Sourav Ganguly ಬಯೋಪಿಕ್ಗೆ ಕೊನೆಗೂ ಹೀರೋ ಫಿಕ್ಸ್, ಕುತೂಹಲಕ್ಕೆ ತೆರೆ
ಸೌರವ್ ಗಂಗೂಲಿ ಅವರ ಬಹುನಿರೀಕ್ಷಿತ ಬಯೋಪಿಕ್ ಶೀಘ್ರದಲ್ಲಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ನಾಯಕ ಯಾರು ಆಗಬೇಕೆಂದು ಕೊನೆಗೂ ನಿರ್ಧಾರವಾಗಿದೆ. ಸೌರವ್ ಪಾತ್ರದಲ್ಲಿ ಯಾರು ಮಿಂಚಲಿದ್ದಾರೆ?
ಕ್ರಿಕೆಟ್ ತಾರೆ ಎಂಎಸ್ ಧೋನಿ ಕುರಿತ ಚಿತ್ರದ ನಂತರ ಇದೀಗ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ (Sourav Ganguly) ಅವರ ಬಯೋಪಿಕ್ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಲಿದೆ. ಧೋನಿಯವರ ಚಿತ್ರ ಸೂಪರ್ಹಿಟ್ ಆದ ಬೆನ್ನಲ್ಲೇ ಇದೀಗ ಸೌರವ್ ಅವರ ಜೀವನದ ಕುರಿತಾಗಿಯೂ ಸಿನಿಮಾ ಬರಲಿದೆ. ಭಾರತೀಯ ಕ್ರಿಕೆಟ್ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ನಾಯಕ ಸೌರವ್ ಗಂಗೂಲಿ ಪಾತ್ರಕ್ಕೆ ಕೊನೆಗೂ ನಟನನ್ನು ಆಯ್ಕೆ ಮಾಡಲಾಗಿದೆ. ಸೌರವ್ ಗಂಗೂಲಿ ಬಯೋಪಿಕ್ ಕುರಿತು ಬಹಳ ದಿನಗಳಿಂದ ಚರ್ಚೆ ನಡೆದಿದ್ದು, ಈ ಪಾತ್ರಕ್ಕೆ ಯಾರು ಸರಿ ಹೊಂದಬಹುದು ಎಂಬ ಬಗ್ಗೆ ಬಹಳ ದಿನಗಳ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ. ಧೋನಿಯಾಗಿ ಸುಶಾಂತ್ ಸಿಂಗ್ ರಜಪೂತ್ ಅವರು ನಟಿಸಿ ಚಿತ್ರವನ್ನು ಸೂಪರ್ ಹಿಟ್ ಮಾಡಿದಂತೆಯೇ ಸೌರವ್ ಅವರ ಪಾತ್ರಕ್ಕೂ ಸೂಕ್ತ ವ್ಯಕ್ತಿಯ ಆಯ್ಕೆಗೆ ಕಸರತ್ತು ನಡೆದಿತ್ತು. ಕೊನೆಗೂ ಸೂಕ್ತ ನಾಯಕ ಸಿಕ್ಕಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡುಲ್ಕರ್ (Sachin Tendulkar), ಎಂ.ಎಸ್ ಧೋನಿ ಇವರೆಲ್ಲರ ಆತ್ಮಚರಿತ್ರೆ ಚಲನಚಿತ್ರವಾದ ಬಳಿಕ ಸೌರವ್ ಅವರ ಬಯೋಪಿಕ್ ಬೆಳ್ಳಿಪರದೆಯ ಮೇಲೆ ತರುವಂತೆ ಅಭಿಮಾನಿಗಳ ಒತ್ತಡ ಹೆಚ್ಚಿತ್ತು. ಅವರ ಕನಸೀಗ ನನಸಾಗಿದೆ. ಸೌರವ್ ಗಂಗೂಲಿಯವರ ಬಯೋಪಿಕ್ ತಯಾರಿಸುವ ಬಗ್ಗೆ 2019ರಲ್ಲಿ ಘೋಷಿಸಲಾಗಿತ್ತು. ಕಳೆದ ತಿಂಗಳು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ (Dona Ganguly) ಬಹುನಿರೀಕ್ಷಿತ ಬಯೋಪಿಕ್ ಬಗ್ಗೆ ಮಾತನಾಡಿದ್ದರು. ಬಯೋಪಿಕ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಸೌರವ್ ಗಂಗೂಲಿಯವರ ಪಾತ್ರವನ್ನು ಯಾರು ಮಾಡಬಹುದು ಎಂದು ಡೋನಾ ಗಂಗೂಲಿಯವರನ್ನು ಇ-ಟೈಮ್ಸ್ ಪ್ರಶ್ನೆ ಮಾಡಿದ್ದಾಗ ಅವರು ಈ ಪ್ರಶ್ನೆಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಮಾತ್ರ ಉತ್ತರ ನೀಡಬಲ್ಲರು ಎಂದಿದ್ದರು. ಈಗ ಆ ಹೆಸರು ಕೊನೆಗೂ ಬಹಿರಂಗಗೊಂಡಿದೆ.
