ಯಶ್​, ರಣಬೀರ್​-ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ ರಾಮಾಯಣ ಫಿಲ್ಮ್​ ಶೂಟಿಂಗ್​ ಶುರುವಾಗಿದ್ದು, ಇದರ  ಫೋಟೋ ವೈರಲ್​ ಆಗಿದೆ.  

ರಾಮಾಯಣವನ್ನು ಆಧರಿಸಿ ಇದಾಗಲೇ ಕೆಲವು ಚಿತ್ರಗಳು ಬಂದಿದ್ದು, ಇದೀಗ ಮತ್ತೊಂದು ರಾಮಾಯಣ ಚಿತ್ರದ ಶೂಟಿಂಗ್​ ನಡೆಯುತ್ತಿದೆ. ನಿತೇಶ್ ತಿವಾರಿ ಮಹಾಗ್ರಂಥವನ್ನು ತೆರೆಮೇಲೆ ತರುವುದಕ್ಕೆ ಹೊರಟಿರುವುದು ಅನೇಕ ತಿಂಗಳುಗಳಿಂದ ಸದ್ದು ಮಾಡುತ್ತಲೇ ಇತ್ತು. ರಣ್‌ಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದೂ ಸುದ್ದಿಯಾಗಿತ್ತು. ಈ ಚಿತ್ರದ ಬಿಡುಗಡೆ ಕನ್ನಡಿಗರ ಪಾಲಿಗೆ ಬಹುನಿರೀಕ್ಷಿತವಾಗಿದೆ. ಇದಕ್ಕೆ ಕಾರಣ, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್​ ಅವರು ನಟಿಸುತ್ತಿದ್ದಾರೆ. ಇವರು ನಟಿಸುತ್ತಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿತ್ತು. ಆದರೆ ರಾಮಾಯಣದಲ್ಲಿ ರಾವಣನಾಗಿ ತೆರೆ ಮೇಲೆ ಯಶ್​ ಬರುತ್ತಿರುವುದು ಖಚಿತವಾಗಿದೆ. ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿದರೆ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಬಣ್ಣ ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಸಿನಿಮಾ ಮೂರು ಭಾಗಗಳಲ್ಲಿ ಬರಲಿದ್ದು, ರಾವಣನ ಎಂಟ್ರಿ ಎರಡನೇ ಪಾರ್ಟ್​​ನಲ್ಲಿ ಆಗಲಿದೆಯಂತೆ. 

ಈ ಸಿನಿಮಾಕ್ಕೆ ಸಂಬಂಧಿಸಿದಂತೆ, ಹೊಸ ಹೊಸ ಅಪ್​ಡೇಟ್ಸ್​ ಪ್ರತಿದಿನ ವೈರಲ್ ಆಗುತ್ತಲೇ ಇವೆ. ಚಿತ್ರಕ್ಕೆ ಸಂಬಂಧಿಸಿದಂತೆ ವಿಷಯಗಳನ್ನು ಮುಚ್ಚಿಡಲಾಗುತ್ತಿದ್ದರೂ ಕೆಲವೊಂದು ವಿಷಯಗಳು ಲೀಕ್​ ಆಗುತ್ತಿವೆ. ಕೆಲ ತಿಂಗಳ ಹಿಂದೆ ಶೂಟಿಂಗ್​ ಸೆಟ್​ನ ವಿಡಿಯೋ ಲೀಕ್​ ಆಗಿತ್ತು. ಇದೀಗ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ಫಸ್ಟ್ ಲುಕ್ ಭಗವಾನ್ ರಾಮ ಮತ್ತು ಸೀತಾ ದೇವಿಯ ಪಾತ್ರಗಳು ಲೀಕ್ ಆಗಿವೆ. ಸಿನಿಮಾದ ಶೂಟಿಂಗ್ ಸೆಟ್‌ಗಳಿಂದ ರಣಬೀರ್ ಸಾಂಪ್ರದಾಯಿಕ ಉಡುಗೆಯಲ್ಲಿ ಅಯೋಧ್ಯೆಯ ಯುವರಾಜ, ಭಗವಾನ್ ರಾಮನಂತೆ ಮತ್ತು ಸಾಯಿ ಪಲ್ಲವಿ ಸೀತೆಯಂತೆ ಲುಕ್​​ನಲ್ಲಿರುವ ಫೋಟೋಗಳು ಲೀಕ್ ಆಗಿವೆ. ಈ ಫೋಟೋಗಳು ZoomTV ಗೆ ಲಭಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅಭಿಮಾನಿಗಳು ಇದಕ್ಕೆ ಫುಲ್​ ಫಿದಾ ಆಗಿದ್ದಾರೆ.

