ಮುಂಬೈ (ಮಾ. 02): ಮಾದಕ ತೆರೆ ರಾಖಿ ಸಾವಂತ್ ಬಾಯಿ ಬಿಟ್ಟರೆ ಸಾಕು ಏನಾದರೊಂದು ಬಾಂಬ್ ಹಾಕುವುದು ಗ್ಯಾರಂಟಿ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಈಗ ತಮ್ಮ ಹೇಳಿಕೆ ಮೂಲಕ ಪಾಕ್ ಗೆ ಬಾಂಬ್ ಹಾಕಿದ್ದಾರೆ. 

ದರ್ಶನ್- ಸುದೀಪ್ ಮುಖಾಮುಖಿಗೆ ಸಿದ್ಧವಾಗಿದೆ ವೇದಿಕೆ!

ಪುಲ್ವಾಮಾ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿರುವುದರ ಬಗ್ಗೆ ಪ್ರತಿಕ್ರಿಯಿಸುತ್ತಾ "ನಾನೇ 50-100 ಕೆಜಿ ಬಾಂಬ್ ತೆಗೆದುಕೊಂಡು ಹೋಗಿ ಪಾಕ್ ಬಾರ್ಡರಿನಲ್ಲಿ ಹಾಕಿ ಬರುತ್ತೇನೆ" ಎಂದಿದ್ದಾರೆ.

"ಪಾಕಿಸ್ತಾನದ ವಿರುದ್ಧ ಫೈಟ್ ಮಾಡಲು ನಾನು ಸಿದ್ಧ. ದೇಶಕ್ಕಾಗಿ ಸಾಯಲು ಸಿದ್ಧ. ಅಗತ್ಯ ಬಿದ್ದರೆ  ಶತ್ರುಗಳ ಪ್ರದೇಶದ ಮೇಲೆ 50-100 ಬಾಂಬ್ ಗಳನ್ನು ನಾನೇ ಹಾಕಲು ರೆಡಿ" ಎಂದು ಹೇಳಿದ್ದಾರೆ. 

'ಹುಳಿ ಮಾವಿನಕಾಯಿ ತಿನ್ನುವುದಕ್ಕಾಗಿಯೇ ಇದನ್ನು ಒಪ್ಕೊಂಡ್ರಂತೆ ದೀಪಿಕಾ’!

ಪುಲ್ವಾಮಾ ದಾಳಿ ನಂತರ ಮೋದಿ ತೆಗೆದುಕೊಂಡ ದಿಟ್ಟ ಕ್ರಮಗಳನ್ನು ಶ್ಲಾಘಿಸಿದ್ದಾರೆ. ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಪುಲ್ವಾಮಾ ದಾಳಿಗೆ ಮೋದಿ ಜಿ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.