ಪ್ಯಾಂಟ್ ಮಧ್ಯೆ ಟೀ ಚೆಲ್ಲಿ ಪೇಚಿಗೆ ಸಿಲುಕಿದ ನಟ Ranbir Kapoor
ಕಾರ್ಯಕ್ರಮವೊಂದರಲ್ಲಿ ಟೀ ಕುಡಿಯುವಾಗ ಪ್ಯಾಂಟ್ ಮೇಲೆ ಚೆಲ್ಲಿಕೊಂಡು ಮುಜುಗರ ಅನುಭವಿಸಿದ ನಟ ರಣಬೀರ್ ಕಪೂರ್. ಆಗಿದ್ದೇನು?
ಬಾಲಿವುಡ್ ನಟ ರಣಬೀರ್ ಕಪೂರ್ (Ranabir Kapoor) ಇತ್ತೀಚೆಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಜೊತೆ ಅವರ ತಾಯಿ ನೀತು ಕಪೂರ್ ಕೂಡ ಕಾಣಿಸಿಕೊಂಡಿದ್ದರು. ಈಗ ಈ ಘಟನೆಯ ಹಲವು ಫೋಟೋಗಳು ಮತ್ತು ವಿಡಿಯೋಗಳು ರಣಬೀರ್ ವೈರಲ್ ಆಗುತ್ತಿವೆ. ಆದರೆ ಇದರ ವಿಡಿಯೋ ವೈರಲ್ ಆಗಲು ಕಾರಣ ಮಾತ್ರ ಕುತೂಹಲವಾಗಿದೆ. ಅಷ್ಟಕ್ಕೂ ಆಗಿದ್ದು ಏನೆಂದರೆ, ರಣವೀರ್ ಕಪೂರ್ ಅವರಿಗೆ ಮುಜುಗರ ತರುವ ಸಂಗತಿ ಇದಾಗಿದೆ. ವೈರಲ್ ವಿಡಿಯೋದಲ್ಲಿ, ರಣಬೀರ್ ಕಪೂರ್ ವೇದಿಕೆಯಲ್ಲಿ ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಈ ಸಮಯದಲ್ಲಿ, ಅವರ ಕೈಯಲ್ಲಿ ಒಂದು ಕಪ್ ಚಹಾ (Tea) ಕೂಡ ಇರುತ್ತದೆ. ಹೀಗೆ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ರಣಬೀರ್ ಅವರ ಚಹಾಕಪ್ ಅಚಾನಕ್ ಆಗಿ ಅವರ ಪ್ಯಾಂಟ್ ಮೇಲೆ ಬೀಳುತ್ತದೆ.
ಅದೇ ನೇರವಾಗಿ ಪ್ಯಾಂಟ್ (Pant) ಮಧ್ಯೆ ಬೀಳುವ ಕಾರಣ, ಮುಜುಗರ ಉಂಟಾಗುತ್ತದೆ. ಅಲ್ಲಿ ಎಲ್ಲ ಒದ್ದೆಯಾಗುತ್ತದೆ. ಹೀಗೆ ಪ್ಯಾಂಟ್ ಮೇಲೆ ಟೀ ಚೆಲ್ಲುತ್ತಿದ್ದಂತೆ ರಣಬೀರ್ ಇದ್ದಕ್ಕಿದ್ದಂತೆ ಎದ್ದು ಹೋಗುತ್ತಾರೆ. ಅದೇ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ಅನೇಕ ಜನರು ಅಲ್ಲಿಗೆ ತಲುಪುತ್ತಾರೆ. ಇದರ ನಂತರ, ರಣಬೀರ್ ತಮ್ಮ ಕುರ್ಚಿಯನ್ನು ಬದಲಾಯಿಸುತ್ತಾರೆ ಮತ್ತು ಇನ್ನೊಂದು ಕುರ್ಚಿಯ ಮೇಲೆ ಕುಳಿತು ಕಾರ್ಯಕ್ರಮವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ.
