ಡಿಯರೆಸ್ಟ್ ಸಮಂತಾ... ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ: ರಾಮ್ ಚರಣ್ ಪ್ರೀತಿಯ ವಿಶ್
ಡಿಯರೆಸ್ಟ್ ಸಮಂತಾ... ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದು ತೆಲುಗು ಸ್ಟಾರ್ ರಾಮ್ ಚರಣ್ ಪ್ರೀತಿಯ ವಿಶ್ ಮಾಡಿದ್ದಾರೆ.
ಸೌತ್ ಸಿನಿಮಾರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. 36ನೇ ವಸಂತಕ್ಕೆ ಕಾಲಿಟ್ಟ ನಟಿ ಸಮಂತಾ ಅವರಿಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಚಿತ್ರರಂಗದ ಅನೇಕ ಗಣ್ಯರು ಸಮಂತಾ ಅವರಿಗೆ ಪ್ರೀತಿಯ ವಿಶ್ ಮಾಡಿದ್ದಾರೆ. ಸಮಂತಾ ಅವರಿಗೆ ಸಿನಿಮಾರಂಗದಲ್ಲಿ ಅನೇಕ ಸ್ನೇಹಿತರಿದ್ದಾರೆ. ಅದರಲ್ಲಿ ತೆಲುಗು ಸ್ಟಾರ್ ರಾಮ್ ಚರಣ್ ಕೂಡ ಒಬ್ಬರು.
ಸಮಂತಾ ಅವರ ಹುಟ್ಟುಹಬ್ಬಕ್ಕೆ ರಾಮ್ ಕೂಡ ಪ್ರೀತಿಯ ವಿಶ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಫ್ಯಾಮಿಲಿ ಮ್ಯಾನ್-2 ನಾಯಕಿಗೆ ಆರ್ ಆರ್ ಆರ್ ಸ್ಟಾರ್ ಶುಭಾಶಯ ತಿಳಿಸಿದ್ದಾರೆ. ಆತ್ಮೀಯ ಸಮಂತಾ ಎಂದು ಟ್ವೀಟ್ ಮಾಡಿರುವ ರಾಮ್ ಚರಣ್ ನಿಮ್ಮ ಬಗ್ಗೆ ಅತೀವ ಹೆಮ್ಮೆ ಇದೆ ಎಂದು ಹೇಳಿದ್ದಾರೆ. 'ಆತ್ಮೀಯ ಸಮಂತಾ, ನಿಮ್ಮ ಬಗ್ಗೆ ನಿಮ್ಮ ಅದ್ಭುತ ಕೆಲಸದ ಬಗ್ಗೆ ಅತೀವ ಹೆಮ್ಮೆ ಇದೆ. ನಿಮಗೆ ಉತ್ತಮ ಆರೋಗ್ಯ ಮತ್ತು ಶಯಸ್ಸು ಸಿಗಲಿ ಎಂದು ಹಾರೈಸುತ್ತೇನೆ, ಜನ್ಮದಿನದ ಶುಭಾಶಯಗಳು. ಸಿಟಾಡೆಲ್‌ಗೆ ಶುಭವಾಗಲಿ' ಎಂದು ಹೇಳಿದ್ದಾರೆ.
ಮಂತಾ SSLC ಮಾರ್ಕ್ಸ್‌ಕಾರ್ಡ್ ಮತ್ತೆ ವೈರಲ್; ಸ್ಟಾರ್ ನಟಿ ಹೇಳಿದ್ದೇನು?
ಸಮಂತಾ ಮತ್ತು ರಾಮ್ ಚರಣ್ ಇಬ್ಬರೂ ಸೂಪರ್ ಹಿಟ್ ರಂಗಸ್ಥಳಂ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಹಳ್ಳಿಯ ಬ್ಯಾಕ್‌ಡ್ರಾಪ‌್‌ನಲ್ಲಿ ಬಂದ ರಂಗಸ್ಥಳಂ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿತ್ತು. ಸ್ಯಾಮ್ ಮತ್ತು ರಾಮ್ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಿನಿಮಾ ಬಳಿಕ ಮತ್ತೆ ಇಬ್ಬರೂ ಒಟ್ಟಿಗೆ ನಟಿಸಿಲ್ಲ. ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಕನಸು. ಅಭಿಮಾನಿಗಳ ಕನಸು ನನಸಾಗುತ್ತಾ ಕಾದು ನೋಡಬೇಕಿದೆ.
16ನೇ ವಯಸ್ಸಿನಲ್ಲಿ ಸಮಂತಾ ಹೇಗಿದ್ದರು ನೋಡಿದ್ರಾ? ಆಗಲೇ ಫೇಮಸ್ ಈ ಸ್ಟಾರ್ ನಟಿ!
ಸಮಂತಾ ಸದ್ಯ ಸಿಟಾಡೆಲ್ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿಟಾಡೆಲ್ ಹಿಂದಿ ವರ್ಷನ್‌ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ವೆಬ್ ಸೀರಿಸ್‌ಗೆ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವರುಣ್ ಧವನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾ ಜೊತೆಗೆ ಸಮಂತಾ ತೆಲುಗಿನಲ್ಲಿ ಖುಷಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಸಮಂತಾ ನಟಿಸುತ್ತಿದ್ದಾರೆ. ಕೊನೆಯದಾಗಿ ಸಮಂತಾ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ.