ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ನಟಿಸಲು ರಣಬೀರ್ ಮತ್ತು ಅಲಿಯಾ ಇಬ್ಬರೂ ದೊಡ್ಡ ಮತ್ತೊದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 

ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್(Ranbir Kapoor And Alia Bhatt) ಏಪ್ರಿಲ್ 14ರಂದು ಹಸೆಮಣೆ ಏರಿದ್ದಾರೆ. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಣಬೀರ್ ಕಪೂರ್ ಅಲಿಯಾಗೆ ಮಾಂಗಲ್ಯ ಧಾರಣೆ ಮಾಡಿದರು. ಈ ತಾರ ಜೋಡಿಯ ಮದುವೆಗೆ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಇಬ್ಬರ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಅಂದಹಾಗೆ ಅಲಿಯಾ ಮತ್ತು ರಣಬೀರ್ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರೂ ಈ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಮದುವೆ ಫಿಕ್ಸ್ ಆದ ಬಳಿಕವೂ ಈ ಬಗ್ಗೆ ಇಬ್ಬರೂ ಎಲ್ಲೂ ಹೇಳಿಕೊಂಡಿರಲ್ಲ. ಇಬ್ಬರ ಮದುವೆ ವಿಚಾರ ಕಳೆದ ಕೆಲವು ತಿಂಗಳಿಂದ ಭಾರಿ ಸದ್ದು ಮಾಡುತ್ತಿತ್ತು. ಆದರೂ ಸೈಲೆಂಟ್ ಆಗಿದ್ದ ಈ ಜೋಡಿ ಮದುವೆ ಬಳಿಕ ಫೋಟೋ ಹಂಚಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಬಹಿರಂಗ ಪಡಿಸಿದರು. ಅಂದಹಾಗೆ ಅಲಿಯಾ ಮತ್ತು ರಣಬೀರ್ ಪ್ರೀತಿ ಪ್ರಾರಂಭವಾಗಿದ್ದು ಬ್ರಹ್ಮಾಸ್ತ್ರ್(Brahmastra) ಸಿನಿಮಾ ಚಿತ್ರೀಕರಣ ವೇಳೆ.

ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ್ ಸಿನಿಮಾ ದೊಡ್ಡ ಬಜೆಟ್ ನಲ್ಲಿ ಸಿದ್ಧವಾದ ಸಿನಿಮಾ. ಈ ಸಿನಿಮಾದಲ್ಲಿ ರಣಬೀರ್ ಮತ್ತು ಅಲಿಯಾ ಜೊತೆಗೆ ಅಮಿತಾಬ್ ಬಚ್ಚನ್, ಮೌನಿ ರಾಯ್, ನಾಗಾರ್ಜುನ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿತ್ತು. 2018ರಲ್ಲಿ ಸೆಟ್ಟೇರಿದ ಬ್ರಾಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿಸಿದ್ದಾರೆ. ಈ ಬಗ್ಗೆ ಸಿನಿಮಾ ತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಇದೀಗ ಈ ಸಿನಿಮಾ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಲು ರಣಬೀರ್ ಮತ್ತು ಅಲಿಯಾ ಬಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

Ranbir Alia wedding; Kareena, Karisma ಸೋದರಿಯರ ಗಾರ್ಜಿಯಸ್‌ ಲುಕ್‌ ವೈರಲ್‌

ಬಾಲಿವುಡ್ ಲೈಫ್ ವರದಿ ಮಾಡಿರುವ ಪ್ರಕಾರ ಶಿವನ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಾಯಕಿಯಾಗಿ ಮಿಂಚಿರುವ ರಣಬೀರ್ ಪತ್ನಿ, ಸ್ಟಾರ್ ನಟಿ ಅಲಿಯಾ ಭಟ್ 12 ಕೋಟಿ ರೂಪಾಯಿ ಪಡೆದಿದ್ದಾರಂತೆ. ಈ ಮೂಲಕ ಅತೇ ಹೆಚ್ಚು ಸಂಭಾವನೆಯನ್ನು ಈ ಸ್ಟಾರ್ ಜೋಡಿ ಪಡೆದುಕೊಂಡಿದೆ. ಇನ್ನು ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಿಗ್ ಬಿ ಅಮಿತಾಬ್ ಬಚ್ಚನ್ 8 ರಿಂದ 10 ಕಟಿ ರೂಪಾಯಿ ಪಡೆದಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ಇನ್ನು ಈ ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡಿರುವ ನಟಿ ಮೌನಿ ರಾಯ್ ಕೂಡ ಉತ್ತಮ ಸಂಭಾವನೆ ಗಳಿಸಿದ್ದಾರೆ. ಮೌನಿ ರಾಯ್ 3 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಬ್ರಹ್ಮಾಸ್ತ್ರ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿರುವ ಸೌತ್ ಸ್ಟಾರ್ ನಾಗಾರ್ಜುನ ಅವರು 11 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಸ್ಟಾರ್ ಕಲಾವಿದರು ನಟಿಸಿರುವ ಈ ಸಿನಿಮಾದಲ್ಲಿ ಸಂಭಾವನೆ ಕೂಡ ಅಷ್ಟೇ ದೊಡ್ಡ ಮೊತ್ತ ಪಡೆದಿದ್ದಾರೆ.

Ranbir Alia wedding: ಸುಂದರ ಕ್ಷಣಗಳ unseen ಫೋಟೋಗಳು!

ನಿರ್ದೇಶಕ ಅಯಾನ್ ಮುಖರ್ಜಿ ಇತ್ತೀಚಿಗಷ್ಟೆ ಸಿನಿಮಾದ ಪುಟ್ಟ ಟೀಸರ್ ಶೇರ್ ಮಾಡಿದ್ದರು. ರಣಬೀರ್ ಮತ್ತು ಅಲಿಯಾ ಮದುವೆ ದಿನ ಇಬ್ಬರ ರೊಮ್ಯಾಂಟಿಕ್ ಹಾಡಿನ ಟೀಸರ್ ಬಿಡುಗಡೆ ಮಾಡುವ ಮೂಲಕ ಸ್ಟಾರ್ ಜೋಡಿಗೆ ವಿಶ್ ಮಾಡಿದ್ದರು. ಇದೀಗ ಸಿನಿಮಾ ಚಿತ್ರೀಕರಣ ಮುಗಿಸಿರುವ ಬ್ರಹ್ಮಾಸ್ತ್ರ ತಂಡ ಸದ್ಯ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

ಇನ್ನು ಅಲಿಯಾ ಭಟ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಅಲಿಯಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆರ್ ಆರ್ ಆರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಅಲಿಯಾ ಡಾರ್ಲಿಂಗ್ಸ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಅಲಿಯಾ ನಟಿಸುತ್ತಿದ್ದಾರೆ. ಬಾಲಿವುಡ್ ನ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ನಟಿಯರ ಸಾಲಿನಲ್ಲಿ ಅಲಿಯಾ ಕೂಡ ಇದ್ದಾರೆ. ಇನ್ನು ರಣಬೀರ್ ಕಪೂರ್ ಸದ್ಯ ಅನಿಮಲ್, ಶಂಶೇರ ಮತ್ತು ಇನ್ನು ಹೆಸರಿಡಿದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.