ಮಗು ಬೇಕು, ಮದ್ವೆ-ಹೆರಿಗೆ ಸಾಕಪ್ಪಾ ಸಾಕು! ಅಂಡಾಣು ಫ್ರೀಜ್​ಗೆ ಮುಂದಾದ ಮತ್ತೋರ್ವ ಬಾಲಿವುಡ್​ ನಟಿ

ಅರುಣ್ ಗೋವಿಲ್ ರಾಜ ದಶರಥನ ವೇಷದಲ್ಲಿ ಕಾಣಿಸಿಕೊಂಡರೆ, ಲಾರಾ ದತ್ತಾ ಕೈಕೇಯಿಯ ಗೆಟಪ್‌ನಲ್ಲಿದ್ದರು. ಬಾಬಿ ಡಿಯೋಲ್, ವಿಜಯ್ ಸೇತುಪತಿ ಮತ್ತು ಸನ್ನಿ ಡಿಯೋಲ್ ಕ್ರಮವಾಗಿ ಕುಂಭಕರನ್, ವಿಭೀಷಣ ಮತ್ತು ಭಗವಾನ್ ಹನುಮಾನ್ ಆಗಿ ನಟಿಸಲಿರುವ ಬಗ್ಗೆ ವರದಿಗಳಿವೆ. ಅದೇ ಬಗ್ಗೆ ಅಧಿಕೃತ ದೃಢೀಕರಣವನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.

ಸದ್ಯ ಶೂಟಿಂಗ್​ ಸೆಟ್​ನ ಹೊರಭಾಗದ ಫೋಟೋಗಳು ಮತ್ತು ವಿಡಿಯೋ ಲೀಕ್​ ಆಗಿವೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಚಿತ್ರದಲ್ಲಿ ಇನ್ನುಳಿದಂತೆ, ವಿಭೀಷಣನ ಪಾತ್ರದಲ್ಲಿ ವಿಜಯ್​ ಸೇತುಪತಿ, ಆಂಜನೇಯನಾಗಿ ಸನ್ನಿ ಡಿಯೋಲ್​, ಕೈಕೇಯಿ ಪಾತ್ರದಲ್ಲಿ ಲಾರಾ ದತ್ತ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿದೆ. ತಾವು ರಾಮನಾಗಿ ಮಿಂಚುತ್ತಿರುವ ಕಾರಣ, ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿರುವುದಾಗಿ ರಣಬೀರ್​ ತಿಳಿಸಿದ್ದರು. ಇವರು ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದರು. ನಟಿ ಕಂಗನಾ ರಣಾವತ್​ ಕೂಡ ರಣಬೀರ್​ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಇದೀಗ ರಣಬೀರ್​ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದಾರೆ.

ಕಿರುತೆರೆಯಲ್ಲಿಯೂ ಕಾಸ್ಟಿಂಗ್​ ಕೌಚ್​? ರೂಮಿನಲ್ಲಿ ಕೂಡಾಕಿದ್ರು, ಬಟ್ಟೆ ಬದಲಿಸುವಾಗ... ನಟಿಯ ಕರಾಳ ಅನುಭವ