ಪತಿ ಆದಿಲ್​ ಖಾನ್​ಗೆ ರಾಖಿ ಸಾವಂತ್ ಕ್ಷಮಾಪಣೆ! ರಂಜಾನ್ ಬರ್ತಿದೆ, ರಿಲೀಸ್ ಮಾಡಿ ಎಂದ ನಟಿ

ಹಲವು ತಿಂಗಳುಗಳಿಂದ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ದುರ್ರಾನಿ ದಂಪತಿ ನಡುವೆ ಸಿನಿಮೀಯ ರೀತಿಯ ಘಟನೆಗಳು ನಡೆಯುತ್ತಿದ್ದು, ಈಗ ನಟಿ ರಾಖಿ ಸಾವಂತ್​ ಪತಿಗೆ ಜಾಮೀನು ಸಿಗಲಿ ಎಂದು ಆಶಿಸಿದ್ದಾರೆ. 
 

Ramzan Is Approaching I want Adil To Get Bail Says Rakhi Sawant

ಡ್ರಾಮಾ ಕ್ವೀನ್​ (Drama Queen) ಎಂದೇ ಫೇಮಸ್​ ಆಗಿರೋ ರಾಖಿ ಸಾವಂತ್​, ಮೈಸೂರಿನ ಯುವಕ ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ಇಸ್ಲಾಂ ಸ್ವೀಕರಿಸಿ ಫಾತೀಮಾ ಆಗಿರುವುದು ಈಗ ಹಳೆಯ ಸುದ್ದಿ. ಪತಿಯ ವಿರುದ್ಧ ವಿವಿಧ ಆರೋಪ ಮಾಡಿ ಅವರನ್ನು ಜೈಲಿಗೆ ಅಟ್ಟಿರೋ ನಟಿ ರಂಜಾನ್​ ಆಚರಣೆ ಮಾಡಲು ಹಾತೊರೆಯುವ ಬಗ್ಗೆ ಇದಾಗಲೇ ಹೇಳಿಕೊಂಡಿದ್ದಾರೆ.  ಈ ರಂಜಾನ್ (Ramdan) ಸಮಯದಲ್ಲಿ ರಾಖಿ ಸಾವಂತ್ ಉಮ್ರಾಗೆ ಹೋಗುತ್ತೇನೆ ಎಂದಿದ್ದರು. ಮುಸ್ಲಿಮರಲ್ಲಿ ಪವಿತ್ರ ಎಂದು ಪರಿಗಣಿಸಲಾಗಿರುವ ಹಜ್ (Hajj) ತೀರ್ಥ ಯಾತ್ರೆಯ ಕಿರು ಸ್ವರೂಪ ಉಮ್ರಾ (Umrah). ಹಿಂದೂ ಧರ್ಮದಲ್ಲಿ ಹೇಗೆ ಕಾಶಿಯಾತ್ರೆ, ಕೇದಾರ ಯಾತ್ರೆ, ಪಂಚತೀರ್ಥಗಳು ಇತ್ಯಾದಿ ಧಾರ್ಮಿಕ ತೀರ್ಥ ಯಾತ್ರೆಗಳಿವೆಯೋ ಅದೇ ರೀತಿ ಇದೂ ಸಹ.   ವೀಸಾ ಪಡೆಯುವ ಪ್ರಕ್ರಿಯೆಯಲ್ಲಿದ್ದು,  ಅದು ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದು ಖಚಿತವಿಲ್ಲ ಎಂದಿದ್ದ ನಟಿ,  'ನನ್ನ ಖಾಲಿದ್ ಮಾಮು, ವಾಹಿದ್ ಭಾಯ್, ಜಾಮಾ ಮಸೀದಿಯಲ್ಲಿ ನನ್ನ ಅಫಿಡವಿಟ್ ಅನ್ನು ವೀಸಾಗಾಗಿ ತಯಾರಿ ಮಾಡುತ್ತಿದ್ದಾರೆ.  ಧರ್ಮ ಬದಲಾವಣೆಯ ಬಗ್ಗೆ  ಅಫಿಡವಿಟ್ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಅಲ್ಲಾನಿಗೆ ನಾನು ಉಮ್ರಾಗೆ ಹೋಗುವುದಕ್ಕೆ ಇಷ್ಟವಿದ್ದರೆ, ಖಂಡಿತವಾಗಿಯೂ ನನ್ನನ್ನು ಅಲ್ಲಿಗೆ ಕಳುಹಿಸುತ್ತಾನೆ' ಎಂದಿದ್ದರು. 

