RRR ಯಶಸ್ಸಿನ ಬೆನ್ನಲ್ಲೇ ರಾಜಮೌಳಿಗೆ ನಿರ್ಮಾಪಕ ರಾಮ್ಗೋಪಾಲ್ ವರ್ಮಾ ಕೊಲೆ ಬೆದರಿಕೆ!
ಆರ್‌ಆರ್‌ಆರ್ ಚಿತ್ರದ ಯಶಸ್ಸಿನ ಬೆನ್ನಲ್ಲೆ ಚಲನಚಿತ್ರ ನಿರ್ಮಾಪಕ ಎಸ್‌ಎಸ್ ರಾಜಮೌಳಿ ಅವರಿಗೆ ಇನ್ನೋರ್ವ ಖ್ಯಾತ ನಿರ್ಮಾಪಕ ರಾಮ್ಗೋಪಾಲ್ ವರ್ಮಾಕೊಲೆ ಬೆದರಿಕೆ ಹಾಕಿದ್ದಾರೆ, ಏನಿದರ ಗುಟ್ಟು?
ದಕ್ಷಿಣ ಸಿನಿ ಕ್ಷೇತ್ರದ ಖ್ಯಾತ ಚಲನಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ ಅವರ ಚಿತ್ರ ಆರ್‌ಆರ್‌ಆರ್ (RRR) ಭರ್ಜರಿ ಯಶಸ್ಸು ಗಳಿಸಿದ್ದು ಈಗ ಹಳೆಯ ಸುದ್ದಿ. ಇತ್ತೀಚೆಗೆ, ಅವರ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ಸಿಕ್ಕಿತು. ಅತ್ಯುತ್ತಮ ಮೂಲ ಗೀತೆ ಎಂಬ ಕಾರಣಕ್ಕೆ ಈ ಪ್ರಶಸ್ತಿ ದಕ್ಕಿತು. ಇದಲ್ಲದೇ ಎಸ್.ಎಸ್. ರಾಜಮೌಳಿ ಅವರಿಗೆ ವಿಮರ್ಶಕರ ಆಯ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಲಿವುಡ್ ಸೇರಿದಂತೆ ಎಲ್ಲೆಡೆಯೂ ಸದ್ಯ ಇದರದ್ದೇ ಚರ್ಚೆ. ಎಸ್.ಎಸ್.ರಾಜಮೌಳಿ ಅವರ ಈ ಯಶಸ್ಸಿನ ಬೆನ್ನಲ್ಲೇ ಖ್ಯಾತ ಬಾಲಿವುಡ್ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ಮುಂಚೂಣಿಗೆ ಬಂದಿದೆ. ರಾಮ್ ಗೋಪಾಲ್ ವರ್ಮಾ (Ram Gopal Verma) ಈ ಟ್ವೀಟ್ ಮೂಲಕ ಎಸ್.ಎಸ್ ರಾಜಮೌಳಿಗೆ ಬೆದರಿಕೆ ಹಾಕಿದ್ದಾರೆ!
ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ (Twitter handle) ಎಸ್.ಎಸ್.ರಾಜಮೌಳಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಅವರು ಅವರು, 'ಎಸ್.ಎಸ್. ರಾಜಮೌಳಿ ಸರ್, ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಯಶಸ್ಸನ್ನು ಸಹಿಸಿಕೊಳ್ಳಲು ಅಗದ ಚಲನಚಿತ್ರ ನಿರ್ಮಾಪಕರ ಗುಂಪೊಂದು ಬಹಳ ಕಿರಿಕಿರಿ ಅನುಭವಿಸುತ್ತಿದೆ. ಅವರು ಅಸೂಯೆಯಿಂದ ನಿಮ್ಮನ್ನು ಕೊಲ್ಲಲು ತಂಡವನ್ನು ರಚಿಸಿದ್ದಾರೆ. ಅದರಲ್ಲಿ ನಾನು ಕೂಡ ಭಾಗವಾಗಿದ್ದೇನೆ. ನಾನು ನಾಲ್ಕು ಪೆಗ್ ಡ್ರಿಂಕ್ಸ್ (Drinks) ಹೆಚ್ಚಿಗೆ ಸೇವಿಸಿದ ಕಾರಣ ನಾನು ರಹಸ್ಯವನ್ನು ಹೊರಹಾಕುತ್ತಿದ್ದೇನೆ' ಎಂದಿದ್ದಾರೆ!
Katrina Kaif: ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟ ಕತ್ರಿಕಾ ಕೈಫ್: ಇನ್ಸ್ಟಾದಲ್ಲಿ ಪೋಸ್ಟ್
ಈ ಟ್ವೀಟ್ ಈಗ ಭಾರಿ ವೈರಲ್ ಆಗಿದ್ದು, ಬಳಕೆದಾರರು ಸಿಕ್ಕಾಪಟ್ಟೆ ತಮಾಷೆಯ ಕಮೆಂಟ್ಸ್ ಹಾಕುತ್ತಿದ್ದಾರೆ. ಇದು ನಿಜವಾಗಿರಲಿಕ್ಕೂ ಸಾಕು, ತಮಾಷೆಯ ರೂಪದಲ್ಲಿ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ ಅಷ್ಟೇ ಎಂದು ಕೆಲವರು ಕಾಲೆಳೆದಿದ್ದಾರೆ. ಇನ್ನು ಕೆಲವರು, 'ಇನ್ನೂ ನಾಲ್ಕು ಪೆಗ್ಸ್ ಹೆಚ್ಚಿಗೆ ಹಾಕಿ, ಆ ನಿರ್ಮಾಪಕರ ಹೆಸರು ಹೇಳಿ ಸರ್' ಎಂದಿದ್ದಾರೆ. ಅದೇ ಸಮಯದಲ್ಲಿ, ಎಸ್‌ಎಸ್ ರಾಜಮೌಳಿ ಅವರ ಚಿತ್ರ ಆರ್‌ಆರ್‌ಆರ್ ಬಗ್ಗೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರ ಜಾಗತಿಕವಾಗಿ 1200 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಎಸ್.ಎಸ್.ರಾಜಮೌಳಿ ಬಹಳ ಹಿಂದಿನಿಂದಲೂ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಈ ಹಿಂದೆ ಅವರ ಬಾಹುಬಲಿ ಚಿತ್ರ ಕೂಡ ಜನ ಮೆಚ್ಚಿತ್ತು.
