Alia Bhatt ಉತ್ತಮ ಪತ್ನಿ ಹೌದೋ, ಅಲ್ವೊ? ಶಾಕಿಂಗ್ ಹೇಳಿಕೆ ಕೊಟ್ಟ ಪತಿ ರಣಬೀರ್
ಆಲಿಯಾ ಭಟ್ ಅಮ್ಮನಾಗಿ ಕೆಲ ತಿಂಗಳೇ ಕಳೆದಿವೆ. ಸಿನಿಮಾದಿಂದ ತಾತ್ಕಾಲಿಕ ದೂರ ಆಗಿರುವ ಆಲಿಯಾ ಕುರಿತು ಪತಿ ರಣಬೀರ್ ಕಪೂರ್ ಕೆಲವು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಬಾಲಿವುಡ್ನ ಕ್ಯೂಟ್ ದಂಪತಿಯಲ್ಲಿ ಒಬ್ಬರು ರಣಬೀರ್ ಕಪೂರ್ ಇತ್ತೀಚೆಗೆ ಆಲಿಯಾ ಭಟ್. ಈಗ ಮಗುವೊಂದರ ತಾಯಿಯಾಗಿರುವ ಆಲಿಯಾ ಸದ್ಯ ಚಿತ್ರರಂಗದಿಂದ ದೂರವಿದ್ದಾರೆ. ನಿರ್ಮಾಪಕ ಮಹೇಶ್ ಭಟ್ ಮತ್ತು ನಟಿ ಸೋನಿ ರಜ್ದಾನ್ ಅವರ ಪುತ್ರಿ ಆಲಿಯಾ ಭಟ್ (Alia Bhatt). ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಎನ್ನುವ ಖ್ಯಾತಿಯನ್ನೂ ಗಳಿಸಿದ್ದಾರೆ. ಭಾರತೀಯ ಮೂಲದ ಮತ್ತು ಬ್ರಿಟಿಷ್ ಪೌರತ್ವದ ಈ ನಟಿಗೆ ಇದಾಗಲೇ ಮೂರು ಫಿಲ್ಮ್‌ಫೇರ್ (Filmfare) ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳೂ ದೊರೆತಿವೆ. ಈಕೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಈಚೆಗೆ ಬಿಡುಗಡೆಯಾದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಬ್ಲಾಕ್ ಬಸ್ಟರ್ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ’(Gangubai Kathiawadi) ಯಲ್ಲಿನ ಆಲಿಯಾ ಅಭಿನಯಕ್ಕೆ ಮನಸೋಲದವರೇ ಇಲ್ಲ. ಮುಂಬೈನ ಕಾಮಾಟಿಪುರದ ವೇಶ್ಯೆ, ಮಾಫಿಯಾ ಡಾನ್ ಗಂಗೂಬಾಯಿ ಅವರ ಜೀವನಚರಿತ್ರೆಯೇ ಈ ಚಿತ್ರ. ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಮ್ಯಾಜಿಕ್ ಮಾಡಿತ್ತು. ಬಿಡುಗಡೆಯಾದ ಮೊದಲ ದಿನವೇ ಈ ಚಿತ್ರ ಬರೋಬ್ಬರಿ 10.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಹೀಗೆ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ಆಲಿಯಾ ಭಟ್ ಇತ್ತೀಚೆಗೆ ಎಲ್ಲರಿಗೂ ಶಾಕಿಂಗ್ (Shocking) ನ್ಯೂಸ್ ಕೊಟ್ಟಿದ್ದರು. ಚಿತ್ರರಂಗದಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದರು. ಆಲಿಯಾ ಸ್ವಲ್ಪ ವರ್ಷ ಚಿತ್ರರಂಗದಿಂದ ದೂರವಾಗಲಿದ್ದಾರಂತೆ. ಇದಕ್ಕೆ ಕಾರಣ ಅವರು ತಾಯ್ತನದ ಸಂಪೂರ್ಣ ಖುಷಿಯನ್ನು ಅನುಭವಿಸುವುದಕ್ಕಾಗಿ. ತಾಯ್ತನ ಅನುಭವಿಸುತ್ತಿರುವ ಆಲಿಯಾ ಭಟ್, ಮಗಳ ಲಾಲನೆ ಪಾಲನೆಗಾಗಿ ಕೆಲ ಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಲಿಯಾ, ತಮ್ಮ ವೃತ್ತಿಜೀವನದ ಬಗ್ಗೆ ದೊಡ್ಡ ಮಾಹಿತಿ ನೀಡಿದ್ದರು. ಅನೇಕ ನಟಿಯರು ತಾಯಿಯಾದ ಬಳಿಕ ಸಿನಿಮಾಗಳಿಂದ ದೂರ ಉಳಿದ ಅನೇಕ ಉದಾಹರಣೆಗಳಿವೆ. ಅವರ ಹಾದಿಯಲ್ಲಿ ಈಗ ಆಲಿಯಾ ಸಾಗಿದ್ದಾರೆ.
