Ranbir-Alia; ಅಳಿಯನನ್ನು ತಬ್ಬಿಕೊಂಡು ಭಾವುಕರಾದ ಅಲಿಯಾ ಭಟ್ ತಂದೆ, ಫೋಟೋ ವೈರಲ್

ಬಾಲಿವುಡ್ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಮಗಳ ಮದುವೆ ಬಳಿಕ ಭಾವುಕರಾಗಿದ್ದಾರೆ. ಅಳಿಯ ರಣಬೀರ್ ಕಪೂರ್ ಅವರನ್ನು ತಬ್ಬಿಕೊಂಡು ಭಾವುಕರಾಗಿರುವ ಮಹೇಶ್ ಭಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ranbir Kapoor hugs emotional father in law Mahesh Bhatt photo goes viral

ಬಾಲಿವುಡ್ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಮಗಳ ಮದುವೆ ಬಳಿಕ ಭಾವುಕರಾಗಿದ್ದಾರೆ. ಅಳಿಯ ರಣಬೀರ್ ಕಪೂರ್(Ranbir Kapoor) ಅವರನ್ನು ತಬ್ಬಿಕೊಂಡು ಭಾವುಕರಾಗಿರುವ ಮಹೇಶ್ ಭಟ್(Mahesh Bhatt) ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ್ ಭಟ್ ಮಗಳು, ಅಲಿಯಾ ಸಹೋದರಿ ಪೂಜಾ ಭಟ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್ ನ ಕ್ಯೂಟ್ ಕಪಲ್ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ಕೆಲವು ತಿಂಗಳಿಂದ ಅಲಿಯಾ ಮತ್ತು ರಣಬೀರ್ ಮದುವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಈ ಬಗ್ಗೆ ಅಲಿಯಾ ಅಥವಾ ರಣಬೀರ್ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಮದುವೆ ಬಳಿಕವೇ ಅಲಿಯಾ ಫೋಟೋ ಹಂಚಿಕೊಳ್ಳುವ ಮೂಲಕ ಮದುವೆ ಬಗ್ಗೆ ಅಧಿಕೃತವಾಗಿ ಬಹಿರಂಗ ಪಡಿಸಿದ್ದರು.

ಏಪ್ರಿಲ್ 13ರಿಂದ ಅಲಿಯಾ ಮತ್ತು ರಣಬೀರ್ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು ಮೆಹಂದಿ ಶಾಸ್ತ್ರ ಮತ್ತ ಹಳದಿ ಶಾಸ್ತ್ರ ಸಂಭ್ರಮಕ್ಕೆ ಆಗಮಿಸಿದ್ದ ಅತಿಥಿಗಳ ಫೋಟೋಗಳು ವೈರಲ್ ಆಗಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಲಿಯಾ ಮತ್ತು ರಣಬೀರ್ ಜೋಡಿಗೆ ಬಾಲಿವುಡ್ ನ ದಿಗ್ಗಜರು ಶುಭಕೋರಿದ್ದರು. ಅನೇಕ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಮುಂಬೈ ಪಾಲಿ ಹಿಲ್ಸ್‌ನಲ್ಲಿರುವ ಅಪಾರ್ಟ್ಮೆಂಟ್ ಸಂಕೀರ್ಣ ವಾಸ್ತುವಿನಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು.

ಮದುವೆ ಬಳಿಕ ಅಲಿಯಾ ಭಟ್ ತಂದೆ ಮಹೇಶ್ ಭಟ್ ಭಾವುಕರಾಗಿರುವ ಫೋಟೋಗಳು ವೈರಲ್ ಆಗಿವೆ. ರಣಬೀರ್ ಕಪೂರ್ ಅವರ ಎದೆಗೆ ಅಪ್ಪಿಕೊಂಡಿರುವ ಮಹೇಶ್ ಭಟ್ ಅವರನ್ನು ರಣಬೀರ್ ಕಪೂರ್ ಸಮಾಧಾನಪಡಿಸಿದ್ದಾರೆ. ಪೂಜಾ ಭಟ್ ಫೋಟೋ ಹಂಚಿಕೊಂಡು 'ಹೃದಯದಿಂದ ಕೇಳುವ ಮತ್ತು ಮಾತನಾಡುವ ಸಾಮರ್ಥ್ಯವಿರುವಾಗಿ ಪದಗಳು ಯಾಕೆ ಬೇಕು' ಎಂದು ಬರೆದುಕೊಂಡಿದ್ದಾರೆ.

ಆಲಿಯಾ ಭಟ್‌ ರೀತಿ ನಿಮಗೂ ಅತ್ತೆ ಜತೆ Relationship ಚೆನ್ನಾಗಿರಬೇಕೆ?

ರಣಬೀರ್ -ಅಲಿಯಾ ಮದುವೆಗೆ ಕುಟುಂಬದವರು ಮತ್ತು ತೀರ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕರೀನಾ ಕಪೂರ್, ರಣವೀರ್ ಸಿಂಗ್, ಅಕಾಶ್ ಅಂಬಾನಿ, ಮಹೇಶ್ ಭಟ್, ಪೂಜಾ ಭಟ್, ಶ್ವೇತಾ ಬಚ್ಚನ್, ನವ್ಯಾ ನವೇಲಿ ನಂದಾ, ಅಯನ್ ಮುಖರ್ಜಿ ಸೇರಿದಂತೆ ಹಲವರು ಹಾಜರಿದ್ದರು. ಈ ಜೋಡಿ ಮದುವೆ ಬಳಿಕ ಚಿತ್ರರಂಗದವರಿಗಾಗಿ ರಿಸಪ್ಷನ್ ಆಯೋಜಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

Ranbir Alia wedding; Kareena, Karisma ಸೋದರಿಯರ ಗಾರ್ಜಿಯಸ್‌ ಲುಕ್‌ ವೈರಲ್‌

ಅಂದಹಾಗೆ ಅಲಿಯಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಆರ್ ಆರ್ ಆರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪತಿ ರಣಬೀರ್ ಕಪೂರ್ ಜೊತೆ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರದ ಚಿತ್ರೀಕರಣ ಮುಗಿಸಿದ್ದು ಮದುವೆ ಇಬ್ಬರ ದಿನ ಪುಟ್ಟ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾತಂಡ ಶುಭಹಾರೈಸಿತ್ತು. ಇನ್ನು ರಣಬೀರ್ ಕಪೂರ್ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios