Rakhi Sawant: ಮೈಸೂರಿನ ಜೈಲಿನಿಂದ ರಾಖಿಗೆ ಪತಿ ಆದಿಲ್​ ಶಾಕಿಂಗ್​ ​ ಮೆಸೇಜ್​!

ಮೈಸೂರಿನ ಜೈಲಿನಲ್ಲಿರುವ ರಾಖಿ ಸಾವಂತ್​ ಪತಿ ರಾಖಿಗೆ ಮೆಸೇಜ್​ ಮಾಡಿ ಕ್ಷಮಿಸುವಂತೆ ಕೋರಿದ್ದಾರಂತೆ. ಈ ಬಗ್ಗೆ ರಾಖಿ ಹೇಳಿದ್ದೇನು?
 

Rakhi Sawant shocking revelation about Adil Khan in front of the crowd

ರಾಖಿ ಸಾವಂತ್​ Rakhi Sawant ಸದ್ಯ ಭಾರಿ ಚರ್ಚೆಯಲ್ಲಿರುವ ನಟಿ. ಈಕೆಯ ಇತ್ತೀಚಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಬಳಿಕ ಇವರನ್ನು ಡ್ರಾಮಾ ಕ್ವೀನ್​ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ.  ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಂತರ,  ಮೈಸೂರು ಕೋರ್ಟ್‌ಗೆ (Mysore Court) ಹಾಜರಾಗಿ ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದರು. ಇವೆಲ್ಲಾ ಬೆಳವಣಿಗೆಯ ಬಳಿಕ ಮದುಮಗಳಂತೆ ಸಿಂಗರಿಸಿಕೊಂಡು ಮತ್ತೆ ಜೀವನದಲ್ಲಿ ಮದುವೆಯನ್ನೇ ಆಗುವುದಿಲ್ಲ ಎಂದು ಪಣತೊಟ್ಟಿದ್ದರು.

ನಂತರ ಕಳೆದ ತಿಂಗಳು ದುಬೈಗೆ (Dubai) ಹೋಗಿದ್ದ ಅವರು, ರಾಖಿ ಸಾವಂತ್‌ ಅಕಾಡೆಮಿ ಉದ್ಘಾಟನೆಗಾಗಿ ಹೋಗಿರುರುವುದಾಗಿ ತಿಳಿಸಿದ್ದರು.  ಗಂಡನ ಬಗ್ಗೆ ಮಾತನಾಡಿದ್ದ ಅವರು, 'ನನ್ನಂಥ ಉತ್ತಮ ನಡತೆಯ ಹಾಟ್‌ ಅಗಿರುವ ಹೆಂಡತಿಯನ್ನು ಬಿಟ್ಟು ಓಡಿಹೋಗಿದ್ದಾನೆ.. ಪಾಪ' ಎಂದಿದ್ದರು.ಇದೀಗ ರಾಖಿ ಬಾಲಿವುಡ್​, ದುಬೈ ಬಗ್ಗೆ ಮಾತನಾಡಿದ್ದಾರೆ.  ಬಾಲಿವುಡ್ ನನ್ನ ಕರ್ಮಭೂಮಿ, ಮುಂಬೈ ನನ್ನ ಜನ್ಮಭೂಮಿ. ಅಂತೆಯೇ ದುಬೈನಲ್ಲಿಯೂ ನಾನು ಏನಾದರೊಂದು ಮಾಡಬೇಕು. ಬಾಲಿವುಡ್, ಹಾಲಿವುಡ್ ರೀತಿ ದುಬೈನಲ್ಲಿ ದಾಲಿವುಡ್‌ ಮಾಡಬೇಕು. ಭಾರತದಲ್ಲಿರುವ ಪತ್ರಕರ್ತರು, ಪಾಪರಾಜಿಗಳ ರೀತಿ ದುಬೈನಲ್ಲಿ ಕೂಡ ಪತ್ರಕರ್ತರು, ಪಾಪರಾಜಿ ಇರಬೇಕು, ಅದಕ್ಕೆ ಏನು ಬೇಕೋ ಅದನ್ನು ನಾನು ನೀಡುತ್ತೇನೆ" ಎಂದು ರಾಖಿ ಸಾವಂತ್ ಹೇಳಿದ್ದಾರೆ.

Rakhi Sawant: ಬಣ್ಣವೆಲ್ಲಾ ಹೊರಟುಹೋಯ್ತು ಎಂದು ಗೋಳೋ ಎಂದ 'ಡ್ರಾಮಾ ಕ್ವೀನ್'​!