ರಣಬೀರ್-ಆಲಿಯಾ ವೆಡ್ಡಿಂಗ್ ಆ್ಯನಿವರ್ಸರಿ: ಮಾಜಿ ಪ್ರಿಯತಮನಿಗಾಗಿ ಕಣ್ಣೀರಿಟ್ಟ ನಟಿ ಕತ್ರೀನಾ
ಈಗ ರಣಬೀರ್ ಅವರ ಈ ವಿಡಿಯೋ ನೋಡಿದ ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಲ್ಲಿ ಕೆಲವರು ಅವನನ್ನು ಗೇಲಿ ಮಾಡುತ್ತಿದ್ದಾರೆ. ರಣಬೀರ್ ಹೆಣ್ಣು ಮಗುವಿನ ತಂದೆ ಎಂದು ಜನರು ಹೇಳುತ್ತಾರೆ, ಆದರೆ ಅವರ ಅಭ್ಯಾಸಗಳು ಮಕ್ಕಳಂತೆ. ಅದೇ ಸಮಯದಲ್ಲಿ, ಕೆಲವರು ಅವರಿಂದ ಪ್ರಭಾವಿತರಾಗಿದ್ದಾರೆ. ರಣಬೀರ್ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದಿದ್ದಾರೆ. ಅದಕ್ಕೇ ರಣಬೀರ್ ಸೂಪರ್ ಸ್ಟಾರ್' (Super Star) ಎಂದು ಒಬ್ಬರು ಬರೆದಿದ್ದಾರೆ. ಕೆಲವರು ಇದನ್ನು ಪೂರ್ವ ಉದ್ದೇಶಿತ ವಿಡಿಯೋ ಎಂದಿದ್ದಾರೆ. ವಿಡಿಯೋ ವೈರಲ್ ಆಗಲಿ ಎನ್ನುವ ಉದ್ದೇಶದಿಂದ ಮೊದಲೇ ಯೋಜಿಸಿದಂತೆ ತೋರುತ್ತಿದೆ. ಅದಕ್ಕಾಗಿಯೇ ವಿಡಿಯೋ ಮಾಡಲೂ ಸೂಚಿಸಲಾಗಿತ್ತು. ಇಂಥ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಸಕತ್ ಸುದ್ದಿಯಾಗುತ್ತದೆ ಎಂದು ಗೊತ್ತಿರುವ ಕಾರಣದಿಂದಲೇ ಹೀಗೆ ಮಾಡಲಾಗಿದೆ ಎಂದಿದ್ದಾರೆ.
ಈಚೆಗಷ್ಟೇ, ರಣಬೀರ್ ಕಪೂರ್ ಪತ್ನಿ ಆಲಿಯಾ ಅವರ ಚಪ್ಪಲಿಯನ್ನು ಎತ್ತಿಡುವ ಮೂಲಕ ಫ್ಯಾನ್ಸ್ ಗಮನ ಸೆಳೆದಿದ್ದಾರೆ. ಖ್ಯಾತ ಸಿನಿಮಾ ನಿರ್ಮಾಪಕ ಯಶ್ ಚೋಪ್ರಾ ಅವರ ಪತ್ನಿ, ನಿರ್ಮಾಪಕಿ-ಗಾಯಕಿ ಪಮೇಲಾ ಚೋಪ್ರಾ ನಿಧನರಾಗಿದ್ದ ಸಂದರ್ಭದಲ್ಲಿ ಹಲವು ನಟ-ನಟಿಯರ ಜೊತೆ ರಣಬೀರ್ ಕಪೂರ್-ಆಲಿಯಾ ಕೂಡ ಭೇಟಿ ನೀಡಿದ್ದರು. ಮುಂದಿದ್ದ ಆಲಿಯಾ ಚಪ್ಪಲಿಯನ್ನು ಮನೆಯ ಬಾಗಿಲಿನಲ್ಲೇ ಬಿಟ್ಟು ಒಳಗೆ ಎಂಟ್ರಿ ಕೊಟ್ಟರು. ಹಿಂದೆ ಬಂದ ರಣಬೀರ್ ಕಪೂರ್ ಪತ್ನಿ ಅಲಿಯಾ ಚಪ್ಪಲಿಯನ್ನು ಎತ್ತಿ ಒಳಗೆ ಇಟ್ಟರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಅಭಿಮಾನಿಗಳು ರಣಬೀರ್ ಕಪೂರ್ ಅವರನ್ನು ಕೊಂಡಾಡುತ್ತಿದ್ದಾರೆ. ಎಂಥ ನಡತೆ ಎಂದು ಹೊಗಳುತ್ತಿದ್ದಾರೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಮನೆಬಾಗಿಲಲ್ಲಿ ಅಲಿಯಾ ಬಿಚ್ಚಿಟ್ಟ ಚಪ್ಪಲಿ ಎತ್ತಿಟ್ಟ ರಣಬೀರ್: ಅಭಿಮಾನಿಗಳ ಹೃದಯಗೆದ್ದ ವಿಡಿಯೋ ವೈರಲ್
ರಣಬೀರ್ ಕೊನೆಯದಾಗಿ 'ತೂ ಜೂಠಿ ಮೈ ಮಕ್ಕಾರ್' (Too jhooti mai Makkar) ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇನ್ನು, ರಣಬೀರ್ ಅವರ ಮುಂಬರುವ ಯೋಜನೆಗಳ ಬಗ್ಗೆ ಮಾತನಾಡುತ್ತಾ, ಅವರು ಶೀಘ್ರದಲ್ಲೇ 'ಎನಿಮಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.