Ranbir Alia wedding; Kareena, Karisma ಸೋದರಿಯರ ಗಾರ್ಜಿಯಸ್ ಲುಕ್ ವೈರಲ್
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Kapoor Alia Bhatt) ಗುರುವಾರ, ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದರು. ಈ ಸಂದರ್ಭದಲ್ಲಿ ಕಪೂರ್ ಮತ್ತು ಭಟ್ ಕುಟುಂಬಗಳನ್ನು ಹೊರತುಪಡಿಸಿ, ವಧು ವರರ ವಿಶೇಷ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು.ಈ ಜೋಡಿಯ ಮದುವೆಗೆ ಸಂಬಂಧಿಸಿದ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತಿವೆ. ಮದುವೆಯಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ಒಬ್ಬರಿಗೊಂತ ಒಬ್ಬರು ಹೆಚ್ಚು ಉತ್ತಮವಾದ ಉಡುಪಿನಲ್ಲಿ ಕಾಣಿಸಿಕೊಂಡರು. ಕಪೂರ್ ಸಿಸ್ಟರ್ಸ್ ಅಂದರೆ ಕರೀನಾ ಕಪೂರ್ (Kareena Kapoor) ಮತ್ತು ಕರಿಷ್ಮಾ ಕಪೂರ್ (Karisma Kapoor) ಗಮನ ಸೆಳೆಯುವಲ್ಲಿ ಹಿಂದೆ ಬೀಳಲಿಲ್ಲ.
ಕರೀನಾ ಕಪೂರ್ ತಿಳಿ ಗುಲಾಬಿ ಮತ್ತು ಬೆಳ್ಳಿಯ ಬಾರ್ಡರ್ ಸೀರೆಯನ್ನು ಸುಂದರವಾದ ಬ್ಲೌಸ್ ಜೊತೆ ಮ್ಯಾಚ್ ಮಾಡಿಕೊಂಡಿದ್ದರು. ಸೀರೆಯ ಜೊತೆಗೆ ಅದಕ್ಕೆ ಹೊಂದುವ ಭಾರವಾದ ವಜ್ರದ ನೆಕ್ಲೇಸ್ ಮತ್ತು ಮಾಂಗ್ ಟಿಕಾವನ್ನೂ ಧರಿಸಿದ್ದರು.
ಕರಣ್ ಜೋಹರ್ ಕೂಡ ಗುಲಾಬಿ ಬಣ್ಣದ ಶೇರ್ವಾನಿ ಧರಿಸಿದ್ದರು ಆಲಿಯಾ-ರಣಬೀರ್ ಮದುವೆಯಲ್ಲೂ ಅವರು ಪೇಟಾ ಸಹ ಕಟ್ಟಿದ್ದರು. ಕರಣ್ ಕೂಡ ಕರೀನಾ ಜೊತೆ ಪೋಸ್ ಕೊಟ್ಟಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಚಿಕ್ಕಪ್ಪ ರಣಬೀರ್ ಕಪೂರ್ ಅವರ ಮದುವೆಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ತಿಳಿ ಹಸಿರು ಸೀರೆಯನ್ನು ಧರಿಸಿದ್ದ ಅದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಆಲಿಯಾ ಭಟ್ ಅವರ ಬೆಸ್ಟ್ ಫ್ರೆಂಡ್ ಅನುಷ್ಕಾ ರಂಜನ್ ಕೂಡ ಮದುವೆಗೆ ಆಗಮಿಸಿದ್ದರು. ಈ ಸಮಯದಲ್ಲಿ, ಅವರು ಹಸಿರು ಸೀರೆಯೊಂದಿಗೆ ದೊಡ್ಡ ಕಿವಿಯೋಲೆಗಳನ್ನು ಧರಿಸಿದ್ದರು.
ವರನ ರಣಬೀರ್ ಕಪೂರ್ ಅವರ ತಾಯಿ ನೀತು ಸಿಂಗ್ ಮಲ್ಟಿ ಕಲರ್ ಲೆಹೆಂಗಾ ಧರಿಸಿ ಮಿಂಚಿದರು. 64ರ ವಯಸ್ಸಿನಲ್ಲೂ ತುಂಬಾ ಚಿಕ್ಕವರಂತೆ ಕಾಣುತ್ತಿದ್ದರು ಮತ್ತು ಮಗನ ಮದುವೆಯ ಖುಷಿ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಸಹೋದರಿ ಆಲಿಯಾ ಭಟ್ ಮದುವೆಗೆ ಅಕ್ಕ ಪೂಜಾ ಭಟ್ ಬಿಳಿ- ಗೋಲ್ಡನ್ ಸೂಟ್ ಧರಿಸಿ ಆಗಮಿಸಿದ್ದರು. ತೆರೆದ ಕೂದಲಿನಲ್ಲಿ ಪೂಜಾ ತುಂಬಾ ಸರಳವಾಗಿ ಸುಂದರವಾಗಿ ಕಾಣುತ್ತಿದ್ದರು.
ವಧು ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಕೂಡ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅವರು ಗುಲಾಬಿ ಬಣ್ಣದ ಸೀರೆ ಸೀರೆ ಪ್ರಿಂಟೆಡ್ ಬ್ಲೌಸ್ ಧರಿಸಿದ್ದರು. ಅವರು ಪತಿ ಮಹೇಶ್ ಭಟ್ ಅವರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಮತ್ತೊಂದೆಡೆ, ರಣಬೀರ್ ಕಪೂರ್ ಅವರ ದೊಡ್ಡಪ್ಪ ಅಂದರೆ ರಣಧೀರ್ ಕಪೂರ್ ಕೂಡ ಸಂತೋಷ ಕೂಟದಲ್ಲಿ ಮುಳುಗಿದ್ದರು
ರಣಬೀರ್ ಕಪೂರ್ ಸಹೋದರಿ ರಿದಿಮಾ ಸಹಾನಿ ಚಿನ್ನದ ಬಣ್ಣದ ಲೆಹೆಂಗಾ ಧರಿಸಿದ್ದರು. ಅವರು ಈ ಲೆಹೆಂಗಾದ ಜೊತೆ ಹೊಂದಿಕೆಯಾಗುವ ಭಾರವಾದ ಆಭರಣಗಳನ್ನು ಪೇರ್ ಮಾಡಿಕೊಂಡಿದ್ದರು.
Ranbir Alia Eedding Kareena Karisma to these celebs look gorgeous photos
ಮತ್ತೊಂದೆಡೆ, ಕರಿಷ್ಮಾ ಕಪೂರ್ ಕೂಡ ಕರೀನಾರಗಿಂತ ಕಡಿಮೆ ಇಲ್ಲದಂತೆ ಕಾಣುತ್ತಿದ್ದರು. ಅವರು ಗಾಢವಾದ ಕಿತ್ತಳೆ ಬಣ್ಣದ ಬ್ಲೌಸ್ ಆಫ್-ವೈಟ್ ಕಸೂತಿ ಸೀರೆಯನ್ನು ಧರಿಸಿದ್ದರು.