ, 2007ರಿಂದ 2009ರಲ್ಲಿ ಸಂಬಂಧ ಕೊನೆಯಾಯಿತು. ಇದು ದೀಪಿಕಾ ಅವರನ್ನು ಖಿನ್ನತೆಗೆ ಕೂಡ ತಳ್ಳಿತ್ತು ಎಂದೇ ಹೇಳಲಾಗುತ್ತದೆ. ಆದರೆ ಬ್ರೇಕಪ್ ಬಳಿಕವೂ ಯಾವುದೋ ಒಂದು ಆಸೆಯಲ್ಲಿ ನಟಿ ರಣಬೀರ್ ಜೊತೆಯಲ್ಲಿ ಸಿನಿಮಾ ಮಾಡಿದ್ದರು. ಆದರೆ ಆ ಸಂಬಂಧ ಹಳಸಿಹೋಗಿತ್ತು. ದೀಪಿಕಾ ಬಹಳ ನೋವನ್ನು ಅನುಭವಿಸಿದ್ದರು ಎನ್ನಲಾಗುತ್ತದೆ.
ದೀಪಿಕಾ ಜೊತೆಗಿನ ಬ್ರೇಕಪ್ ಬಳಿಕ ರಣಬೀರ್ ಜೀವನದಲ್ಲಿ ಎಂಟ್ರಿ ಕೊಟ್ಟಿದ್ದು, ನರ್ಗಿಸ್ ಫಕ್ರಿ. ಈ ಬಗ್ಗೆ ಸಾಕಷ್ಟು ಗುಸುಗುಸು ಇದ್ದರೂ ಸಂಬಂಧವನ್ನು ಮಾಮೂಲಿನಂತೆ ಇವರಿಬ್ಬರೂ ಒಪ್ಪಿಕೊಂಡಿರಲಿಲ್ಲ. ಆದರೆ ಒಡನಾಟದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಬಳಿಕ ಕರ್ನಾಟಕದ ಇನ್ನೋರ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಜೊತೆ ರಣಬೀರ್ ಹೆಸರು ಕೇಳಿ ಬಂತು. 2010ರ ವೇಳೆಗೆ ಇವರ ನಡುವೆ ಸಾಕಷ್ಟು ನಡೆದಿತ್ತು ಎಂದೇ ವಿಶ್ಲೇಷಿಸಲಾಗುತ್ತಿದೆ. ಬಳಿಕ ರಣಬೀರ್ ಕಪೂರ್ ಹಾಗೂ ಬಾಲಿವುಡ್ ನಟಿ ಕತ್ರಿನಾ ಕೈಫ್ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಅಲ್ಲಿಂದಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿ ಡೇಟಿಂಗ್ನಲ್ಲಿ ಇದ್ದರು. ಆರು ವರ್ಷಗಳ ಸಂಬಂಧದ ಬಳಿಕ 2016 ಬ್ರೇಕ್ ಆಯಿತು. ಇದಾದ ಬಳಿಕ ಮಾಡೆಲ್ ಎಂಜೆಲಾ ಜಾನ್ಸನ್, ಪಾಕಿಸ್ತಾನಿ ನಟಿ ಮಹಿರಾ ಖಾನ್ ಜೊತೆಯೂ ರಣಬೀರ್ ಹೆಸರು ಕೇಳಿಬಂತು. ಇವೆಲ್ಲವುಗಳ ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆ ನಟಿಸಿ ಲವ್ ಮಾಡಿ, ಗರ್ಭಿಣಿಯಾದ ಬಳಿಕ ಮದುವೆಯೂ ಆಗಿದ್ದು, ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.
ಸಂಸದೆ ಕಂಗನಾ ವಾಸಿಸದ ಮನೆಗೆ 'ಕರೆಂಟ್ ಶಾಕ್' ಕೊಟ್ಟ ಕಾಂಗ್ರೆಸ್ ಸರ್ಕಾರ! ಇನ್ನು ನಟಿ ಕೇಳಬೇಕೆ?
