2013 ರಲ್ಲಿ 'ರಾಮಯ್ಯ ವಸ್ತಾವಯ್ಯ' ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ನಟ, ಈಗ ಚಿತ್ರರಂಗದಿಂದ ದೂರವಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಾಣದ ಗಿರೀಶ್, ಈಗ ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. 

ಚಿತ್ರರಂಗಕ್ಕೆ ಬಂದವರೆಲ್ಲ ಯಶಸ್ಸು ಪಡೆಯೋದಿಲ್ಲ, ಶ್ರಮದ ಜೊತೆಗೆ ಅದೃಷ್ಟವೂ ಬೇಕು ಎನ್ನುತ್ತಾರೆ. ಕೆಲವು ಇಲ್ಲಿಯೇ ಕೊನೆತನಕ ಹೋರಾಡುತ್ತಿದ್ದರೆ, ಇನ್ನೂ ಕೆಲವರು ಆರಂಭದಲ್ಲೋ, ಮಧ್ಯದಲ್ಲೋ ಚಿತ್ರರಂಗದಿಂದ ದೂರ ಸರಿಯುತ್ತಾರೆ. 2013ರಲ್ಲಿ ʼರಾಮಯ್ಯ ವಸ್ತಾವಯ್ಯʼ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟ ಗಿರೀಶ್‌ ಕುಮಾರ್‌ ಈಗ ಚಿತ್ರರಂಗದಿಂದ ದೂರ ಇದ್ದಾರೆ. ಈ ಚಿತ್ರಕ್ಕೆ ಪ್ರಭುದೇವ ಅವರು ನಿರ್ದೇಶನ ಮಾಡಿದ್ದರೆ, ಶ್ರುತಿ ಹಾಸನ್‌ ನಾಯಕಿಯಾಗಿದ್ದರು. ತೆಲುಗು ಸಿನಿಮಾದ ರಿಮೇಕ್‌ ಇದಾಗಿತ್ತು. ಅಂದಹಾಗೆ ಕನ್ನಡ ರಿಮೇಕ್‌ನಲ್ಲಿ ವಿಷ್ಣುವರ್ಧನ್‌, ರಕ್ಷಿತಾ, ಅನಿರುದ್ಧ ಕೂಡ ನಟಿಸಿದ್ದರು.

ಯಶಸ್ವಿ ಬ್ಯುಸಿನೆಸ್‌ ಮ್ಯಾನ್

ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡದಿದ್ದರೂ ಕೂಡ, ಭಾವನಾತ್ಮಕ ಕಥೆ, ಅದ್ಭುತವಾದ ಸಂಗೀತದ ಮೂಲಕ ಜನಪ್ರಿಯತೆ ಪಡೆದಿತ್ತು. ʼಜೀನೆ ಲಗಾ ಹೂʼ ಎನ್ನುವ ಹಿಟ್‌ ಹಾಡು ಈ ಸಿನಿಮಾದ್ದೇ ಎನ್ನೋದು ಇನ್ನೊಂದು ವಿಶೇಷವಾಗಿದೆ. ಬೆಸ್ಟ್‌ ಡೆಬ್ಯೂ ಎಂದು ಮೊದಲ ಸಿನಿಮಾದಲ್ಲೇ ಭರವಸೆಯ ಹೀರೋ ಆಗಿ ಹೊರಹೊಮ್ಮಿದ ನಟ ಗಿರೀಶ್‌ ಇಂದು ಯಶಸ್ವಿ ಬ್ಯುಸಿನೆಸ್‌ ಮ್ಯಾನ್.

