Asianet Suvarna News Asianet Suvarna News

'ಆಚಾರ್ಯ' ಹಿಂದಿಯಲ್ಲಿ ಯಾಕೆ ರಿಲೀಸ್ ಆಗ್ತಿಲ್ಲ; ಕಾರಣ ಬಿಚ್ಚಿಟ್ಟ ರಾಮ್ ಚರಣ್

ಆಚಾರ್ಯ ಸಿನಿಮಾ ಹಿಂದಿಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ ಅಲ್ಲದೆ ಈ ಬಗ್ಗೆ ಬೇಸರವೂ ಇಲ್ಲ ಎಂದು ರಾಮ್ ಚರಣ್ ಹೇಳಿದ್ದಾರೆ. 'ನಿರ್ದೇಶಕ ಕೊರಟಾಲ ಶಿವ ಸಿನಿಮ ಪ್ರಾರಂಭ ಮಾಡುವಾಗ ತುಂಬಾ ಸ್ಪಷ್ಟವಾಗಿ ಹೇಳಿದ್ದರು. ಇದು ದಕ್ಷಿಣ ಭಾರತದ ಸಿನಿಮಾ ಎಂದು ನಮಗೆ ಬೇಸರವು ಇಲ್ಲ' ಎಂದು ಹೇಳಿದ್ದಾರೆ.

ram charan response to why acharya not release in hindi sgk
Author
Bengaluru, First Published Apr 25, 2022, 11:47 AM IST

ತೆಲುಗು ಮೆಗಾಸ್ಟಾರ್ ಚಿರಂಜೀವಿ(Chiranjeevi) ಮತ್ತು ರಾಮ್ ಚರಣ್(Ram Charan) ನಟನೆಯ ಆಚಾರ್ಯ(Acharya) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಪ್ರಮೋಷನ್ ಕಾರ್ಯಕ್ರದಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಇತ್ತೀಚಿಗಷ್ಟೆ ಪ್ರಿ-ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಆಚಾರ್ಯ ತಂಡ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಅಭಿಮಾನಿಗಳ ಮುಂದೆ ಇರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಈ ಸಿನಿಮಾ ಬಿಡುಗಡೆ ತಡವಾಗಿದ್ದು ಸದ್ಯ ತೆರೆಗೆ ಬರಲು ತಯಾರಾಗಿದೆ.

ಅಂದಹಾಗೆ ಆಚಾರ್ಯ ಸಿನಿಮಾ ದಕ್ಷಿಣ ಭಾರತದದ ಭಾಷೆಗಳಲ್ಲಿ ಮಾತ್ರ ತೆರೆಗೆ ಬರುತ್ತಿದೆ. ಸದ್ಯ ದಕ್ಷಿಣ ಭಾರತದ ಸಿನಿಮಾಗಳು ಹಿಂದಿಯಲ್ಲಿ ಭರ್ಜರಿ ಸಕ್ಸಸ್ ಕಾಣುತ್ತಿವೆ. ಆರ್ ಆರ್ ಆರ್(RRR) ಮತ್ತು ಕೆಜಿಎಫ್-2(KGF2) ಸಿನಿಮಾ ಬಳಿಕ ಹಿಂದಿಯಲ್ಲಿ ದಕ್ಷಿಣ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಪ್ರೇಕ್ಷಕರು ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದಾರೆ. ಬಾಲಿವುಡ್ ನಲ್ಲಿ ದೊಡ್ಡ ಮಾರುಕಟ್ಟೆಯೂ ಇದೆ. ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳು ಬಾಲಿವುಡ್ ಉತ್ತಮ ಕಲೆಕ್ಷನ್ ಮಾಡುತ್ತಿವೆ. ಹೀಗಿದ್ದರೂ ಆಚಾರ್ಯ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ ಸಿನಿಮಾತಂಡ.

ಆರ್ ಆರ್ ಆರ್ ಸಿನಿಮಾ ಸೂಪರ್ ಸಕ್ಸಸ್ ನಲ್ಲಿರುವ ರಾಮ್ ಚರಣ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಹಿಂದಿಯಲ್ಲಿ ಆರ್ ಆರ್ ಆರ್ ದಾಖಲೆಯ ಕಲೆಕ್ಷನ್ ಮಾಡಿದೆ. 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆದರೆ ಆಚಾರ್ಯ ಸಿನಿಮಾನ್ನು ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ರಾಮ್ ಚರಣ್ ಸ್ಪಷ್ಟನೆ ನೀಡಿದ್ದಾರೆ. ಹಿಂದಿಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ ಅಲ್ಲದೆ ಈ ಬಗ್ಗೆ ಬೇಸರವೂ ಇಲ್ಲ ಎಂದು ಹೇಳಿದ್ದಾರೆ.