ಅಂದಹಾಗೆ ಆರ್‌ಆರ್‌ಆರ್ ಚಿತ್ರ ಬಿಡುಗಡೆಯಾದ ದಿನದಿಂದಲೂ ಸುದ್ದಿಯಲ್ಲಿದೆ. ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು ಚಿತ್ರ. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿಗೂ ಹೆಚ್ಚು ಗಳಿಸಿದೆ ಆರ್‌ಆರ್‌ಆರ್. ಲಾಸ್ ಏಂಜಲೀಸ್ನಲ್ಲಿ (Los Angeles) ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ ಈ ಕುರಿತು ಟ್ವಿಟರ್ನಲ್ಲಿ ಚಂದ್ರಮೌಳಿ ಸಂತಸ ಹಂಚಿಕೊಂಡಿದ್ದರು. ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ (James Camaroon) ಅವರು ಈ ಚಿತ್ರಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಬಗ್ಗೆ ಹೆಮ್ಮೆಯಿಂದ ರಾಜಮೌಳಿ ಹೇಳಿಕೊಂಡಿದ್ದರು. 'ಟೈಟಾನಿಕ್ ಮತ್ತು ಅವತಾರ್ ನಂತಹ ಸಿನಿಮಾಗಳನ್ನು ನಿರ್ದೇಶಿಸಿದ ಜೇಮ್ಸ್ ಕ್ಯಾಮರೂನ್ ಅವರು 'RRR' ವೀಕ್ಷಿಸಿದರು. ಚಿತ್ರವನ್ನು ಅವರು ತುಂಬಾ ಇಷ್ಟಪಟ್ಟರು ಮತ್ತು ಅವರು ತಮ್ಮ ಪತ್ನಿ ಸುಜಿಗೆ ಚಿತ್ರ ನೋಡುವಂತೆ ಶಿಫಾರಸು ಮಾಡಿದರು. ಬಳಿಕ ದಂಪತಿ ಚಿತ್ರ ವೀಕ್ಷಿಸಿದರು' ಎಂದು ರಾಜಮೌಳಿ ಬರೆದುಕೊಂಡಿದ್ದರು.
Mala Sinha: ಖ್ಯಾತ ಬಾಲಿವುಡ್ ತಾರೆ ಬಾತ್ರೂಂನಲ್ಲಿ ಸಿಕ್ಕ ಕಂತೆ ಕಂತೆ ಹಣ ವೇಶ್ಯಾವಾಟಿಕೆಯದ್ದು!
ನಂತರ ಇನ್ನೊಂದು ಟ್ವೀಟ್ನಲ್ಲಿ ತಮ್ಮ ಈ ಶ್ರೇಯಸ್ಸಿಗೆ ತಮ್ಮ ಜೀವನದಲ್ಲಿ ಬಂದ ಇಬ್ಬರು ಮಹಿಳೆಯರು ಕಾರಣ ಎಂದು ಬರೆದುಕೊಂಡಿದ್ದರು. ಒಬ್ಬರು ತಾಯಿ ಮತ್ತು ಇನ್ನೊಬ್ಬರು ಪತ್ನಿ. 'ಶಾಲಾ ಶಿಕ್ಷಣ ಮಕ್ಕಳಿಗೆ ನಿಲುಕದ್ದು ಎಂದು ನನ್ನ ತಾಯಿ ಹೇಳುತ್ತಿದ್ದರು. ಅವರು ಸದಾ ಕಾಮಿಕ್ಸ್ ಬುಕ್ (Comics books) ಓದುವಂತೆ, ಕಥೆ ಪುಸ್ತಕ ಓದುವಂತೆ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನನ್ನ ಸ್ವಂತಿಕೆಯನ್ನು ಅವರು ಉತ್ತೇಜಿಸುತ್ತಿದ್ದರು. ಇದೇ ನನಗೆ ಇಂಥದ್ದೊಂದು ಚಿತ್ರ ಮಾಡಲು ಪ್ರೋತ್ಸಾಹ ನೀಡಿತು. ಇನ್ನು ಪತ್ನಿಯ ಬಗ್ಗೆ ಹೇಳುವುದಾದರೆ, ಪತ್ನಿ ಕಾಸ್ಟ್ಯೂಮ್ ಡಿಸೈನರ್ (Constume Designer) ರಮಾ. ಆಕೆ ಬಟ್ಟೆ ಡಿಸೈನರ್ ಗಿಂತ ಹೆಚ್ಚಾಗಿ ಆಕೆ ನನ್ನ ಜೀವನದ ಡಿಸೈನರ್' ಎಂದು ರಾಜಮೌಳಿ ಹೇಳಿದ್ದರು. ಈ ಯಶಸ್ಸಿನ ಬೆನ್ನಲ್ಲೇ ಇದೀಗ ರಾಮ್ ಗೋಪಾಲ್ ವರ್ಮಾ ಅವರ ತಮಾಷೆಯ ಟ್ವೀಟ್ ವೈರಲ್ ಆಗಿದೆ.