ಲಾಕ್‌ಡೌನ್‌ನಿಂದಾಗಿ ಕುಡಿಯಲು ಮದ್ಯ ಸಿಗದೇ ಬಹಳಷ್ಟು ಮಂದಿ ಪರದಾಡುತ್ತಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಾನಸಿಕ ಅಸ್ವಸ್ಥರಾಗುತ್ತಿದ್ದಾರೆ. ಹಾಗಾಗಿ ಎಲ್ಲಾ ಕುಡುಕರ ಪರವಾಗಿ ಆರ್‌ಜಿವಿ ಬ್ಯಾಟಿಂಗ್ ಮಾಡಿದ್ದಾರೆ.
ಕೊರೋನಾ ವೈರಸ್‌ನಿಂದಾಗಿ ಇಡೀ ದೇಶ ಲಾಕ್‌ಡೌನ್ ಆಗಿದೆ. ಜನರು ಸುಖಾಸುಮ್ಮನೆ ಹೊರಗಡೆ ಓಡಾಡುವಂತಿಲ್ಲ. ಒಂದು ಕಡೆ ಜನ ಕೊರೋನಾದಿಂದ ಸಾಯುತ್ತಿದ್ದರೆ ಇನ್ನೊಂದು ಕಡೆ ಮದ್ಯ ಸಿಗದೇ ಜನ ಪರದಾಡುತ್ತಿದ್ದಾರೆ. ಇನ್ನು ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಕುಡಿಯಲು ಮದ್ಯ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.
365 ಲೈಟ್ ಮ್ಯಾನ್ ಕುಟುಂಬಕ್ಕೆ ರೇಷನ್ ವಿತರಣೆ ಮಾಡಿದ ರವಿವರ್ಮ!
ಯಾವಾಗಲೂ ವಿವಾದಗಳಿಂದ, ವಿಚಿತ್ರ ಹೇಳಿಕೆಗಳಿಂದ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕುಡುಕರ ಪರ ಬ್ಯಾಟಿಂಗ್ ಮಾಡಿದ್ದಾರೆ. 'ಮನೆಯಲ್ಲಿಯೇ ಕುಳಿತು ಬೇಜಾರಾದವರು ತಲೆಕೂದಲನ್ನು ಕೆದರಿಕೊಂಡು ಚಿಕ್ಕ ಮಕ್ಕಳಂತೆ ಅಳುತ್ತಿದ್ದಾರೆ. ಇನ್ನು ಕೆಲವರು ಮಾನಸಿಕ ಆಸ್ಪತ್ರೆಗಳನ್ನು ಸೇರುತ್ತಿದ್ದಾರೆ. ಫ್ರಸ್ಟ್ರೇಶನ್ ಜಾಸ್ತಿಯಾದವರು ಹೆಂಡತಿಗೆ ಹೊಡೆಯುತ್ತಿದ್ದಾರೆ. ಇದೆಲ್ಲದರಿಂದ ಮುಕ್ತಿ ಸಿಗಬೇಕೆಂದರೆ ನೀವು ದೊಡ್ಡ ಮನಸ್ಸು ಮಾಡಬೇಕು. ಮಮತಾ ಬ್ಯಾನರ್ಜಿ ರೀತಿ ದೊಡ್ಡ ಮನಸ್ಸು ಮಾಡಿ ಮದ್ಯದ ವ್ಯವಸ್ಥೆ ಮಾಡಬೇಕು. ಚಿಯರ್ಸ್! ಎಂದು ಟ್ವೀಟ್ ಮಾಡಿದ್ದಾರೆ.
ಮೋದಿಯ ಕರೆಗೆ ದೀಪ ಹಚ್ಚೋ ಬದಲು ಸಿಗರೇಟ್ ಹಚ್ಚಿದ RGV!
ಇದಕ್ಕೆ ತೆಲಂಗಾಣ ಶಾಸಕರೊಬ್ಬರು , ರಾಮಗಾರು, ನೀವು ಹೇರ್ ಕಟ್ ಬಗ್ಗೆ ಮಾತಾಡ್ತಾ ಇದೀರಾ ಅಲ್ವಾ? ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಇವರಿಬ್ಬರ ಮಾತುಕತೆ ವೈರಲ್ ಆಗಿದೆ.
ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಮನೆ ಮನೆಗೆ ಲಿಕ್ಕರ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸುಳ್ಳು ಸುದ್ದಿಯೊಂದು ಹರಿದಾಡಿತ್ತು.
