Asianet Suvarna News Asianet Suvarna News

ಸಮುದ್ರ ತೀರದಲ್ಲಿ ಶ್ರದ್ಧಾ ಜೊತೆ ಅಲಿಯಾ ಭಟ್ ಪತಿಯ ಲಿಪ್‌ಕಿಸ್; ರಣಬೀರ್ ಹೊಸ ಲವ್ ಸ್ಟೋರಿ

ರಣಬೀರ್ ಕಪೂರ್ ಮತ್ತು ಶ್ರದ್ದಾ ಕಪೂರ್ ಲಿಪ್‌ಕಿಸ್ ಫೋಟೋ ವೈರಲ್ ಆಗಿದೆ. ಅಷ್ಟಕ್ಕೂ ಇದು ತು ಜೂಠಿ ಮೈನ್ ಮಕ್ಕರ್ ಸಿನಿಮಾದ ದೃಶ್ಯವಾಗಿದೆ. 

ranbir kapoor and shraddha kapoor's tu jhoothi main makkaar trailer released sgk
Author
First Published Jan 23, 2023, 5:40 PM IST

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಬಳಿಕ ರಣಬೀರ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ತಂದೆಯಾದ ಖುಷಿಯನ್ನು ಸಂಭ್ರಮಿಸುತ್ತಿರುವ ರಣಬೀರ್ ಕಪೂರ್ ಸಂತಸದ ಜೊತೆಗೆ ತು ಜೂಠಿ ಮೈನ್ ಮಕ್ಕರ್ ಸಿನಿಮಾ ಮೂಲಕ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. 

ಶ್ರದ್ಧಾ ಮತ್ತು ರಣಬೀರ್ ಕಪೂರ್ ಈ ಟ್ರೈಲರ್ ನಲ್ಲಿ ಲಿಪ್‌ಕಿಸ್ ಮಾಡಿದ್ದು ಸ್ಕ್ರೀನ್ ಶಾಟ್ ‌ಗಳು ವೈರಲ್ ಆಗಿವೆ. ಇಬ್ಬರ  ಲಿಪ್‌ಕಿಸ್ ದೃಶ್ಯದ ಮೂಲಕವೇ ಟ್ರೈಲರ್ ಪ್ರಾರಂಭವಾಗಿದೆ. ಅಂದಹಾಗೆ ತು ಜೂಠಿ ಮೈನ್ ಮಕ್ಕರ್ ಸಿನಿಮಾ ರೊಮ್ಯಾಂಟಿಕ್-ಕಾಮಿಡಿ ಸಿನಿಮಾವಾಗಿದೆ. ಲವ್ ಬ್ರೇಕಪ್, ಸೇಡಿನ ಕಥೆಯಾಗಿದೆ ಎನ್ನಲಾಗಿದೆ. ಇಂದಿನ ಪೀಳಿಗೆ ಯುವಕರ ಲವ್ ಸ್ಟೋರಿ, ಸಂಬಂಧದ ಬಗ್ಗೆ ಇದೆ. ಈ ಚಿತ್ರಕ್ಕೆ ಲವ್ ರಂಜನ್ ಆಕ್ಷನ್ ಕಟ್ ಹೇಳಿದ್ದಾರೆ. ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರು ತೂ ಜೂಠಿ ಮೈನ್ ಮಕ್ಕರ್ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದರು. 

ಏನ್ ಗುರು ಎಲ್ಲಾ ಫೋಟೋದಲ್ಲೂ ಮುತ್ತು ಕೊಡ್ತಿರ್ತೀರಾ?; ಆಲಿಯಾ- ರಣಬೀರ್ ಕಾಲೆಳೆದ ನೆಟ್ಟಿಗರು

ನಟ ರಣಬೀರ್ ಕಪೂರ್ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು. ಪತ್ನಿ ಅಲಿಯಾ ಭಟ್ ಜೊತೆ ತೆರೆಹಂಚಿಕೊಂಡಿದ್ದರು. ಬಾಕ್ಸ್ ಆಫೀಸ್ ನಲ್ಲೂ ಈ ಸಿನಿಮಾ ಉತ್ತಮ ಕಮಾಯಿ ಮಾಡಿತ್ತು. ಈ ಸಿನಿಮಾ ಬಳಿಕ ರಾಕೆಟ್ ಗ್ಯಾಂಗ್ ಮತ್ತು ಗೋವಿಂದ ಮೇರಾ ನಾಮ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಲವ್ ಸ್ಟೋರಿ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

ಒಂದೇ ವರ್ಷದಲ್ಲಿ ಮದ್ವೆ-ಮಕ್ಳು; ಕಾಲೆಳೆಯುತ್ತಿದ್ದವರಿಗೆ ಬಿಸಿ ಉತ್ತರ ಕೊಟ್ಟ ಆಲಿಯಾ ಭಟ್

ಇನ್ನು ನಟಿ ಶ್ರದ್ಧಾ ಕಪೂರ್ ಸಿನಿಮಾಗಳ ಸಂಖ್ಯೆಯೂ ತುಂಬಾ ಕಡಿಮೆಯಾಗಿದೆ. ಕೊನೆಯದಾಗಿ ಬೇಡಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತು.  ಇದೀಗ ಲವ್ ಸ್ಟೋರಿ ಮೂಲಕ ರಣಬೀರ್ ಕಪೂರ್ ಜೊತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಮಾರ್ಚ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಸದ್ಯ ಟ್ರೈಲರ್ ನೋಡಿ ಎಂಜಾಯ್ ಮಾಡಬೇಕು ಅಷ್ಟೆ.

Follow Us:
Download App:
  • android
  • ios