ರಾಖಿ ಸಾವಂತ್ ದೂರಿನ ಬೆನ್ನಲ್ಲೇ ಪತಿ ಆದಿಲ್ ಖಾನ್ ಪೊಲೀಸರ ವಶಕ್ಕೆ

ರಾಖಿ ಸಾವಂತ್ ದೂರಿನ ಬೆನ್ನಲ್ಲೇ ಪತಿ ಆದಿಲ್ ಖಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.  

Rakhi Sawant husband Adil Khan Durrani arrested after her police complaint sgk

ಪತಿ ವಿರುದ್ಧ ರಾಖಿ ಸಾವಂತ್ ದೂರು ದಾಖಲಿಸಿದ ಬೆನ್ನಲ್ಲೇ ಆದಿಲ್ ಖಾನ್‌ನನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಓಶಿವಾರಾ ಪೊಲೀಸರು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ನಟಿ ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ತನ್ನ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದರು. ತಾಯಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತ ಆಸ್ಪತ್ರೆ ದಾಖಲಾಗಿದ್ದರು. ತಾಯಿಯನ್ನು ನೋಡಿಕೊಳ್ಳುವಂತೆ ಆದಿಲ್‌ಗೆ ಹೇಳಿದ್ದೆ, ಆದರೆ ಸರಿಯಾದ ಸಮಯಕ್ಕೆ ತಾಯಿ ಚಿಕಿತ್ಸೆಗೆ ಹಣ ನೀಡಿಲ್ಲ, ತನ್ನ ತಾಯಿ ಸಾವಿಗೆ ಆದಿಲ್ ಕಾರಣ ಎಂದು ಆರೋಪಿಸಿದ್ದರು. 

ಇಂದು (ಫೆಬ್ರವರಿ 27) ಆದಿಲ್ ಬಂಧನದ ಕುರಿತು ಅಪ್‌ಡೇಟ್ ಹಂಚಿಕೊಂಡ ರಾಖಿ, ಈ ವಿಷಯವನ್ನು ತಿಳಿಸಲು ತಾನು ಕೂಡ ಪೊಲೀಸ್ ಠಾಣೆದಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ. ರಾಖಿ ಸಾವಂತ್‌ನನ್ನು ಭೇಟಿಯಾಗಲು ಮನೆಗೆ ಬಂದಾಗ ಆದಿಲ್ ನನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಖಿ ಸಾವಂತ್, ಇದು ನಾಟಕವಲ್ಲ, ಅವನು ನನ್ನ ಜೀವನವನ್ನು ಹಾಳು ಮಾಡಿದ್ದಾನೆ. ಆತ ನನ್ನನ್ನು ಹೊಡೆದು, ನನ್ನಹಣವನ್ನೆಲ್ಲ ಕದ್ದಿದ್ದಾನೆ. ನನಗೆ ಮೋಸ ಮಾಡಿದ್ದಾನೆ. ಈ ಬಗ್ಗೆ ಎಲ್ಲಾ ಸಾಕ್ಷ್ಯಗಳನ್ನು ನೀಡಿದ್ದೇನೆ' ಎಂದು ರಾಖಿ ಬಹಿರಂಗ ಪಡಿಸಿದರು. 

ಅವರಿಬ್ಬರೂ ದೈಹಿಕ ಸಂಪರ್ಕ ಹೊಂದಿದ್ದಾರೆ, ನನ್ನ ಬಳಿ ಅವರ ಹೋಟೆಲ್ ಬಿಲ್‌ಗಳಿವೆ; ಪತಿ ವಿರುದ್ಧ ರಾಖಿ ಸಾವಂತ್ ಆರೋಪ

