ಬಾಲಿವುಡ್ ಕ್ರೇಜಿ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ, ಶ್ರೀದೇವಿ ಬಗ್ಗೆ ಇದ್ದಿದ್ದ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಿರುತ್ತಾರೆ. ಇದು ಹೊಸದೇನಲ್ಲ. ಅವರು ಬರೆದಿರುವ ಪುಸ್ತಕದಲ್ಲಿ ಶ್ರೀದೇವಿ ಬಗ್ಗೆ ಪ್ರೀತಿ, ಇನ್‌ಫ್ಯಾಚುಯೇಶನ್ ಬಗ್ಗೆ ಅಲ್ಲಲ್ಲಿ ಉಲ್ಲೇಖಿಸಿದ್ದಾರೆ. 

ಶ್ರೀದೇವಿ ಬಗ್ಗೆ ಉಲ್ಲೇಖಿಸುವಾಗ ಒಂದು ಕಡೆ ಶ್ರೀದೇವಿ ಜೊತೆ ಮೊದಲ ಬಾರಿ ಕೆಲಸ ಮಾಡಿದ ಅನುಭವ ಹಾಗೂ ಬೋನಿ ಕಪೂರ್‌ನ ದ್ವೇಷಿಸುವ ಶುರು ಮಾಡಿದ್ದೇಕೆ ಎನ್ನುವುದನ್ನು ಇಂಟರೆಸ್ಟಿಂಗ್ ಆಗಿ ಬರೆದಿದ್ದಾರೆ. 

ಫೇಮಸ್ ಸಿಂಗರ್ ಸುನಿತಾಗೆ ಕೊರೋನಾ ಪಾಸಿಟಿವ್..? ಸುದ್ದಿ ಓದಿ ಗಾಯಕಿ ಅಪ್ಸೆಟ್

ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಾಗಿನಿಂದ ಆರ್‌ಜಿವಿಗೆ ಶ್ರೀದೇವಿ ಜೊತೆ ಕೆಲಸ ಮಾಡಬೇಕೆಂದು ಕನಸಿತ್ತಂತೆ. 1990 ರಲ್ಲಿ ಅವರ ಮೊದಲ ಸಿನಿಮಾ 'ಶಿವಾ' ದಲ್ಲಿ ಕನಸು ನನಸಾಯಿತು. ಈ ಸಿನಿಮಾ ಕೂಡಾ ಬಿಗ್ ಹಿಟ್ ಆಯಿತು. 

ಪ್ರೊಡ್ಯೂಸರ್ ಗೋಪಾಲ ರೆಡ್ಡಿ ಬಂದು,' ಶ್ರೀದೇವಿ ಜೊತೆ ಕೆಲಸ ಮಾಡಲು ಇಷ್ಟ ಇದೆಯಾ'? ಎಂದರು. 'ನಿನಗೇನಾದ್ರೂ ಹುಚ್ಚು ಹಿಡಿದಿದೆಯಾ? ನಾನವಳನ್ನು ನೋಡಿದ್ರೆ ಖಂಡಿತಾ ಸತ್ತೇ ಹೋಗುತ್ತೇನೆ'  ಎಂದು ಹೇಳಿರುವುದಾಗಿ ಆರ್‌ಜಿವಿ ಬರೆದುಕೊಂಡಿದ್ದಾರೆ. 

ಗೋಪಾಲ ರೆಡ್ಡಿ ನನ್ನನ್ನು ಶ್ರೀದೇವಿಗೆ ಭೇಟಿ ಮಾಡಿಸಿದರು. ತೆಲುಗು ಸಿನಿಮಾ, 'ಕ್ಷಣ ಕ್ಷಣಂ'  ಸ್ಕ್ರಿಪ್ಟನ್ನು ಶ್ರೀದೇವಿಗೆ ನರೇಟ್ ಮಾಡಿದೆ. 'ಕ್ಷಣ ಕ್ಷಣಂ' ಶ್ರೀದೇವಿಗೆ ನನ್ನ ಮೊದಲ ಪ್ರೇಮ ಪತ್ರ ಎಂದುಕೊಂಡರೂ ತಪ್ಪಾಗಲ್ಲ. ಅವಳ ಚಾರ್ಮ್, ಸೌಂದರ್ಯ, ಅಂಗಸೌಷ್ಠವ, ವ್ಯಕ್ತಿತ್ವ ಎಲ್ಲವೂ ನನಗೆ ಹುಚ್ಚು ಹಿಡಿಸಿತು' ಎಂದಿದ್ದಾರೆ. 

ತಪ್ಪು ಮಾಹಿತಿಗೆ ಟ್ರೋಲ್‌ ಆದ ಬಿಗ್‌ ಬಿ - ಟ್ವೀಟ್‌ ಡಿಲಿಟ್‌

ಶ್ರೀದೇವಿ ಸಿನಿ ಕರಿಯರ್‌ನಲ್ಲಿ ಉತ್ತುಂಗದಲ್ಲಿದ್ದಾಗ, ಬೋನಿ ಕಪೂರ್‌ರನ್ನು ಮದುವೆಯಾಗುತ್ತಾರೆ. ಇಡೀ ಪುರುಷ ಪ್ರಪಂಚವೇ ಆಕೆಯನ್ನು ಆರಾಧಿಸುತ್ತಿರುವಾಗ ದಿಢೀರನೇ ಮದುವೆಯಾಗಿ ಶಾಕ್ ಕೊಟ್ಟಳು. ಬೋನಿ ಕಪೂರ್ ಮನೆಯಲ್ಲಿ ಸಾಧಾರಣ ಗೃಹಿಣಿಯಾಗಿ ಟೀ ಕೊಡುವುದನ್ನು ನೋಡಿದ್ದೇನೆ. ದೇವಲೋಕದ ಅಪ್ಸರೆಯನ್ನು ಭುವಿಗೆ ತಂದು ಸಾಧಾರಣ ಗೃಹಿಣಿಯಂತೆ ನಡೆಸಿಕೊಂಡ ಬೋನಿ ಕಪೂರ್‌ನನ್ನು ನಾನು ದ್ವೇಷಿಸುತ್ತೇನೆ' ಎಂದಿದ್ದಾರೆ.