ಸೈನಿಕರ ಜತೆ ಜ್ಯೂನಿಯರ್ ಮೆಗಾ ಸ್ಟಾರ್ ರಾಮ್ ಚರಣ್!

'ನಿರ್ದೇಶಕ ಕೊರಟಾಲ ಶಿವ ಸಿನಿಮ ಪ್ರಾರಂಭ ಮಾಡುವಾಗ ತುಂಬಾ ಸ್ಪಷ್ಟವಾಗಿ ಹೇಳಿದ್ದರು. ಇದು ದಕ್ಷಿಣ ಭಾರತದ ಸಿನಿಮಾ ಎಂದು. ಸದ್ಯ ಸಮಯವಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಇಷ್ಪಡುವಿಲ್ಲ. ಈ ಬಗ್ಗೆ ನಮಗೆ ಬೇಸರವು ಇಲ್ಲ' ಎಂದು ಹೇಳಿದ್ದಾರೆ.

'ನಾನು ಮತ್ತು ಕೊರಟಾಲ ಶಿವ ಒಟ್ಟಿಗೆ ಕೆಲಸ ಮಾಡಿಲ್ಲವೆಂದರೂ ವರ್ಷಗಳ ಬಳಿಕ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ನಾನು ಆಚಾರ್ಯ ಸಿನಿಮಾಗೆ ನಿರ್ಮಾಪಕನಾಗಿದ್ದೆ. ಬಳಿಕ ಗೊತ್ತಾಯಿತು ಆಚಾರ್ಯದಲ್ಲಿ ನಟನೆ ಮಾಡಬೇಕೆಂದು. ನಾನು ಆಗ ಆರ್ ಆರ್ ಆರ್ ಚಿತ್ರದಲ್ಲಿ ನಟಿಸುತ್ತಿದ್ದೆ. ಒಂದು ದಿನ ಶಿವ ಅವರು ಬಂದು ನಿಮಗೆ ಆಚಾರ್ಯ ಸಿನಿಮಾದಲ್ಲಿ ಒಂದು ಪಾತ್ರವಿದೆ ಎಂದರು. ಪಾತ್ರದ ಬಗ್ಗೆ ಕೇಳಿ ತುಂಬಾ ಇಂಪ್ರೆಸ್ ಆದೆ. ಕೊರಟಾಲ ಶಿವ ಅವರಿಗೆ ಧನ್ಯವಾದಗಳು' ಎಂದು ಹೇಳಿದರು.

ಚಿರಂಜೀವಿಗೆ ನಿರ್ದೇಶನ ಮಾಡುವ ಅವಕಾಶ ಕಳೆದುಕೊಂಡ ಬೇಸರ ಇನ್ನೂ ಇದೆ; ಉಪೇಂದ್ರ

ಆಚಾರ್ಯ ಸಿನಿಮಾ ದಕ್ಷಿಣ ಭಾರತದ ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ನಿರ್ಮಾಣದ ಜೊತೆಗೆ ನಟನೆ ಮಾಡಿದ್ದಾರೆ. ಇನ್ನು ರಾಮ್ ಚರಣ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಅಗರ್ವಾಲ್ ನಟಿಸಿದ್ದರು. ಆದರೆ ಕಾಜಲ್ ಜೊತೆಗಿನ ಮುನಿಸಿನ ಕಾರಣದಿಂದ ಚಿತ್ರದಿಂದ ಕಾಜಲ್ ಪಾತ್ರ ತೆಗೆದುಹಾಲಾಗಿದೆ ಎನ್ನಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಕಾಜಲ್ ಅವರ ಯಾವುದೇ ದೃಶ್ಯ ಇಲ್ಲದಿರುವುದು ಮತ್ತು ಪ್ರಿ ರಿಲೀಸ್ ಈವೆಂಟ್ ನಲ್ಲಿ ಕಾಜಲ್ ಬಗ್ಗೆ ಯಾರು ಮಾತನಾಡದಿರುವುದು ಪಾತ್ರಕ್ಕೆ ಕತ್ತರಿ ಹಾಕಿದ್ದಾರೆ ಎನ್ನುವ ವದಂತಿಗೆ ಮತ್ತಷ್ಟು ಪುಷ್ಟಿನೀಡಿದೆ. ಈ ಬಗ್ಗೆ ಕಾಜಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಆಚಾರ್ಯ ಸಿನಿಮಾ ಏಪ್ರಿಲ್ 29ರಂದು ತೆರೆಗೆ ಬರುತ್ತಿದ್ದು ರಾಮ್ ಚರಣ್ ಮತ್ತು ಚಿರಂಜೀವಿ ಅವರನ್ನು ನೋಡಲು ಕಾತರರಾಗಿದ್ದಾರೆ.

Follow Us:
Download App:
  • android
  • ios