ಕರಣ್ ಜೋಹಾರ್‌ರ 'ಕಾಫಿ ವಿತ್ ಕರಣ್' ಟಾಕ್ ಶೋ, 2004ರಿಂದ 8 ಸೀಸನ್‌ಗಳಲ್ಲಿ 142ಕ್ಕೂ ಹೆಚ್ಚು ಸಂಚಿಕೆಗಳನ್ನು ಪ್ರಸಾರ ಮಾಡಿದೆ. ಸೆಲೆಬ್ರಿಟಿಗಳ ಗಾಸಿಪ್‌ಗಳಿಂದಾಗಿ ಈ ಶೋ ಟ್ರೋಲ್‌ಗಳಿಗೆ ಗುರಿಯಾಗುತ್ತಿದೆ. ರಣಬೀರ್ ಕಪೂರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಒತ್ತಡ ಹೇರಲಾಗುತ್ತದೆ ಮತ್ತು ಕರಣ್ ಜೋಹಾರ್ ಇದರಿಂದ ಹಣ ಗಳಿಸುತ್ತಾರೆ ಎಂದು ಆರೋಪಿಸಿದ್ದಾರೆ. ಕಾರ್ಯಕ್ರಮದಿಂದ ಯಾವುದೇ ಲಾಭವಿಲ್ಲ ಎಂದೂ ಅವರು ಹೇಳಿದ್ದಾರೆ.
ಹಿಂದಿ ಚಿತ್ರರಂಗ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಕಾಫಿ ವಿತ್ ಕರಣ್ ಎಂಬ ಸೆಲೆಬ್ರಿಟಿ ಟಾಕ್ ಶೋ ನಡೆಸಿಕೊಂಡು ಬಂದಿದ್ದಾರೆ. 2004ರಲ್ಲಿ ಆರಂಭವಾದ ಈ ಕಾರ್ಯಕ್ರಮ ಟಿವಿಯಲ್ಲಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಈಗಾಗಲೆ ಸುಮಾರು 8 ಸೀಸನ್‌ಗಳನ್ನು ಮುಗಿಸಿದ್ದಾರೆ. ಸುಮಾರು 147 ಎಪಿಸೋಡ್ ಅಗಿದ್ದು ಅದರ ಜೊತೆಯಲ್ಲಿ 6 ಸ್ಪೆಷಲ್ ಎಪಿಸೋಡ್ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ನಗು ನಗುತ್ತಾ ಮಾತನಾಡುವ ಸೆಲೆಬ್ರಿಟಿಗಳಿಗೆ ಈ ಕಾರ್ಯಕ್ರಮದಿಂದ ತೊಂದರೆ ಆಗುತ್ತಿದೆ. ಇದನ್ನು ರಣಬೀರ್ ಕಪೂರ್ ಒಪ್ಪಿಕೊಂಡಿದ್ದಾರೆ.
'ಈ ವರ್ಷ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲು ನನಗೆ ಒತ್ತಾಯ ಮಾಡಿದ್ದರು. ನನಗೆ ಬರಲು ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ ನಾನು ಮತ್ತು ಅನುಷ್ಕಾ ಹೋರಾಟ ಮಾಡಿ ಇಡೀ ಇಂಡಸ್ಟ್ರಿಯನ್ನು ಒಟ್ಟಿಗೆ ಕರೆ ತರಬೇಕು ಅಂದುಕೊಂಡಿದ್ದೀವಿ ಏಕೆಂದರೆ ಕರಣ್ ಮಾಡುತ್ತಿರುವುದು ಸರಿ ಅಲ್ಲ. ನಮ್ಮನ್ನು ಬಳಸಿಕೊಂಡು ಕರಣ ಹಣ ಮಾಡುತ್ತಿದ್ದಾನೆ. ಆದರೆ ನಾವು ಕರೆದಿದ್ದಾರೆ ಅಂತ ಬಂದು ಇಡೀ ವರ್ಷ ಟ್ರೋ ಆಗುವಂತೆ ಸುದ್ದಿ ಕ್ರಿಯೇಟ್ ಮಾಡುತ್ತಾರೆ. ಅವರು ಮಾಡುತ್ತಿರುವುದು ಸರಿ ಅಲ್ಲ. ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬರುತ್ತಿರುವುದರಿಂದ ನಮಗೆ ಏನೂ ಸಿಗುತ್ತಿಲ್ಲ ಅದೇ ಐಪೋನ್' ಎಂದು ಹಿಂದೆ ನಡೆದಿರುವ ಸಂದರ್ಶನದಲ್ಲಿ ರಣಬೀರ್ ಕಪೂರ್ ಮಾತನಾಡಿದ್ದಾರೆ.