ಆದಿಲ್‌ಗೆ ಅನೈತಿಕ ಸಂಬಂಧವಿದೆ. ಹಾಗಾಗಿ ತನ್ನನ್ನು ದೂರ ತಳ್ಳಿದ್ದಾನೆ ಎಂದು ರಾಖಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಗರ್ಲ್‌ಫ್ರೆಂಡ್ ಗಾಗಿ ಆದಿಲ್ ನನಗೆ ಮೋಸ ಮಾಡಿದ ಎಂದು ರಾಖಿ ಕಣ್ಣೀರು ಹಾಕಿದ್ದರು. ಆದಿಲ್ ತನ್ನನ್ನು ಮಾನಸಿಕವಾಗಿ, ದೈಹಿಕವಾಗಿ ಬಳಸಿಕೊಂಡ ಎಂದು 44 ವರ್ಷದ ನಟಿ ರಾಖಿ ಸಾವಂತ್ ಆರೋಪಿಸಿದ್ದರು. 'ಆದಿಲ್ ನನ್ನನ್ನು  ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಆದಿಲ್ ತನ್ನ ಎಲ್ಲಾ ಹಣವನ್ನು ಬಳಸಿಕೊಂಡಿದ್ದಾನೆ, ಮೈಸೂರಿನಲ್ಲಿ ಆತನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ ಮದುವೆ ಬಳಿಕ ಗೊತ್ತಾಯಿತು' ಎಂದು ರಾಖಿ ಸಾವಂತ್ ಕಿಡಿ ಕಾರಿದ್ದಾರೆ. 'ಅವನು ಬಾಲಿವುಡ್‌ಗೆ ಬರಲು ನನ್ನನ್ನು ಬಳಸಿಕೊಂಡ, ಬಾಲಿವುಡ್‌ನಲ್ಲಿ ಸ್ಟಾರ್ ಆಗಲು ನನ್ನನ್ನು ಏಣಿಯಾಗಿ ಮಾಡಿಕೊಂಡ. ನನ್ನಲ್ಲಿದ್ದ ಹಣವನ್ನೆಲ್ಲ ತೆಗೆದುಕೊಂಡು ಹೋದ. ನನ್ನ ಬಳಿ ಎಲ್ಲ ಪುರಾವೆಗಳಿವೆ. ಅವನು ನನ್ನನ್ನು ಭಾವನಾತ್ಮಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಬಳಸಿಕೊಂಡ. ನಾನು ಮದುವೆ ನಂತರ ಚಿತ್ರಹಿಂಸೆ ಎದುರಿಸಿದ್ದೇನೆ' ಎಂದು ಹೇಳಿಕೊಂಡಿದ್ದರು.

 
 
 
 
 
 
 
 
 
 
 
 
 
 
 

A post shared by @varindertchawla


ನಾನು ಮತ್ತೊಬ್ಬ ಸುಶಾಂತ್ ಸಿಂಗ್ ಆಗಲ್ಲ; ಪತ್ನಿ ರಾಖಿ ಸಾವಂತ್ ಆರೋಪಗಳಿಗೆ ಸಿಡಿದೆದ್ದ ಆದಿಲ್ ಖಾನ್

ಪತಿ ವಿರುದ್ಧ ಇಷ್ಟೆಲ್ಲ ಆರೋಪ ಮಾಡಿದ ಬಳಿಕ ಆದಿಲ್ ಜೊತೆ ಕುಳಿತು ಡಿನ್ನರ್ ಮಾಡಿದ್ದರು. ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡಿದ ವಿಡಿಯೋ ವೈರಲ್ ಆಗಿತ್ತು. ರಾಖಿ ಸಾವಂತ್ ಮತ್ತು ಆದಿಲ್ ನಿಜಕ್ಕೂ ಕಿತ್ತಾಡಿಕೊಂಡಿದ್ದಾರಾ? ಇಬ್ಬರೂ ದೂರ ದೂರ ಆಗಿದ್ದಾರಾ? ಅಥವಾ ಪ್ರಚಾರಕ್ಕಾಗಿ ಎಲ್ಲರನ್ನೂ ದಾರಿ ತಪ್ಪಿಸುತ್ತಿದ್ದಾರಾ ಎನ್ನುವುದು ಗೊತ್ತಾಗಬೇಕಿದೆ.   

Latest Videos
Follow Us:
Download App:
  • android
  • ios