ಬಾಲಿವುಡ್ ನಟಿ ರಾಖಿ ಸಾವಂತ್ ಹೊಸ ಅವತಾರ | ಮೈಮೇಲೆ ಪಾಕ್ ಧ್ವಜ ಎಳೆದುಕೊಂಡು ವಿವಾದ | ಏನಿದು ರಾಖಿ ಹೊಸ ವಿವಾದ?
ಬಾಲಿವುಡ್ ನಟಿ ರಾಖಿ ಸಾವಂತ್ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಸರಾದವರು. ಆಗಾಗ ಸೆಕ್ಸಿ ಪೋಸ್ ಕೊಡುತ್ತಾ ಹುಡುಗರ ನಿದ್ದೆಗೆಡಿಸಿದರೆ ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೀಡಾಗುತ್ತಾರೆ. ಈ ಬಾರಿ ಸ್ವಲ್ಪ ಬೇರೆ ರೀತಿಯಲ್ಲಿ ವಿವಾದವನ್ನು ಎಳೆದುಕೊಂಡಿದ್ದಾರೆ.
ಗೋಲ್ಡ್ ಆ್ಯಂಡ್ ರೆಡ್ ಕಲರ್ ಸೆಕ್ಸಿ ಕಾಸ್ಟ್ಯೂಮ್ ನಲ್ಲಿ ನದಿ ಪಕ್ಕ ನಿಂತು ಪೋಸ್ ನೀಡಿದ್ದಾರೆ. ಇಷ್ಟೇ ಆಗಿದ್ದರೆ ಸುದ್ದಿಯೇ ಆಗುತ್ತಿರಲಿಲ್ಲ. ಪಾಕಿಸ್ತಾನಿ ಧ್ವಜವನ್ನು ಮೈಮೇಲೆ ಹಾಕಿಕೊಂಡು ಪೋಸ್ ನೀಡಿದ್ದಾರೆ. ಇದು ಸೋಷಿಯಲ್ ಮೀಡಿಯಾ ಆಕ್ರೋಶಕ್ಕೆ ಕಾರಣವಾಗಿದೆ.
ಐ ಲವ್ ಮೈ ಇಂಡಿಯಾ. ಇದು ನಾನು ಮಾಡುತ್ತಿರುವ ಮುಂದಿನ ಚಿತ್ರ ಧಾರಾ 37 ನ ಪಾತ್ರಕ್ಕಾಗಿ ಈ ಫೋಟೋಗೆ ಪೋಸ್ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ರಾಖಿ ಸಾವಂತ್ 370 ಎನ್ನುವ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಇದು ಕಾಶ್ಮೀರಿ ಪಂಡಿತರನ್ನು ಆಧಾರವಾಗಿಟ್ಟುಕೊಂಡು ಮಾಡುತ್ತಿರುವ ಸಿನಿಮಾ. ಮಕ್ಕಳನ್ನು ಜಿಹಾದಿಗಳಾಗಿ ಪರಿವರ್ತಿಸುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸಿಡಿದು ನಿಲ್ಲುವ ಪಾಕಿಸ್ತಾನಿ ಹುಡುಗಿ ಪಾತ್ರದಲ್ಲಿ ನಟಿಸಲಿದ್ದಾರೆ.