ಸ್ಟಾರ್‌ಗಳು ಎಂಟ್ರಿ ಕೊಟ್ಟ ಟೈಮ್!‌

2016ರಲ್ಲಿ ʼLoveShhudaʼ ಸಿನಿಮಾದಲ್ಲಿ ಗಿರೀಶ್‌ ನಟಿಸಿದ್ದು, ನವನೀತ್‌ ಕೌರ್‌ ಧಿಲ್ಲನ್‌ ನಾಯಕಿಯಾಗಿದ್ದರು. ಈ ಸಿನಿಮಾ ಮಕಾಡೆ ಮಲಗಿತು. 2010ರ ಆರಂಭದಲ್ಲಿ ರಣವೀರ್‌ ಸಿಂಗ್‌, ಆಯುಷ್ಮಾನ್‌ ಖುರಾನಾ, ಪರಿಣಿತಿ ಚೋಪ್ರಾ, ಆಲಿಯಾ ಭಟ್‌, ವರುಣ್‌ ಧವನ್‌, ಕೃತಿ ಸನೋನ್‌, ಸಿದ್ದಾರ್ಥ್‌ ಮಲ್ಹೋತ್ರ ಮುಂತಾದವರು ಬಾಲಿವುಡ್‌ಗೆ ಎಂಟ್ರಿ ಪಡೆದಿದ್ದರು. ಆ ವೇಳೆ ಗಿರೀಶ್‌ ಬಂದರೂ ಕೂಡ ಸಿನಿಮಾ ರಂಗದಲ್ಲಿ ನಿಲ್ಲಲೇ ಇಲ್ಲ.

ಈ ಕಂಪೆನಿ ಲಾಭ ನಷ್ಟ ಎಷ್ಟು?

ನಿರ್ಮಾಪಕ ಕುಮಾರ್‌ ಎಸ್‌ ತರುಣಿ ಅವರ ಮಗನಾಗಿರೋ ಗಿರೀಶ್‌ ಅವರು ರಮೇಶ್‌ ಎಸ್‌ ತರುಣಿ ಅವರ ಅಳಿಯ ಕೂಡ ಹೌದು. ಮನರಂಜನಾ ಕ್ಷೇತ್ರದಲ್ಲಿ ತರುಣಿ ಸಹೋದರರು ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಗಿರೀಶ್‌ ಮಾತ್ರ ಬಾಲಿವುಡ್‌ನಿಂದ ಮರೆಯಾದರು. ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ಫ್ಯಾಮಿಲಿ ಬ್ಯುಸಿನೆಸ್‌ಗೆ ಎಂಟ್ರಿ ಕೊಟ್ಟ ಗಿರೀಶ್‌ ಅವರು ಅಪ್ಪ-ಚಿಕ್ಕಪ್ಪನ ಉದ್ಯಮದ ಜವಾಬ್ದಾರಿ ಹೊತ್ತರು. TIP industries ಕಂಪೆನಿಯಲ್ಲಿ ಚೀಪ್‌ ಆಪರೇಟಿಂಗ್‌ ಆಫೀಸರ್‌ ಆಗಿರೋ ಗಿರೀಶ್‌ ಅವರು ದೊಡ್ಡ ಮಟ್ಟದ ಲಾಭದಲ್ಲಿದ್ದಾರೆ. 2024ರ ಮನಿಕಂಟ್ರೋಲ್‌ ಪ್ರಕಾರ ಈ ಕಂಪೆನಿಯು 10,517 ಕೋಟಿ ರೂಪಾಯಿ ಬಂಡವಾಳ ಹೊಂದಿದೆ. ಅಷ್ಟೇ ಅಲ್ಲದೆ ಗಿರೀಶ್‌ ಕೂಡ ಈ ಕಂಪೆನಿಯಲ್ಲಿ 2164 ಕೋಟಿ ರೂಪಾಯಿ ಶೇರ್‌ ಹೊಂದಿದ್ದಾರಂತೆ. ಈ ಮೂಲಕ ನಟ ರಣಬೀರ್‌ ಕಪೂರ್‌, ರಣವೀರ್‌ ಸಿಂಗ್‌, ವರುಣ್‌ ಧವನ್‌, ಆಮಿರ್‌ ಖಾನ್‌ ಅವರನ್ನು ಕೂಡ ಗಿರೀಶ್‌ ಬೀಟ್‌ ಮಾಡಿದ್ದಾರೆ. ಅಂದಹಾಗೆ ಬಾಲ್ಯದ ಗೆಳತಿ ಕ್ರಸ್ನಾ ಜೊತೆಗೆ ಗಿರೀಶ್ ಮದುವೆಯಾಗಿದ್ದು, ಈ ಜೋಡಿಗೆ ಓರ್ವ ಮಗ ಕೂಡ ಇದ್ದಾನೆ. ಮುಂಬೈನಲ್ಲಿ ಈ ಜೋಡಿ ವಾಸ ಮಾಡುತ್ತಿದ್ದಯ, ಗಿರೀಶ್‌ ಅವರು ಟಿಪ್‌ ಮ್ಯೂಸಿಕ್‌ನ ಪ್ರಮೋಟರ್‌, ಎಕ್ಸಿಕ್ಯೂಟಿವ್‌ ಕೂಡ ಹೌದು.