ಪತಿ ಆದಿಲ್​ ಖಾನ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, 'ಆದಿಲ್ ಮತ್ತೆ ನನ್ನ ಜೀವನದಲ್ಲಿ ಬರೋಕೆ ಇಷ್ಟಪಡ್ತಿದ್ದಾನೆ. ಅವನು ವಾಪಾಸ್ ಬರೋದು ನನ್ನನ್ನು ಕೊಲ್ಲೋದಿಕ್ಕಾ? ನನ್ನ ಜೀವನ ಹಾಳು ಮಾಡಿದ ಹಾಗೆ ಅವನು ಇನ್ನೊಂದು ಹುಡುಗಿ ಜೀವನ ಹಾಳು ಮಾಡಬಾರದು. ಇದಕ್ಕಾಗಿ ನಾನು ಆದಿಲ್​ಗೆ ಡಿವೋರ್ಸ್​ ಕೊಡಲ್ಲ. ನಾನಂತೂ ಇನ್ನು ಮದ್ವೆ ಆಗುವುದಿಲ್ಲ. ಅವನು ಬೇರೆಯವರಿಗೆ ಹಿಂಸೆ ಕೊಡಬಾರದು ಎಂದು ಡಿವೋರ್ಸ್​ ಕೊಡಲ್ಲ. ಮಕ್ಕಳ ಬಗ್ಗೆಯೂ ಯೋಚನೆ ಮಾಡೋದಿಲ್ಲ. ನನ್ನ ಅಕಾಡೆಮಿಯ ಮಕ್ಕಳು ನನ್ನ ಮಕ್ಕಳು (Children) ನಾನು ತುಂಬ ಸ್ಟ್ರಾಂಗ್. ಆದರೆ  ಈಗಾಗಲೇ ಸತ್ತುಹೋಗಿದ್ದೇನೆ, ಹೃದಯವೂ ಸತ್ತು ಹೋಗಿದೆ. ಆದರೆ ಉಸಿರಾಡುತ್ತಿದ್ದೇನೆ ಅಷ್ಟೇ. ಎಲ್ಲ ಕೆಲಸ ನಿಭಾಯಿಸುವ ಮಹಿಳೆಯವರಿಗೆ ನೋವು ಕೊಡಬೇಡಿ, ಹೊಡೆಯಬೇಡಿ' ಎಂದು ನಟಿ ಹೇಳಿದ್ದಾರೆ.

ಮೈಸೂರಿನ ಜೈಲಿನಲ್ಲಿರುವ ಆದಿಲ್​ ಬಗ್ಗೆ ಹೇಳಿದ ರಾಖಿ,  'ಆದಿಲ್ ನನಗೆ ಮೆಸೇಜ್ ಮಾಡಿ ಒಂದು ಅವಕಾಶ ಕೊಡು ಅಂತ ಕೇಳುತ್ತಿದ್ದಾನೆ. ನಾನು ಅವನ ವಿರುದ್ಧ ಮಾಡಿದ ಆರೋಪ ಹಿಂದಕ್ಕೆ ಪಡೆಯಲು ಬಯಸುತ್ತಿದ್ದಾನೆ. ಮತ್ತೆ ನನ್ನ ಲೈಫ್​ನಲ್ಲಿ ಎಂಟ್ರಿ ಕೊಡಲು ರೆಡಿ ಆಗಿದ್ದಾನೆ. ಅದಕ್ಕಾಗಿ ಮೆಸೇಜ್​ ಕಳಿಸಿದ್ದಾನೆ. ಆಗ ಎಷ್ಟೆಲ್ಲಾ ಗೋಗರೆದುಕೊಂಡರೂ ನನ್ನ ಮೇಲೆ ಕರುಣೆ ತೋರಲಿಲ್ಲ. ಈಗ ನಾನು ಸ್ಟ್ರಾಂಗ್​ ಆಗಿದ್ದೇನೆ. ಯಾವುದಕ್ಕೂ ಜಗ್ಗುವುದಿಲ್ಲ. ಆತ ಕೋರ್ಟ್‌ನಲ್ಲಿ (Court) ನಾನು ರಾಖಿಯನ್ನು ಚೆನ್ನಾಗಿ ನೋಡಿಕೊಳ್ತೀನಿ, ಮದುವೆಯನ್ನು ನಿಭಾಯಿಸಿಕೊಂಡು ಹೋಗುವೆ ಅಂತ ಬರೆದುಕೊಡಬೇಕು, ಆದರೆ ಅವನು ನನ್ನ ತಾಯಿಯನ್ನು ವಾಪಾಸ್ ತರುತ್ತಾನಾ? ಸಾಧ್ಯವೇ ಇಲ್ಲ. ಹಾಗಾಗಿ ನಾನು ಆದಿಲ್‌ನನ್ನು ಕ್ಷಮಿಸೋದಿಲ್ಲ' ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಮದುಮಗಳ ಲುಕ್​ನಲ್ಲಿ ಮಿಂಚಿಂಗ್​! ಮೂರನೆ ಮದ್ವೆಯಾಗ್ತಿದ್ದಾರಾ Rakhi Sawant?
 

Latest Videos
Follow Us:
Download App:
  • android
  • ios