ಮದುವೆ ಸಮಾರಂಭ ಮುಗಿಯುತ್ತಿದ್ದಂತೆ ರಣಬೀರ್ ಕಪೂರ್ ಕೆಲಸಕ್ಕೆ ಮರಳಿದ್ದಾರೆ. ರಣಬೀರ್ ಕಪೂರ್ ಮತ್ತೆ ಕೆಲಸಕ್ಕೆ ಹಾಜರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲಸಕ್ಕೆ ಹೊರಟ ರಣಬೀರ್ ಅವರಿಗೆ  ಶಾದಿ ಮುಬಾರಕ್ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ. 

ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್(Ranbir Kapoor And Alia Bhatt) ಏಪ್ರಿಲ್ 14ರಂದು ಹಸೆಮಣೆ ಏರಿದ್ದರು. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈ ಆರ್ ಕೆ ಅಪಾರ್ಟ್ಮೆಂಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಣಬೀರ್ ಕಪೂರ್ ಅಲಿಯಾಗೆ ಮಾಂಗಲ್ಯ ಧಾರಣೆ ಮಾಡಿದರು. ಈ ತಾರಾ ಜೋಡಿಯ ಮದುವೆಗೆ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಇಬ್ಬರ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂದಹಾಗೆ ಅಲಿಯಾ ಮತ್ತು ರಣಬೀರ್ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರೂ ಈ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಮದುವೆ ಫಿಕ್ಸ್ ಆದ ಬಳಿಕವೂ ಈ ಬಗ್ಗೆ ಇಬ್ಬರೂ ಎಲ್ಲೂ ಹೇಳಿಕೊಂಡಿರಲ್ಲ. ಇಬ್ಬರ ಮದುವೆ ವಿಚಾರ ಕಳೆದ ಕೆಲವು ತಿಂಗಳಿಂದ ಭಾರಿ ಸದ್ದು ಮಾಡುತ್ತಿತ್ತು. ಆದರೂ ಸೈಲೆಂಟ್ ಆಗಿದ್ದ ಈ ಜೋಡಿ ಮದುವೆ ಬಳಿಕ ಫೋಟೋ ಹಂಚಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಬಹಿರಂಗ ಪಡಿಸಿದರು. ಅಂದಹಾಗೆ ಅಲಿಯಾ ಮತ್ತು ರಣಬೀರ್ ಪ್ರೀತಿ ಪ್ರಾರಂಭವಾಗಿದ್ದು ಬ್ರಹ್ಮಾಸ್ತ್ರ್(Brahmastra) ಸಿನಿಮಾ ಚಿತ್ರೀಕರಣ ವೇಳೆ. ಏಪ್ರಿಲ್ 14ರಂದು ಹಸೆಮಣೆ ಏರಿದ ಈ ಜೋಡಿ ಏಪ್ರಿಲ್ 16ರಂದು ಚಿತ್ರರಂಗದ ಕೆಲವು ಗಣ್ಯರಿಗೆ ಪಾರ್ಟಿ ಆಯೋಜನೆ ಮಾಡಿತ್ತು. ಬಾಲಿವುಡ್ ನ ಅನೇಕ ಮಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. 

ಇದೀಗ ಮದುವೆ ಸಮಾರಂಭ ಮುಗಿಯುತ್ತಿದ್ದಂತೆ ರಣಬೀರ್ ಕಪೂರ್ ಕೆಲಸಕ್ಕೆ ಮರಳಿದ್ದಾರೆ. ರಣಬೀರ್ ಕಪೂರ್ ಮತ್ತೆ ಕೆಲಸಕ್ಕೆ ಹಾಜರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಣಬೀರ್ ಕಾರಿನಿಂದ ಹೊರಬರುತ್ತಿರುವ ಫೋಟೋವನ್ನು ಪಾಪರಾಜಿಗಳು ಕ್ಲಿಕ್ಕಿಸಿದ್ದಾರೆ. ಬಳಿಕ ರಣಬೀರ್ ಅವರಿಗೆ ಶಾದಿ ಮುಬಾರಕ್ ಎಂದು ವಿಶ್ ಮಾಡಿದ್ದಾರೆ. ರಣಬೀರ್ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ಹೊರಟು ಹೋಗಿದ್ದಾರೆ. 

Ranbir Alia wedding: ಸುಂದರ ಕ್ಷಣಗಳ unseen ಫೋಟೋಗಳು!

ರಣಬೀರ್ ಮತ್ತು ಅಲಿಯಾ ಇಬ್ಬರು ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೀತಿಯ ವಿಚಾರ ಬಹಿರಂಗ ಪಡಿಸದಿದ್ದರೂ ಗುಟ್ಟಾಗಿ ಉಳಿದಿರಲಿಲ್ಲ. ಅನೇಕ ತಿಂಗಳಿಂದ ಇಬ್ಬರ ಮದುವೆ ಮದುವೆ ವಿಚಾರ ಸದ್ದು ಮಾಡುತ್ತಿತ್ತು. ಕೊನೆಗೂ ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಣಬೀರ್-ಅಲಿಯಾ ಮದುವೆಯಲ್ಲಿ ಕರೀನಾ ಕಪೂರ್, ಕರಿಶ್ಮಾ ಕಪೂರ್, ರಿದಿಮಾ ಕಪೂರ್, ನೀತು ಕಪೂರ್, ಸೈಫ್ ಅಲಿ ಖಾನ್, ಕರಣ್ ಜೋಹರ್ ಇನ್ನು ಮುಂತಾದವರು ಭಾಗಿಯಾಗಿದ್ದರು. ಇವರೆಲ್ಲರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Ranbir Alia wedding ಮಿಂಚಿದ ಕಪೂರ್‌ ಹಾಗೂ ಭಟ್‌ ಫ್ಯಾಮಿಲಿ ಮತ್ತು ಫ್ರೆಂಡ್ಸ್‌

ಅಂದಹಾಗೆ ರಣಬೀರ್ ಕಪೂರ್ ಸದ್ಯ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮನಾಲಿಯಲ್ಲಿ ನಡೆಯಲಿದೆ. ಸದ್ಯದಲ್ಲೇ ರಣಬೀರ್ ಕಪೂರ್ ಮನಾಲಿಗೆ ತೆರಳಿದ್ದಾರೆ. ಅನಿಮಲ್ ಸಿನಿಮಾಗೆ ಸಂದೀಪ್ ರೆಡ್ಡಿ ವಾಂಗಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.