ನಟಿ ಆಲಿಯಾ ಭಟ್ ತೆಗೆದುಕೊಂಡ್ರು ಬಹುದೊಡ್ಡ ನಿರ್ಧಾರ: ಅಭಿಮಾನಿಗಳು ಶಾಕ್
ಹೀಗೆ ಪತ್ನಿಯಾಗಿ ಹಾಗೂ ತಾಯಿಯಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿರುವ ಆಲಿಯಾ, ಕುರಿತು ಪತಿ ರಣಬೀರ್ ಕಪೂರ್ ಹೊಗಳಿಕೆ ವ್ಯಕ್ತಪಡಿಸಿದ್ದಾರೆ. ಆಲಿಯಾ ನಟಿಯಾಗಿ, ತಾಯಿಯಾಗಿ ಅದ್ಭುತ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದರು. ಆಲಿಯಾ ಕುರಿತು ಮಾತುಗಳನ್ನಾಡಿದ ಅವರು, ಆಲಿಯಾ ಎಲ್ಲ ಪಾತ್ರಗಳನ್ನೂ ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಆಕೆ ಉತ್ತಮ ತಾಯಿಯಂತೆ ತೋರುತ್ತಿದ್ದಾಳೆ. ತಾಯಿಯಾಗಿ, ನಟಿಯಾಗಿ ಆಕೆ ಅದ್ಭುತವಾಗಿದ್ದಾಳೆ, ಆದರೆ ಆಕೆ ಪತ್ನಿಗಿಂತಲೂ ತಾಯಿಯಾಗಿಯೇ ಉತ್ತಮ ಆಗಿದ್ದಾಳೆ' ಎಂದು ರಣಬೀರ್ ಕಪೂರ್ ಹೇಳಿದ್ದಾರೆ. ಅಂದರೆ ಮಗುವಾದ ಮೇಲೆ ಪತ್ನಿಯಾಗಿ ಆಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಬದಲಿಗೆ ತಾಯಿಯಾಗಿಯೇ ಹೆಚ್ಚು ಬಿಜಿ ಆಗಿದ್ದಾಳೆ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ!
2022ರಲ್ಲಿ ಏಪ್ರಿಲ್ 14ರಂದು ನಟ ರಣಬೀರ್ ಕಪೂರ್ (Ranbeer Kapoor) ಅವರ ಜೊತೆ ಮದುವೆಯಾಗಿರುವ ಆಲಿಯಾ, ಮದುವೆಯಾದ ಏಳು ತಿಂಗಳಿಗೇ ಮಗುವಿಗೆ ಜನ್ಮ ನೀಡಿದ್ದರು. ಮದುವೆಗೂ ಮುನ್ನವೇ ಈಕೆ ಗರ್ಭಿಣಿಯಾಗಿರುವ ಸುದ್ದಿಗಳೂ ಹರಿದಾಡಿದ್ದವು. ಆದರೆ ಇವೆಲ್ಲವನ್ನೂ ಸೀಕ್ರೇಟ್ ಆಗಿ ಇಟ್ಟಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋ ಶೇರ್ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಆಲಿಯಾಗೆ ಚಿಕ್ಕ ವಯಸ್ಸಿನಿಂದಲೇ ರಣಬೀರ್ ಕಪೂರ್ ಅವರ ಮೇಲೆ ಕ್ರಶ್ ಇತ್ತಂತೆ. ಅದು ಚಿಗುರಿದ್ದು ಇಬ್ಬರೂ ಒಟ್ಟಾಗಿ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದಲ್ಲಿ ನಟಿಸಿದಾಗ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆತಿದ್ದು ದಾಂಪತ್ಯಕ್ಕೆ ಕಾಲಿಸಿದರು. ಬಾಲಿವುಡ್ ಜೋಡಿಯ ಈ ಮದುವೆ ರಣಬೀರ್ ಕಪೂರ್ ಅವರ ಮುಂಬೈ ನಿವಾಸದಲ್ಲಿ ನಡೆದಿತ್ತು. ಆಪ್ತರು ಮಾತ್ರ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಡೆಲಿವರಿ ಆದ್ಮೇಲೆ ಹೆಚ್ಚಾಗಿತ್ತು ಮೊಡವೆ ಕಾಟ: ಗುಟ್ಟು ಬಿಚ್ಚಿಟ್ಟ ನಟಿ Alia Bhatt
ನವೆಂಬರ್ ತಿಂಗಳಿನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿ ಅಮ್ಮನಾಗಿರುವ (motherhood) ಆಲಿಯಾ ಸಹಜವಾಗಿ ಹಲವು ನಟಿಯರಂತೆ ಸಿನಿಮಾದಿಂದ ತಾತ್ಕಾಲಿಕ ದೂರ ಇರುವ ಯೋಚನೆ ಮಾಡಿದ್ದಾರೆ. ಈ ಕುರಿತು ಹೇಳಿಕೊಂಡಿರುವ ನಟಿ, ತಾಯಿಯಾದ ಬಳಿಕ ನನ್ನ ಆದ್ಯತೆಗಳು ಬದಲಾಗಿವೆ. ಸದ್ಯ ಜೀವನದಲ್ಲಿ ನನ್ನ ಮೊದಲ ಆದ್ಯತೆ ಮಗಳು ಮಾತ್ರ ಎಂದಿದ್ದಾರೆ. ಮಗಳು ಮೊದಲ ಆದ್ಯತೆಯಾದರೆ, ನಟನೆ ನನ್ನ ಮೊದಲ ಪ್ರೀತಿ. ಆದರೆ ಸದ್ಯ ಪ್ರೀತಿಗಿಂತಲೂ ಆದ್ಯತೆ ಮೇಲು. ತಾತ್ಕಾಲಿಕವಾಗಿ ಬ್ರೇಕ್ (break) ತೆಗೆದುಕೊಳ್ಳುತ್ತಿದ್ದೇನೆ. ಆಮೇಲೆ ನಟನೆಗೆ ಮತ್ತೆ ಮರಳುತ್ತೇನೆ. ಈಗ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡುವುದಕ್ಕಿಂತ ಚಿತ್ರದ ಗುಣಮಟ್ಟದ ಬಗ್ಗೆ ಯೋಚಿಸಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಅತ್ಯುತ್ತಮ ಚಿತ್ರಗಳನ್ನು ಮಾತ್ರ ಮಾಡಲು ಬಯಸುತ್ತೇನೆ ಎಂದಿದ್ದಾರೆ ಆಲಿಯಾ.