ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ಅಣ್ಣನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಾಗಮ್ಮ್ ಚಾಮರಾಜನಗರದ ದೊಡ್ಡಗಾಜನೂರಿನಲ್ಲಿ ವಾಸವಾಗಿದ್ದಾರೆ. ಇಂದು ಡಾ.ರಾಜ್ ಅವರ ಜನ್ಮದಿನ. ಈ ವಿಶೇಷ ದಿನದಂದು ಅಣ್ಣನ್ನು ನೆನೆದು ಯಾಕಣ್ಣ ಬಿಟ್ಟುಹೋದೆ ಎಂದು ಕಣ್ಣೀರು ಹಾಕಿದ್ದಾರೆ.

ಏಪ್ರಿಲ್ 24 ಕನ್ನಡಿಗರಿಗೆ ವಿಶೇಷವಾದ ದಿನ. ಅದರಲ್ಲೂ ಡಾ.ರಾಜ್ ಕುಮಾರ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಇಂದು (ಏಪ್ರಿಲ್ 24) ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟಿದ ದಿನ(Dr Rajkumar Birthday). ಅಭಿಮಾನಿಗಳು 93ನೇ ವರ್ಷದ ಜನ್ಮದಿನಾಚರಣೆಯ ಸಡಗರದಲ್ಲಿದ್ದಾರೆ. ಪ್ರತೀವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಣ್ಣಾವ್ರು ಕನ್ನಡ ಚಿತ್ರರಂಗದ ದೂರ ಆಗಿದ್ದರು ಅವರ ನೆನಪು ಮಾತ್ರ ಇಂದಿಗೂ ಜೀವಂತವಾಗಿದೆ. ಡಾ.ರಾಜ್ ಕುಮಾರ್ ಮೇಲಿನ ಅಭಿಮಾನ ಕೊಂಚವೂ ಕಡಿಮೆಯಾಗಿಲ್ಲ.

ಇಂದು ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ವಿಶ್ ಮಾಡಿ ಅಣ್ಣಾವ್ರ ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಡಾ.ರಾಜ್ ಕುಮಾರ್ ಸಹೋದರಿ ನಾಗಮ್ಮ ಅಣ್ಣನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಾಗಮ್ಮ್ ಚಾಮರಾಜನಗರದ ದೊಡ್ಡಗಾಜನೂರಿನಲ್ಲಿ ವಾಸವಾಗಿದ್ದಾರೆ. ಇಂದು ಡಾ.ರಾಜ್ ಅವರ ಜನ್ಮದಿನ. ಈ ವಿಶೇಷ ದಿನದಂದು ಅಣ್ಣನ್ನು ನೆನೆದು ಯಾಕಣ್ಣ ಬಿಟ್ಟುಹೋದೆ ಎಂದು ಕಣ್ಣೀರು ಹಾಕಿದ್ದಾರೆ.

Dr Rajkumar ಚಿತ್ರಗಳಿಗೆ ಕುಂಚ ಸ್ಪರ್ಶ: ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಭಿಮಾನಿಯ ಉಡುಗೊರೆ

ನಾಗಮ್ಮ ಅವರಿಗೆ ತುಂಬಾ ವಯಸ್ಸಾಗಿದೆ. ಮಾಧ್ಯಮದ ಜೊತೆ ಮಾತನಾಡಿದ ರಾಜ್ ಸಹೋದರಿ, 'ಯಾಕಣ್ಣ ನನ್ನನ್ನು ಬಿಟ್ಟು ಹೊರಟು ಹೋದೆ. ಅಣ್ಣ-ತಮ್ಮ ಇಬ್ಬರನ್ನು ಕಳುಹಿಸಿ ಇನ್ನು ಇದೀನಿ. ಅವರೇನು ಹೋಗಿ ಸೇರಿದರ ಚೆನ್ನಾಗಿ ಇದ್ದಾರೆ. ನಾನ್ ಇಲ್ಲೇ ಬಿದ್ದಿದ್ದೀನಿ. ಆದಷ್ಟು ಬೇಗ ನನ್ನನ್ನು ಕರ್ಕೊಂಡ್ರೆ ಸಾಕು. ನನ್ನೊಬ್ಬಳನ್ನೇ ಬಿಟ್ಟು ಅವರು ಹೇಗೆ ಇರುತ್ತಾರೆ. ನನ್ನನ್ನು ಕರ್ಕೋಬೇಕು. ಎಲ್ಲರೂ ಒಟ್ಟಿಗೆ ಇರಬೇಕು. ವರ್ಷ ವರ್ಷ ಶುಭಾಶಯ ಹೇಳುತ್ತೀನಿ' ಎಂದು ಹೇಳಿದ್ದಾರೆ.

ಕನ್ನಡದ ತಲೆಮಾರುಗಳನ್ನು ರೂಪಿಸಿದ ರಾಜ್‌ ಜೀವನಯಾತ್ರೆಯಲ್ಲೇ ಅದ್ಭುತ ಸಂದೇಶಗಳಿವೆ

ಇಂದು ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ ಇಂದು ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಅಭಿಮಾನಿಗಳಿಗೆ ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡಿರಲಿಲ್ಲ. ಸಮಾಧಿ ಬಳಿ ಭೇಟಿಗೆ ಅನುಮತಿ ಇರಲಿಲ್ಲ. ಹಾಗಾಗಿ ಮನೆಯಲ್ಲೇ ವರನಟನನ್ನು ನೆನೆದು ಅಭಿಮಾನಿಗಳು ಧನ್ಯರಾಗಿದ್ದರು. ಆದರೆ ಈ ವರ್ಷ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಭಿಮಾನಿಗಳು ರಾಜ್ ಕುಮಾರ್ ಅವರನ್ನು ಸ್ಮರಿಸುತ್ತಿದ್ದಾರೆ. ಕುಟುಂಬದವರು ಸಹ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ರಾಜ್ಯದ ಹಲವು ಕಡೆ ಸಮಾಜಮುಖಿ ಕಾರ್ಯಗಳನ್ನು ಅಭಿಮಾನಿಗಳನ್ನು ಹಮ್ಮಿಕೊಂಡಿದ್ದಾರೆ. ರಕ್ತದಾನ, ನೇತ್ರದಾನ ನೋಂದಣಿ, ಅನ್ನ ದಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.