 ಉಮ್ರಾಗೆ ಹೋಗುವ ಕಾರಣವನ್ನೂ ಬಿಚ್ಚಿಟ್ಟಿದ್ದ ರಾಖಿ ಸಾವಂತ್​ (Raki Sawant),  ಹಳೆಯ ನೋವುಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗಲು ಬಯಸುತ್ತೇನೆ, ಅದಕ್ಕಾಗಿ ಹೋಗುವುದಾಗಿ ಹೇಳಿದ್ದರು. ನನ್ನ ಪಾಪಗಳು ತೊಳೆದು ಹೋಗುವಂತೆ ರೋಜಾವನ್ನು ಸರಿಯಾಗಿ ಮಾಡುತ್ತೇನೆ.  ರಂಜಾನ್ ಸಮಯದಲ್ಲಿ ನಾನು ಉಮ್ರಾಗೆ ಹೋದರೆ, ನನ್ನ ಅದೃಷ್ಟ ಬದಲಾಗುತ್ತದೆ ಎಂದಿದ್ದರು.  ರಂಜಾನ್ ತಿಂಗಳು ಶುರುವಾದಾಗ ನಾನು ಒಂದು ತಿಂಗಳ ಕಾಲ ತುಂಬಾನೇ ಜಾಗರೂಕಳಾಗಿರುತ್ತೇನೆ. ಇಡೀ ದಿನ ಹಸಿವಿನಿಂದ (hungry) ಇರಬೇಕು ಮತ್ತು ನಮಾಜ್ (Namaz) ಮಾಡಬೇಕಾಗುತ್ತದೆ, ಆದ್ದರಿಂದ  ಜಿಮ್ ಗೆ ಹೋಗುವುದಿಲ್ಲ ಎಂದೂ ಹೇಳಿದ್ದರು.  

Rakhi Sawant: ಇಸ್ಲಾಂ ಸ್ವೀಕರಿಸಿದ ನಟಿಯಿಂದ ರಂಜಾನ್​ ತಿಂಗಳ ಅಚ್ಚರಿಯ ಘೋಷಣೆ!