ಚೈತ್ರಾ ಕುಂದಾಪುರ ಜೊತೆ ಮದುವೆ ಎಂದು ಟ್ರೋಲ್ ಮಾಡಿದವರಿಗೆ ಬೀಪ್ ಪದಗಳಿಂದ ಕ್ಲಾಸ್ ತೆಗೆದುಕೊಂಡ ಕಿರಿಕ್ ಕೀರ್ತಿ!
ಬಿ-ಟೌನ್ ಟ್ರೆಂಡ್‌ನಲ್ಲಿ ಇರುವ ಸೆಲೆಬ್ರಿಟಿಗಳನ್ನು ಕರೆಸಿ ಗಾಸಿಪ್ ಕ್ರಿಯೇಟ್ ಮಾಡುವುದಲ್ಲಿ ಈ ಶೋ ನಂಬರ್ 1. ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇರುವ ಪ್ರತಿಯೊಂದ ಕಲಾವಿದರ ಜೊತೆ ಕರಣ್ ಒಳ್ಳೆ ಸ್ನೇಹ ಹೊಂದಿದ್ದಾರೆ. ಹೀಗಾಗಿ ಅವರ ಸಣ್ಣ ಪುಟ್ಟ ಸೀಕ್ರೆಟ್‌ಗಳನ್ನು ತಿಳಿದುಕೊಂಡಿರುತ್ತಾರೆ. ಕಾರ್ಯಕ್ರಮಕ್ಕೆ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿ ಈ ಸೀಕ್ರೆಟ್‌ಗಳನ್ನು ರಿವೀಲ್ ಮಾಡುತ್ತಾರೆ. ಅದೆಷ್ಟೋ ಸೆಲೆಬ್ರಿಟಿಗಳ ಕ್ರಶ್‌ಗಳನ್ನು ಈ ಶೋನಲ್ಲಿ ರಿವೀಲ್ ಮಾಡಲಾಗಿದೆ. ಅದೆಷ್ಟೋ ಮಂದಿ ಇಲ್ಲಿಗೆ ಬಂದು ಗಾಸಿಪ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಆಗಮಿಸುವುದರಿಂದ ಜನರ ಗಮನ ಸೆಳೆಯಬಹುದು ಆದರೆ ಅಷ್ಟೇ ಟ್ರೋಲ್ ಆಗುತ್ತಾರೆ. ಹೀಗಾಗಿ ತುಂಬಾ ಜನರು ಈ ಶೋ ಬ್ಯಾನ್ ಆಗ ಬೇಕು ಎಂದು ಆಗಾಗ ಕಾಮೆಂಟ್ ಮಾಡುತ್ತಿರುತ್ತಾರೆ.
ಬಾತ್‌ರೂಮ್‌ನಲ್ಲಿ ಅಪ್ಪ ಬಿದ್ದು ಧ್ವನಿ ಕಳೆದುಕೊಂಡರು, ಆಪರೇಷನ್ ಮಾಡಿಸಲು ಹಣ ಇಲ್ಲ: ಭವ್ಯಾ ಗೌಡ ಕಣ್ಣೀರು