Pathaan: ಸುಳ್ಳು ಹೇಳ್ತೀರಾ? ಕೇಸ್ ದಾಖಲಿಸ್ತೇನೆ ಎಂದು ಶಾರುಖ್ ಖಾನ್ಗೆ ಬೆದರಿಕೆ!
ಸೌರವ್ ಅವರ ಪತ್ನಿ ಅಮಿತಾಭ್ ಬಚ್ಚನ್ ಅಥವಾ ಶಾರುಖ್ ಖಾನ್ (ShahRukh Khan) ಅವರ ಹೆಸರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಆದರೆ ಇಬ್ಬರಿಗೂ ವಯಸ್ಸು ಮಿತಿಮೀರಿರುವ ಕಾರಣ, 24 ವರ್ಷದ ಸೌರವ್ ಗಂಗೂಲಿಯಂತೆ ಅವರು ಕಾಣಲು ಸಾಧ್ಯವಿಲ್ಲ ಎಂದು ಅವರೇ ತೀರ್ಮಾನಿಸಿ ನಂತರ ಅದರ ತೀರ್ಮಾನವನ್ನು ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಬಿಟ್ಟಿದ್ದರು. ಈ ಪಾತ್ರಕ್ಕೆ ಹೃತಿಕ್ ರೋಷನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವಾರು ಹೆಸರು ಕೇಳಿಬಂದಿತ್ತು. ಆದರೆ ಕೊನೆಯದಾಗಿ ಬೆಳ್ಳಿ ಪರದೆಯ ಮೇಲೆ ಸೌರವ್ ದಾದಾ ಪಾತ್ರದಲ್ಲಿ ರಣಬೀರ್ ಕಪೂರ್ ಮಿಂಚಲಿದ್ದಾರೆ. 2000ರ ಅವಧಿಯಲ್ಲಿ ಟೀಮ್ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಅವಮಾನಕ್ಕೆ ಒಳಗಾದ ಸಂದರ್ಭದಲ್ಲಿ ತಂಡದ ಜವಾಬ್ದಾರಿ ಹೊತ್ತು ಕ್ರಿಕೆಟ್ ಇತಿಹಾಸದಲ್ಲಿ ಹೊಸ ಕ್ರಾಂತಿಕಾರಿಯನ್ನು ಸೃಷ್ಟಿಸಿದ ದಾದಾ ಅವರ ಪಾತ್ರವನ್ನು ರಣಬೀರ್ ಕಪೂರ್ ( Ranbir Kapoor) ಮಾಡಲಿದ್ದಾರೆ.
ರಣಬೀರ್ ಅವರು ಸಿನಿಮಾ ತಯಾರಿಗಾಗಿ ಶೀಘ್ರದಲ್ಲೇ ಕೋಲ್ಕತಾಗೆ ಭೇಟಿ ನೀಡಲಿದ್ದಾರೆ ಎಂದು ಇ ಟೈಮ್ಸ್ ವರದಿ ಉಲ್ಲೇಖಿಸಿದೆ. ಕೋಲ್ಕತಾದಲ್ಲಿ ರಣಬೀರ್ ಕಪೂರ್ ಅವರು ಈಡನ್ ಗಾರ್ಡನ್, ಸಿಎಬಿ ಕಚೇರಿ ಮತ್ತು ಸೌರವ್ ಗಂಗೂಲಿ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆಯಷ್ಟೇ. ಇದು ದೊಡ್ಡ ಬಜೆಟ್ ಚಿತ್ರವಾಗಿದ್ದು, 200-250 ಕೋಟಿ ರೂಪಾಯಿ ಹೂಡಿಕೆ ಮಾಡಲು ಸಂಸ್ಥೆಯೊಂದು ಮುಂದೆ ಬಂದಿದೆ ಎನ್ನಲಾಗುತ್ತಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ (Script) ಕೆಲಸಗಳು ಮುಗಿದಿವೆ.
ಇಸ್ಲಾಮ್ ಸ್ವೀಕರಿಸುವೆ... ವಿದಾಯದ ನುಡಿ ಬರೆದು ಕಣ್ಣೀರಿಟ್ಟ ಮತ್ತೋರ್ವ ಖ್ಯಾತ ನಟಿ
ರಣಬೀರ್ ಕಪೂರ್ ಸಹ ಈ ಪಾತ್ರ ಮಾಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ರಣಬೀರ್ ಕಪೂರ್ ಅವರ ತೂ ಜೂಠಿ ಮೈ ಮಕ್ಕಾರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಲವ್ ರಂಜನ್ ನಿರ್ದೇಶನ ಮಾಡಿದ್ದು ಮಾರ್ಚ್ 8 ಹೋಳಿ ಹಬ್ಬದ ದಿನ ಸಿನಿಮಾ ತೆರೆಗೆ ಬರಲಿದೆ.