ಇವೆಲ್ಲವುಗಳ ನಡುವೆ ರಾಖಿ ಈಗ  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ರಂಜಾನ್ ನಿಮಿತ್ತ  ಪತಿ ಆದಿಲ್ ಖಾನ್ ದುರ್ರಾನಿಯವರಿಗೆ  ಮೈಸೂರು ಕೋರ್ಟ್​ನಿಂದ  ಜಾಮೀನು ಸಿಗಲಿ ಎಂದು ಬಯಸುವುದಾಗಿ ಹೇಳಿದ್ದಾರೆ.  'ರಂಜಾನ್ ಬರುತ್ತಿದೆ.  ರಂಜಾನ್ ಎಲ್ಲರನ್ನೂ ಕ್ಷಮಿಸುವ ಪುಣ್ಯ ಮಾಸ. ಆದರೆ ನಾನು ಆದಿಲ್​ನನ್ನು ಕ್ಷಮಿಸಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ಮೈಸೂರು ನ್ಯಾಯಾಲಯದಿಂದ ಜಾಮೀನು ಸಿಗಲಿ ಎಂದು ಬಯಸುತ್ತೇನೆ' ಎಂದಿದ್ದಾರೆ.  'ನಾನು ತುಂಬಾ ಒಳ್ಳೆಯವಳು. ಆತನಿಗೆ ಒಳ್ಳೆಯ ಹೆಂಡತಿಯಾಗಿದ್ದೆ. ಆದರೆ ಅವನು ನನ್ನ ಜೀವನವನ್ನು ಹಾಳುಮಾಡಿದ. ನಾನು ಅವನನ್ನು ತುಂಬಾ ಪ್ರೀತಿಸಬಾರದಿತ್ತು, ಆ ಪ್ರೀತಿಯಿಂದಲೇ ಅವನು ಜಾಮೀನಿನ ಮೇಲೆ ಹೊರಬರಬೇಕೆಂದು ನಾನು ಬಯಸುತ್ತೇನೆ, ಆದರೆ ಆರೋಪಗಳು ತುಂಬಾ ಗಂಭೀರವಾಗಿದೆ, ನಾನು ಮಾಧ್ಯಮದ ಮೂಲಕ ಅವನಿಗೆ ಸಂದೇಶ ಕಳುಹಿಸಲು ಬಯಸುತ್ತೇನೆ, 'ಆದಿಲ್ (Adil Khan Durrani), ಜಾಮೀನು ಸಿಕ್ಕರೆ ಬೇರೆಯವರ ಜೀವನ ಹಾಳು ಮಾಡಬೇಡಿ, ನಿಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಈಗಲೇ ಮದುವೆಯಾದರೆ ದಯವಿಟ್ಟು ಆ ವ್ಯಕ್ತಿಯನ್ನು ನನಗೆ ಮಾಡಿದಂತೆ ಕೆಟ್ಟದಾಗಿ ನಡೆಸಿಕೊಳ್ಳಬೇಡಿ' ಎಂದಿದ್ದಾರೆ. 

'ನಾನು ಅವನ ಬಳಿಗೆ ಎಂದಿಗೂ ಹಿಂತಿರುಗುವುದಿಲ್ಲ, ನಾನು ಇನ್ನು ಮುಂದೆ ನನ್ನ ಜೀವನವನ್ನು ಏಕಾಂಗಿಯಾಗಿ ನಡೆಸಲು ಬಯಸುತ್ತೇನೆ, ನಾನು ಅವನ ಮತ್ತು ಅವನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ'ಎಂದಿದ್ದಾರೆ. ಇದೇ ವೇಳೆ  ಆದಿಲ್ ಬೇರೆಯವರ ಜೊತೆ ಮದುವೆಯಾದರೆ ತನಗೆ ತೊಂದರೆ ಇಲ್ಲ. ಆದರೆ  ಆದಿಲ್ ನ ನಿಜಸ್ವರೂಪ ಅವಳಿಗೂ ತಿಳಿದ ಮೇಲೆ ಬಿಡುತ್ತಾಳಷ್ಟೇ.  ನಾನು ಮುಂದೆ ಹೋಗಿದ್ದೇನೆ, ತುಂಬಾ ನೋವಿದೆ. ನಾನು ಅವನಿಗೆ ನಿಷ್ಠಳಾಗಿದ್ದೆ. ಆದರೆ ಇದು  ಪುಣ್ಯಭರಿತ ತಿಂಗಳು, ನನ್ನ ಹೃದಯದಲ್ಲಿ ಯಾವುದೇ ಸೇಡು ತೀರಿಸಿಕೊಳ್ಳಲು ನಾನು ಬಯಸುವುದಿಲ್ಲ, ನಾನು ದೊಡ್ಡ ಹೃದಯದಿಂದ ಮುಂದುವರಿಯುತ್ತೇನೆ. ದೇವರು ಆದಿಲ್ ಅವರನ್ನು ಆಶೀರ್ವದಿಸಲಿ' ಎಂದಿದ್ದಾರೆ. 

Rakhi Sawant: ಮೈಸೂರಿನ ಜೈಲಿನಿಂದ ರಾಖಿಗೆ ಪತಿ ಆದಿಲ್​ ಶಾಕಿಂಗ್​ ​ ಮೆಸೇಜ್​!

Latest Videos
Follow Us:
Download App:
  • android
  • ios